ಮಡಿಕೇರಿ, ಜ. ೧೫: ಸಂಕ್ರಾAತಿ ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯೊಂದಿಗೆ ಹಲವೆಡೆ ಅನ್ನದಾನ ನಡೆಯಿತು. ಮನೆಮನೆಗಳಲ್ಲಿ ಸಂಕ್ರಾAತಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಸಂಕ್ರಾAತಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು. ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಸಮಯದಲ್ಲಿ ಸ್ಥಳೀಯ ದೇವಾಲಯಗಳಲ್ಲಿ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾAತಿ ಹಾಗೂ ಮಕರ ಜ್ಯೋತಿಯ ಪ್ರಯುಕ್ತ ನಿನ್ನೆ ಸಂಜೆ ವಿಶೇಷ ಪೂಜೆಗಳು ನಡೆಯಿತು.

ನಂತರ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಯವರ ಪೌರೋಹಿತ್ಯದಲ್ಲಿ ಅರ್ಚನೆ, ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಪೂಜೆ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಪಟ್ಟಣದ ತತ್ವಮಸಿ ತಂಡ ನಿರ್ವಹಿಸಿತು.

ಸಂಕ್ರಾAತಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಸಂಕ್ರಾAತಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು. ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಸಮಯದಲ್ಲಿ ಸ್ಥಳೀಯ ದೇವಾಲಯಗಳಲ್ಲಿ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾAತಿ ಹಾಗೂ ಮಕರ ಜ್ಯೋತಿಯ ಪ್ರಯುಕ್ತ ನಿನ್ನೆ ಸಂಜೆ ವಿಶೇಷ ಪೂಜೆಗಳು ನಡೆಯಿತು.

ನಂತರ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಯವರ ಪೌರೋಹಿತ್ಯದಲ್ಲಿ ಅರ್ಚನೆ, ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಪೂಜೆ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಪಟ್ಟಣದ ತತ್ವಮಸಿ ತಂಡ ನಿರ್ವಹಿಸಿತು.ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವಾಲಯದ ೩೧ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವದ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಬೆಳಿಗ್ಗೆ ೭ ಗಂಟೆಗೆ ಶ್ರೀ ಮುತ್ತಪ್ಪ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ ನಡೆಯಿತು. ೭:೩೦ ರಿಂದ ಅಯ್ಯಪ್ಪ ಸ್ವಾಮಿ ದೇವರಿಗೆ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಾಭಿಷೇಕ, ಪುಷ್ಪಾರ್ಚನೆ ಹಾಗೂ ಇತ್ಯಾದಿ ಸೇವೆಗಳು ನಡೆದವು. ೧೦ ಗಂಟೆಗೆ ಅಲಂಕಾರ ಪೂಜೆ, ೧೧ ಗಂಟೆಗೆ ಚಂಡೆ ವಾದ್ಯದ ನಾದಕ್ಕೆ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನೆರವೇರಿತು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿಯ ನಂತರ ಅನ್ನದಾನ ನೆರವೇರಿತು. ಸಂಜೆ ೬ ಗಂಟೆಗೆ ಕನ್ನಿಕಾ ಪರಮೇಶ್ವರಿ ಭಜನಾ ತಂಡದಿAದ ಭಜನೆ ನೆರವೇರಿತು. ೭ ಗಂಟೆಗೆ ಪಡಿಪೂಜೆ ನಂತರ ೮ ಗಂಟೆಗೆ ಪ್ರಸಾದ ವಿತರಣೆ ನಡೆಯಿತು. ಅಯ್ಯಪ್ಪ ಸ್ವಾಮಿ ದೇವಸ್ಥಾನ ಉತ್ಸವ ಸಮಿತಿಯ ಅಧ್ಯಕ್ಷ ಎಸ್.ಸುರೇಶ್, ಗೌರವಾಧ್ಯಕ್ಷ ಎಮ್.ಜಿ ಪಾಟ್ಕರ್, ಪ್ರಧಾನ ಕಾರ್ಯದರ್ಶಿ ವಿನೋದ್ ವಿ.ಎಸ್, ದೇವಾಲಯ ಸಮಿತಿಯ ಟಿ.ಕೆ. ಸುಧೀರ್, ಉನ್ನಿಕೃಷ್ಣ, ಸುಬ್ರಮಣಿ, ಸದಾಶಿವ ಶೆಟ್ಟಿ, ತಿಮ್ಮಯ್ಯ, ಗಾಂಧಿರಾಜನ್ ನಾಡರ್ ಹಾಗೂ ಇತರರು ಹಾಜರಿದ್ದರು. ಅರ್ಚಕ ವೃಂದದ ಅರವಿಂದ್ ಭಟ್, ವೀರಾಜಪೇಟೆಯ ಶಂಕರ ವೈಲಾಯ ಹಾಗೂ ಸುರೇಂದ್ರ ವೈಲಾಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಸೇವೆಗಳು ನಡೆದವು. ೧೦ ಗಂಟೆಗೆ ಅಲಂಕಾರ ಪೂಜೆ, ೧೧ ಗಂಟೆಗೆ ಚಂಡೆ ವಾದ್ಯದ ನಾದಕ್ಕೆ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನೆರವೇರಿತು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿಯ ನಂತರ ಅನ್ನದಾನ ನೆರವೇರಿತು. ಸಂಜೆ ೬ ಗಂಟೆಗೆ ಕನ್ನಿಕಾ ಪರಮೇಶ್ವರಿ ಭಜನಾ ತಂಡದಿAದ ಭಜನೆ ನೆರವೇರಿತು. ೭ ಗಂಟೆಗೆ ಪಡಿಪೂಜೆ ನಂತರ ೮ ಗಂಟೆಗೆ ಪ್ರಸಾದ ವಿತರಣೆ ನಡೆಯಿತು. ಅಯ್ಯಪ್ಪ ಸ್ವಾಮಿ ದೇವಸ್ಥಾನ ಉತ್ಸವ ಸಮಿತಿಯ ಅಧ್ಯಕ್ಷ ಎಸ್.ಸುರೇಶ್, ಗೌರವಾಧ್ಯಕ್ಷ ಎಮ್.ಜಿ ಪಾಟ್ಕರ್, ಪ್ರಧಾನ ಕಾರ್ಯದರ್ಶಿ ವಿನೋದ್ ವಿ.ಎಸ್, ದೇವಾಲಯ ಸಮಿತಿಯ ಟಿ.ಕೆ. ಸುಧೀರ್, ಉನ್ನಿಕೃಷ್ಣ, ಸುಬ್ರಮಣಿ, ಸದಾಶಿವ ಶೆಟ್ಟಿ, ತಿಮ್ಮಯ್ಯ, ಗಾಂಧಿರಾಜನ್ ನಾಡರ್ ಹಾಗೂ ಇತರರು ಹಾಜರಿದ್ದರು. ಅರ್ಚಕ ವೃಂದದ ಅರವಿಂದ್ ಭಟ್, ವೀರಾಜಪೇಟೆಯ ಶಂಕರ ವೈಲಾಯ ಹಾಗೂ ಸುರೇಂದ್ರ ವೈಲಾಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಮಕರ ಸಂಕ್ರಾAತಿ ಹಬ್ಬದ ಅಂಗವಾಗಿ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮಗಳಲ್ಲಿನ ಜನರು ಸ್ಥಳೀಯ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು

ಅನೇಕ ಗ್ರಾಮಗಳಲ್ಲಿ ಮಕ್ಕಳು ಮತ್ತು ಯುವತಿಯರು ಹೊಸ ಉಡುಪುಗಳನ್ನು ಧರಿಸಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಮತ್ತು ಸಿಹಿಗಳನ್ನು ಹಂಚಿ ಶುಭಾಶಯ ಕೋರಿದರು. ಗ್ರಾಮದಲ್ಲಿ ಅವರವರ ಮನೆಗಳ ಮುಂದೆ ಆಕರ್ಷಕವಾದ ರಂಗೋಲಿ ಹಾಕಿದ್ದು ವಿಶೇಷವಾಗಿತ್ತು.

ಸಂಕ್ರಾAತಿ ಹಬ್ಬದ ಅಂಗವಾಗಿ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವರಿಗೆ ವಿಶೇಷ ಪೂಜೆ ಅಭಿಷೇಕ ನಡೆದವು. ಈ ಪೂಜೆ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಆಗಮಿಸಿದರು.

ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಪೂಜೆ ಕಾರ್ಯಕ್ರಮಗಳು ನಡೆದವು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದರು.

ಕೂಡಿಗೆ ವ್ಯಾಪ್ತಿಯಲ್ಲಿ ಸಂಕ್ರಾAತಿ

ಕುಶಾಲನಗರ: ಸಂಕ್ರಾAತಿ ಅಂಗವಾಗಿ ಬೈಚನಹಳ್ಳಿಯ ಗೆಳೆಯರ ಬಳಗದ ಆಶ್ರಯದಲ್ಲಿ ೫ನೇ ವರ್ಷದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಬೈಚನಹಳ್ಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಬೈಚನಹಳ್ಳಿಯ ಸಮದ್ ಫ್ರೆಂಡ್ಸ್ ಪ್ರಥಮ, ವಿನಾಯಕ ಡ್ರೀಂ ಇಲೆವೆನ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಬಿ.ಎಲ್.ಶಿವಕುಮಾರ್ ತಂಡ ಪ್ರಥಮ, ಸಮದ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಪಂ ಸದಸ್ಯ ಬಿ.ಎಲ್.ಜಗದೀಶ್ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು.

ಈ ಸಂದರ್ಭ ಗೆಳೆಯರ ಬಳಗದ ಪ್ರಮುಖರಾದ ಶ್ರೀಕಾಂತ್, ಜಗದೀಶ್, ಕೆ.ಟಿ.ಶ್ರೀಕಾಂತ್, ರವೀಶ್, ವಿನು, ಶಿವಕುಮಾರ್ ಇದ್ದರು.

ವೀರಾಜಪೇಟೆ : ಮಕರ ಸಂಕ್ರಾAತಿ ಪ್ರಯುಕ್ತ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುª ಮಲೆ ತಿರಿಕೆಬೆಟ್ಟದ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಜ್ಯೋತಿ ಪೂಜೆಯನ್ನು ಸಂಪ್ರದಾಯ ಬದ್ಧವಾಗಿ ಕೋವಿಡ್-೧೯ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.

ಮಕರ ಸಂಕ್ರಾAತಿ ಪ್ರಯುಕ್ತ ಬೆಳಗಿನಿಂದಲೇ ದೇವಾಲಯದಲ್ಲಿ ಅಭಿಷೇಕ ವಿವಿಧ ಪೂಜೆ ಪುನಸ್ಕಾರಗಳು ಜರುಗಿದವು. ಸಂಜೆ ೬-೪೫ಕ್ಕೆ ಮಕರ ಜ್ಯೋತಿಯ ಮಹಾಪೂಜಾ ಸೇವೆ ಜರುಗಿತು. ಮಳೆಯ ಕಾರಣ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು. ಸಂಜೆ ನಿರಂತರ ಮಳೆ ಪ್ರಯುಕ್ತ ದೇವಾಲಯದ ಸುತ್ತ ಉತ್ಸವ ಮೂರ್ತಿಯ ನೃತ್ಯ ಪ್ರದಕ್ಷಿಣೆಯನ್ನು ರದ್ದು ಪಡಿಸಲಾಗಿತ್ತು.ಕುಶಾಲನಗರ: ಮಕರ ಸಂಕ್ರಾAತಿ ಅಂಗವಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅಯ್ಯಪ್ಪಸ್ವಾಮಿಗೆ ಅಭಿಷೇಕ ನಂತರ ಆರತಿ ಬೆಳಗುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಆವರಣದಲ್ಲಿರುವ ಗಣಪತಿ ಮತ್ತು ಮಹಾಲಕ್ಷಿö್ಮ ದೇವರಿಗೆ ಈ ಸಂದರ್ಭ ಪೂಜೆ ಸಲ್ಲಿಸಲಾಯಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್, ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆಯ ಸೇವಾರ್ಥದಾರರಾದ ಕುಶಾಲನಗರದ ಉದ್ಯಮಿ ವಿ.ಡಿ.ಪುಂಡರೀಕಾಕ್ಷ, ದೇವಾಲಯ ಸಮಿತಿ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.