ಮಡಿಕೇರಿ, ಜ. ೧೩: ಕೊಡವರು ಹಾಗೂ ಅಮ್ಮ ಕೊಡವರಿಗೆ ಇರುವ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ತಾ.೧೫ರಂದು ವಿವಿಧ ಹೋಮ, ಪೂಜಾದಿ ಕಾರ್ಯಗಳನ್ನು ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಟ್ರಸ್ಟ್ನ ಅಧ್ಯಕ್ಷ ಮುದ್ದಂಡ ದೇವಯ್ಯ ಅವರು; ಸಾವಿರಾರು ವರ್ಷಗಳ ಹಿಂದಿನಿAದಲೂ ಮೂಲನಿವಾಸಿಗಳಾಗಿರುವ ಕೊಡವ ಜನಾಂಗದವರಿಗೆ ಶ್ರೀ ಅಗಸ್ತೆö್ಯÃಶ್ವರ ಮುನಿಗಳ ಹಾಗೂ ಅಮ್ಮ ಕೊಡವರಿಗೆ ಶ್ರೀ ಕಾವೇರಮ್ಮ ತಾಯಿಯ ಶಾಪ ಇರುವದರಿಂದ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ತಾ.೧೫ರಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಬಯಲು ಪ್ರದೇಶದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶತರುದ್ರಾಭಿಷೇಕ ಪಠಣ ಕಾರ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಂದು ಬೆಳಿಗ್ಗೆ ೭ಗಂಟೆಗೆ ಶತರುದ್ರ ಪಠಣದೊಂದಿಗೆ ಪೂಜಾ ಕಾರ್ಯ ಆರಂಭಗೊಳ್ಳಲಿದೆ, ಮಡಿಕೇರಿಯ ಈಶ್ವರ್ ಭಟ್ ಅವರ ತಂಡ ಹಾಗೂ ಸುಳ್ಯದ ವೇದ ಕಲಿಕಾ ವಿದ್ಯಾರ್ಥಿಗಳು ಈ ಕಾರ್ಯ ನಡೆಸಿಕೊಡಲಿದ್ದಾರೆಂದು ತಿಳಿಸಿದರು.
ಕಾವೇರಿ ನದಿಯಾಗಿ ಹರಿದು ಹೋಗುತ್ತಿದ್ದ ಸಂದರ್ಭ ಅಗಸ್ತö್ಯ ಮುನಿಗಳು ಭಾಗಮಂಡಲದಲ್ಲಿ ಮತ್ಸö್ಯ ರೂಪದಲ್ಲಿ ಬಂದು ತಡೆದಾಗ ಆಗ ರಾಜಮನೆತನದವರಾಗಿದ್ದ ಕೊಡವರು ಮುನಿಗಳ ಎದುರು ಮಾತನಾಡಿದ ಕಾರಣ ಕೋಪಗೊಂಡ ಮುನಿಗಳು ಕೊಡವರಿಗೆ ರಾಜತನ ಹೋಗಿ ಬಡತನ ಬರಲಿ, ವೀರತನ ಹೋಗಿ ನಿರ್ವೀರ್ಯರಾಗಿ, ಬಿತ್ತಿದ ಬೆಳೆ ಬಾರದಿರಲಿ ಎಂದು ಹಾಗೂ ಕಾವೇರಮ್ಮ ತಾಯಿ ಅಮ್ಮ ಕೊಡವರಿಗೆ ಸಾವಿರ ಇದ್ದುದು ನೂರಾಗಲಿ, ಭಾಗ್ಯಲೋಕ ಸಿಲುಕದಿರಲಿ ಎಂಬಿತ್ಯಾದಿ ಶಾಪಗಳನ್ನು ನೀಡಿರುವದಾಗಿ ಪುರಾಣದಲ್ಲಿ ಉಲ್ಲೇಖವಿದೆ. ಪ್ರಶ್ನೆಯಲ್ಲೂ ಕೂಡ ಈ ಬಗ್ಗೆ ಕಂಡುಬAದ ಹಿನ್ನೆಲೆಯಲ್ಲಿ ತಂತ್ರಿಗಳ ಮಾರ್ಗದರ್ಶನದಂತೆ ಪರಿಹಾರ ಕಾರ್ಯ ನಡೆಸುತ್ತಾ ಬರಲಾಗುತ್ತಿದೆ. ಇದು ೮ನೇ ವರ್ಷದ ಕಾರ್ಯವಾಗಿದ್ದು, ಶೇ. ೪೦ ರಿಂದ ೪೫ರಷ್ಟು ಪರಿಹಾರ ಆಗಿರುವದಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿರುತ್ತದೆ, ಸಂಪೂರ್ಣ ಪರಿಹಾರ ಕಾಣಲು ಹಲವು ವರ್ಷಗಳು ಬೇಕಾಗುತ್ತದೆ, ಕೆಲವರು ಮುನಿಗಳ ಶಾಪ ಪರಿಹಾರವಾಗುದಿಲ್ಲವೆಂದು ಹೇಳುತ್ತಾರೆ. ಆದರೆ, ಶಾಪ ವಿಮೋಚನೆಯಾಗಿರುವ ಬಗ್ಗೆ ರಾಮಾಯಣದ ಸನ್ನಿವೇಶವನ್ನು ಉದಾಹರಿಸಿದರು.
ಇನ್ನೂ ಐದು ವರ್ಷಗಳ ಕಾಲ ಈ ಪರಿಹಾರ ಕಾರ್ಯ ಮಾಡಬೇಕೆಂದು ಪ್ರಶ್ನೆಯಲ್ಲಿ ಕಂಡುಬAದಿದ್ದು, ಮುಂದಿನ ಪೀಳಿಗೆ ಇದನ್ನು ಮುಂದುವರಿಸಿಕೊAಡು ಹೋದರೆ ಇನ್ನಷ್ಟು ಒಳಿತಾಗಬಹುದೆಂದು ಅಭಿಪ್ರಾಯಿಸಿದರು. ನಮ್ಮ ಈ ಕಾರ್ಯವನ್ನು ಮೂಢನಂಬಿಕೆಯೆAದು ಕೆಲವರು ಟೀಕೆ ಮಾಡುತ್ತಿದ್ದಾರೆ. ಅಂತಹವರು ಹೋಮದ ಪೂರ್ಣಾಹುತಿ ವೇಳೆಗೆ ಹಿಂಬಾಗಿಲಿನಿAದ ಬಂದು ಹೋಗಿರುವದೂ ಇದೆ ಎಂದು ದೇವಯ್ಯ ಹೇಳಿದರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾ, ನಾವುಗಳು ಕಳೆದುಕೊಂಡಿರುವ ಆಸ್ತಿ, ಪಾಸ್ತಿಗಳು ವಾಪಸ್ ಸಿಗುವಂತಾಗಲಿ ಎಂದು ಪ್ರಾರ್ಥನೆ ಮಾಡೋಣ, ನಂಬಿಕೆ ಇರುವವರು ಪ್ರಾರ್ಥನೆ ಮಾಡುತ್ತಾರೆ, ಕೋವಿಡ್ ನಿಯಮ ಪಾಲನೆಯೊಂದಿಗೆ ಹೋಮ ಕಾರ್ಯ ನಡೆಸಲಾಗುವದೆಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಮುಕ್ಕಾಟಿರ ನಾಣಯ್ಯ, ಟ್ರಸ್ಟಿಗಳಾದ ಪಾಸುರ ಸಿ. ಕಾವೇರಪ್ಪ, ಕೊಳ್ಳಿಮಾಡ ಪೆಮ್ಮಯ್ಯ ಇದ್ದರು.