ಶನಿವಾರಸಂತೆ, ಜ. ೧೫: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ತಾ. ೧೪ ರಂದು ಸಂಜೆ ಸ್ಥಳೀಯ ನಿವಾಸಿ ವಿಶಾಲಾಕ್ಷಿ ಮನೆಯ ಮುಂಭಾಗ ನಿಂತಿದ್ದಾಗ, ಸಂಬAಧಿ ಮುತ್ತಪ್ಪ ಆಕೆಯ ಬೆರಳು ಕಚ್ಚಿ ಗಾಯ ಪಡಿಸಿ ಗಂಡ ಪಾಪಣ್ಣನಿಗೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶಾಲಾಕ್ಷಿ ತನ್ನ ಮನೆಯ ಮುಂಭಾಗ ನಿಂತಿದ್ದಾಗ ಆಕೆಯ ಸಂಬAಧಿ ಮುತ್ತಯ್ಯ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಲ್ಲಿನಿಂದ ಹೊಡೆದು ಆಕೆಯ ಬಲಗೈ ಹೆಬ್ಬೆರಳನ್ನು ಕಚ್ಚಿ ಗಾಯ ಪಡಿಸಿದ್ದಾನೆ. ತನ್ನ ಮನೆಯೊಳಗಿನಿಂದ ಕೋವಿಯನ್ನು ತಂದು ಪಾಪಣ್ಣನಿಗೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಾಗ ಹೆದರಿದ ಗಂಡ ಹೆಂಡತಿ ಪಕ್ಕದ ನಿವಾಸಿ ಹೂವಪ್ಪ ಅವರ ಮನೆಯ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಅಡಗಿಕೊಂಡರು.

ತನ್ನ ಕೈಯಲ್ಲಿದ್ದ ಕೋವಿಯಿಂದ ಹೂವಪ್ಪ ಅವರ ಮನೆಯ ಬಾಗಿಲಿಗೆ ಹಾಗೂ ಕಿಟಕಿ ಗ್ಲಾಸಿಗೆ ಮೂರು ಬಾರಿ ಗುಂಡು ಹಾರಿಸಿ ಬಾಗಿಲು ಕಿಟಕಿ ಗ್ಲಾಸನ್ನು ಒಡೆದು ಹಾಕಿ ಹೊಡೆದು ಆಕೆಯ ಬಲಗೈ ಹೆಬ್ಬೆರಳನ್ನು ಕಚ್ಚಿ ಗಾಯ ಪಡಿಸಿದ್ದಾನೆ. ತನ್ನ ಮನೆಯೊಳಗಿನಿಂದ ಕೋವಿಯನ್ನು ತಂದು ಪಾಪಣ್ಣನಿಗೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಾಗ ಹೆದರಿದ ಗಂಡ ಹೆಂಡತಿ ಪಕ್ಕದ ನಿವಾಸಿ ಹೂವಪ್ಪ ಅವರ ಮನೆಯ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಅಡಗಿಕೊಂಡರು.

ತನ್ನ ಕೈಯಲ್ಲಿದ್ದ ಕೋವಿಯಿಂದ ಹೂವಪ್ಪ ಅವರ ಮನೆಯ ಬಾಗಿಲಿಗೆ ಹಾಗೂ ಕಿಟಕಿ ಗ್ಲಾಸಿಗೆ ಮೂರು ಬಾರಿ ಗುಂಡು ಹಾರಿಸಿ ಬಾಗಿಲು ಕಿಟಕಿ ಗ್ಲಾಸನ್ನು ಒಡೆದು ಹಾಕಿ ನಷ್ಟಪಡಿಸಿರುತ್ತಾನೆ. ಗಾಯಗೊಂಡ ವಿಶಾಲಾಕ್ಷಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಸಿಬ್ಬಂದಿಗಳಾದ ಸಫೀರ್, ರವಿಚಂದ್ರ, ಸಂತೋಷ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುತ್ತಯ್ಯನನ್ನು ಬಂಧಿಸಿ ಕೋವಿಯನ್ನು ವಶಪಡಿಸಿಕೊಂಡು ವಿಧಿ ೩೨೪, ೪೨೭, ೫೦೬ ರೀತ್ಯಾ ಪ್ರಕರಣ ದಾಖಲಿಸಿ ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.