ಮಡಿಕೇರಿ ಜ, ೧೫ : ಬಾಳೆಲೆಯ ಪೋಡಮಾಡ ಉತ್ತಪ್ಪ ಸಾವಿನ ಪ್ರಕರಣದಲ್ಲಿ ಪರಿಶಿಷ್ಟ ಜಾತಿಯ ಅಮಾಯಕ ಯುವಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಲಾಯಿತು. ಒಂದು ತಿಂಗಳೊಳಗೆ ಸೂಕ್ತ ನ್ಯಾಯ ದೊರಕದಿದ್ದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾ ಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. ನೂರಾರೂ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನÀಕಾರರು ಪ್ರಕರಣವನ್ನು ವಿರೋಧಿಸಿ ಘೋಷಣೆ ಕೂಗಿ, ಸೂಕ್ತ ನ್ಯಾಯಕ್ಕೆ ಒತ್ತಾಯಿಸಿದರು.

(ಮೊದಲ ಪುಟದಿಂದ) ದ.ಸಂ.ಸ ಜಿಲ್ಲಾ ಸಂಚಾಲಕ ಹೆಚ್.ಎಲ್ ದಿವಾಕರ್ ಮಾತನಾಡಿ, ನವೆಂಬರ್ ೧೮ ರಂದು ಕಾರು ಅಪಘಾತವನ್ನೇ ಕಾರಣವಾಗಿರಿಸಿ ಕೊಂಡು ಬಾಳೆಲೆಯ ಸಂತೋಷ್ ಮತ್ತು ಕಾಮರಾಜ್ ಎಂಬ ಯುವಕರ ಮೇಲೆ ಪೋಡಮಾಡ ಉತ್ತಪ್ಪ ಅವರು ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಜೀವಬೆದರಿಕೆ ಹಿನ್ನೆಲೆ ಮೂವರು ಯುವಕರು ನಾಪತ್ತೆಯಾಗಿದ್ದು, ಇದುವರೆಗೂ ಎಲ್ಲಿದ್ದಾರೆ ಎಂಬ ಮಾಹಿತಿ ದೊರೆತಿಲ್ಲ. ಇದರಿಂದ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಉತ್ತಪ್ಪ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ೨೮ ದಿನದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆಫಲಕಾರಿಯಾಗದೆ ಉತ್ತಪ್ಪ ಅವರು ಮೃತಪಟ್ಟಿದ್ದಾರೆ. ಆದರೇ, ಅವರ ಮಗ ಇದನ್ನು ಕೊಲೆ ಎಂದು ದೂರು ಸಲ್ಲಿಸಿದ್ದಾರೆ. ಪೊಲೀಸರು ಕೂಡ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.ಬಾಳೆಲೆಯಲ್ಲಿ ಪರಿಶಿಷ್ಟ ಜಾತಿ ಅವರಿಗೆ ಸೇರಿದ ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿ ದೌರ್ಜನ್ಯ ಮಾಡಲಾಗಿದೆ ಎಂದು ದೂರಿದ ಅವರು, ಘಟನೆ ನಡೆದ ದಿನದ ಸಿಸಿ ಕ್ಯಾಮರ ದೃಶ್ಯ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಆಧಾರದಲ್ಲಿ ತನಿಖೆ ನಡೆದು ನೈಜ ಕಾರಣ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು. ಮಡಿಕೇರಿ ತಾಲೂಕು ದೂರಿದ ಅವರು, ಘಟನೆ ನಡೆದ ದಿನದ ಸಿಸಿ ಕ್ಯಾಮರ ದೃಶ್ಯ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಆಧಾರದಲ್ಲಿ ತನಿಖೆ ನಡೆದು ನೈಜ ಕಾರಣ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು. ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಎ.ಪಿ, ಜಿಲ್ಲಾ ಸಂಘಟನಾ ಸಂಚಾಲಕ ಗಣೇಶ್ ಹೆಚ್, ಸಂಪಾಜೆ ಹೋಬಳಿ ಸಂಚಾಲಕ ಶಶಿಕುಮಾರ್, ಮೂರ್ನಾಡು ನಗರ ಸಂಚಾಲಕ ರಘು, ಸಂತ್ರಸ್ತೆ ಸರೋಜ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.