ಉಷಾಪ್ರೀತಮ್, ಮಗ್ಗುಲ ಹವ್ಯಾಸಿ ಪತ್ರಕರ್ತೆ
ಶಾಂತಿ ಉಲ್ಲಂಘನೆ ಅಥವಾ ಗಂಭೀರ ಗಲಭೆಗಳನ್ನು ತಡೆಗಟ್ಟಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿದೆ.
ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಶಾಂತಿಯನ್ನು ಕಾಪಾಡಿಕೊಳ್ಳಲು ನಾಗರಿಕರ ಸಮಿತಿ, ಶಾಂತಿ ಸಮಿತಿ ಮತ್ತು ಮೊಹಲ್ಲಾ ಸಮಿತಿಯ ಮೂಲಕ ಪ್ರದೇಶದ ಪ್ರಮುಖ ನಾಗರಿಕ ರೊಂದಿಗೆ ನಿಕಟ ಸಂಬAಧವನ್ನು ಇಟ್ಟುಕೊಳ್ಳಬೇಕು. ಆ ಪ್ರದೇಶದಲ್ಲಿನ ಸಮಾಜವಿರೋಧಿ ಅಂಶಗಳು, ಗೂಂಡಾಗಳು ಮತ್ತು ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿದೆ.
ಅಲ್ಲದೇ ಜಾತ್ರೆಗಳು ಮತ್ತು ಹಬ್ಬಗಳು, ಸಾರ್ವಜನಿಕ ಕಾರ್ಯಗಳು, ಮೆರವಣಿಗೆಗಳು, ಮುಷ್ಕರಗಳು, ಆಂದೋಲನಗಳು ಇತ್ಯಾದಿಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಯಾವುದೇ ಪೊಲೀಸ್ ಅಧಿಕಾರಿ ಜನಾಂಗ, ಜಾತಿ, ಸಮುದಾಯ, ಭಾಷೆ, ಧರ್ಮ, ಪ್ರದೇಶ, ಲೈಂಗಿಕತೆ ಅಥವಾ ರಾಜಕೀಯ ಸಂಬAಧದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದಿದೆ.
ಇದೆಲ್ಲವೂ ಒಪ್ಪಿತವೇ ಆದರೆ ಎಲ್ಲಿಯೂ ಕೂಡಾ, ಕಾಟಾಚಾರದ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಕಾನೂನು ಹೇಳಿಲ್ಲ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ ೧೦೭ ಅತ್ಯಂತ ಸ್ಪಷ್ಟವಾಗಿ ಶಾಂತಿ ಕಾಪಾಡುವ ನಿಟ್ಟಿನ್ನಲ್ಲಿ ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ಬಂದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲಿದ್ದಾರೆ, ಅಪರಾಧೀ ಕೃತ್ಯಗಳನ್ನು ನಡೆಸಲಿದ್ದಾರೆ ಎನ್ನುವ ಮಾಹಿತಿ ಬಂದಾಗ ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಅವರು ಶೋಕಾಸ್ ನೋಟೀಸ್ ನೀಡಿ ಅವರನ್ನು ಕರೆಸಿ ವಿಚಾರಣೆ ಮಾಡಬಹದು. ವಿಚಾರಣೆಯ ಬಳಿಕ ಶ್ಯೂರಿಟಿ ಬಾಂಡ್ ಬರೆಸಿಕೊಳ್ಳಬೇಕಾ ಅಥವಾ ಬೇಡವಾ ಎನ್ನುವ ತೀರ್ಮಾನವನ್ನು ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಮಾಡಬಹುದು. ಈ ನೋಟೀಸ್‌ಗೆ ಒಂದು ವರ್ಷ ಅವಧಿಯಿರುತ್ತದೆ ಎನ್ನುವ ಉಲ್ಲೇಖವಿದೆ.
ಇದು ನಿಜವಾಗಿಯೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನ್ನಲ್ಲಿ ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಅಂದರೆ ತಾಲೂಕಿನ ತಹಶೀಲ್ದಾರ್ ಅವರೇ ಈ ಸ್ಥಾನವನ್ನು ಹೊಂದಿದವರಾಗಿರುತ್ತಾರೆ. ಅವರು ಈ ವಿಚಾರಣೆಯನ್ನು ನಡೆಸಿ ಬಾಂಡ್ ಬರೆಸಿಕೊಂಡು ಆದೇಶ ಮಾಡುವ ಅಧಿಕಾರ ಹೊಂದಿದ್ದಾರೆ.
ಆದರೆ ಅದಕ್ಕೂ ಮುಂಚಿತವಾಗಿ ಪೊಲೀಸ್ ಇಲಾಖೆ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಈ ಹಿಂದೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರು, ವ್ಯಾಜ್ಯ ಮಾಡಿಕೊಂಡಿರುವವರ ಪಟ್ಟಿ ತೆಗೆದು ತಹಶೀಲ್ದಾರ್ ಅವರಿಗೆ ಕೊಡುವ ಕೆಲಸ ಮಾಡುತ್ತದೆ. ಬಳಿಕ ತಹಶೀಲ್ದಾರ್ ಕಛೇರಿಯಿಂದ ಸಂಬAಧಪಟ್ಟವರಿಗೆ ನೋಟಿಸ್ ಹೋಗಿರುತ್ತದೆ. ಬಳಿಕ ನೊಟೀಸ್ ಪಡೆದುಕೊಂಡವರು ಅದಕ್ಕೆ ತಕರಾರು ಸಲ್ಲಿಸುವುದಾದರೆ ವಕೀಲರ ಮೂಲಕ ತಕರಾರು ಸಲ್ಲಿಸಿ ತಾವೂ ಅಂಥವರಲ್ಲ, ಆ ರೀತಿಯ ಹಿನ್ನಲೆಯುಳ್ಳ ವರಲ್ಲ ಎಂದು ತಹಶೀಲ್ದಾರ್ ಕೋರ್ಟ್ ಮುಂದೆ ಬಿನ್ನವಿಸಿಕೊಳ್ಳಬಹುದು, ವಿಚಾರಣೆ ನಡೆದು ಆರು ತಿಂಗಳ ಒಳಗೆ ಆದೇಶವೂ ಆಗೀ ಎಲ್ಲವೂ ಮುಗಿಯುತ್ತದೆ. ಇಲ್ಲದಿದ್ದರೇ ತಹಶೀಲ್ದಾರ್ ಮುಂದೆ ಹಾಜರಾಗಿ ಅವರು ಹೇಳಿದ ಹಾಗೇ ಇನ್ನು ಮುಂದೆ ಯಾವುದೇ ಗಲಭೆ ಮಾಡುವುದಿಲ್ಲ ಎಂದು ಹೇಳಿ ಅವರು ಸೂಚಿಸಿದ ಶ್ಯೂರಿಟಿ ಬಾಂಡ್ ಮೊತ್ತಕ್ಕೆ ಮಾಹಿತಿ ಬಂದಾಗ ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಅವರು ಶೋಕಾಸ್ ನೋಟೀಸ್ ನೀಡಿ ಅವರನ್ನು ಕರೆಸಿ ವಿಚಾರಣೆ ಮಾಡಬಹದು. ವಿಚಾರಣೆಯ ಬಳಿಕ ಶ್ಯೂರಿಟಿ ಬಾಂಡ್ ಬರೆಸಿಕೊಳ್ಳಬೇಕಾ ಅಥವಾ ಬೇಡವಾ ಎನ್ನುವ ತೀರ್ಮಾನವನ್ನು ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಮಾಡಬಹುದು. ಈ ನೋಟೀಸ್‌ಗೆ ಒಂದು ವರ್ಷ ಅವಧಿಯಿರುತ್ತದೆ ಎನ್ನುವ ಉಲ್ಲೇಖವಿದೆ.
ಇದು ನಿಜವಾಗಿಯೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನ್ನಲ್ಲಿ ಮುಂಜಾಗರೂಕತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಎಕ್ಸಿಕ್ಯೂಟೀವ್ ಮ್ಯಾಜಿಸ್ಟ್ರೇಟ್ ಅಂದರೆ ತಾಲೂಕಿನ ತಹಶೀಲ್ದಾರ್ ಅವರೇ ಈ ಸ್ಥಾನವನ್ನು ಹೊಂದಿದವರಾಗಿರುತ್ತಾರೆ. ಅವರು ಈ ವಿಚಾರಣೆಯನ್ನು ನಡೆಸಿ ಬಾಂಡ್ ಬರೆಸಿಕೊಂಡು ಆದೇಶ ಮಾಡುವ ಅಧಿಕಾರ ಹೊಂದಿದ್ದಾರೆ.
ಆದರೆ ಅದಕ್ಕೂ ಮುಂಚಿತವಾಗಿ ಪೊಲೀಸ್ ಇಲಾಖೆ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಈ ಹಿಂದೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರು, ವ್ಯಾಜ್ಯ ಮಾಡಿಕೊಂಡಿರುವವರ ಪಟ್ಟಿ ತೆಗೆದು ತಹಶೀಲ್ದಾರ್ ಅವರಿಗೆ ಕೊಡುವ ಕೆಲಸ ಮಾಡುತ್ತದೆ. ಬಳಿಕ ತಹಶೀಲ್ದಾರ್ ಕಛೇರಿಯಿಂದ ಸಂಬAಧಪಟ್ಟವರಿಗೆ ನೋಟಿಸ್ ಹೋಗಿರುತ್ತದೆ. ಬಳಿಕ ನೊಟೀಸ್ ಪಡೆದುಕೊಂಡವರು ಅದಕ್ಕೆ ತಕರಾರು ಸಲ್ಲಿಸುವುದಾದರೆ ವಕೀಲರ ಮೂಲಕ ತಕರಾರು ಸಲ್ಲಿಸಿ ತಾವೂ ಅಂಥವರಲ್ಲ, ಆ ರೀತಿಯ ಹಿನ್ನಲೆಯುಳ್ಳ ವರಲ್ಲ ಎಂದು ತಹಶೀಲ್ದಾರ್ ಕೋರ್ಟ್ ಮುಂದೆ ಬಿನ್ನವಿಸಿಕೊಳ್ಳಬಹುದು, ವಿಚಾರಣೆ ನಡೆದು ಆರು ತಿಂಗಳ ಒಳಗೆ ಆದೇಶವೂ ಆಗೀ ಎಲ್ಲವೂ ಮುಗಿಯುತ್ತದೆ. ಇಲ್ಲದಿದ್ದರೇ ತಹಶೀಲ್ದಾರ್ ಮುಂದೆ ಹಾಜರಾಗಿ ಅವರು ಹೇಳಿದ ಹಾಗೇ ಇನ್ನು ಮುಂದೆ ಯಾವುದೇ ಗಲಭೆ ಮಾಡುವುದಿಲ್ಲ ಎಂದು ಹೇಳಿ ಅವರು ಸೂಚಿಸಿದ ಶ್ಯೂರಿಟಿ ಬಾಂಡ್ ಮೊತ್ತಕ್ಕೆ ಎಚ್ಚರಿಕೆ ಕೊಡುವುದು ಬಿಟ್ಟು ಅರ್ಧ ಗ್ರಾಮಗಳಿಗೆ, ಮುಕ್ಕಾಲು ಹೋಬಳಿಗೆ ನೊಟೀಸ್ ಕೊಟ್ಟು ಚಿಲ್ಲರೆ ಜಗಳ ಮಾಡಿಕೊಂಡ ಜನರು ಶಾಂತಿ ಕದಡುವವರೆ ಎಂದು ನೊಟೀಸ್ ಮಾಡಿ ಪ್ರತಿ ಚುನಾವಣೆ ಬಂದಾಗ ಒಮ್ಮೆ ಜೀವಮಾನದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದೆ ತಪ್ಪಾಯ್ತಾ ಎನ್ನುವಂತೆ ಮಾಡುತ್ತಿದ್ದಾರೆ.
ಹೋಗಲಿ ಇವರಿಗೆಲ್ಲಾ ಪ್ರತಿ ಚುನಾವಣೆ ಬಂದಾಗ ನೀವು ಗಲಭೆ ಮಾಡುವವರು, ಶಾಂತಿ ಕದಡುವವರು ಎಂಬ ಹಣೆಪಟ್ಟಿ ಅಂಟಿದ ನೋಟೀಸ್ ಪಡೆಯುವುದು ಮಾತ್ರವಲ್ಲದೇ ಒಂದು ವರ್ಷವಿಡೀ ತಹಶೀಲ್ದಾರ್ ಕೋರ್ಟ್ ನೀಡಿದ ದಿನಾಂಕದAದು ಹಾಜರಾಗಿ ಅಲೆಯಬೇಕಾದ ಸ್ಥಿತಿ ತಂದಿಡುತ್ತಿದೆ.
ಈ ಬಾರಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ತಹಶೀಲ್ದಾರ್ ಅವರು ಚುನಾವಣೆ ಕೆಲಸದಲ್ಲಿ ಬ್ಯುಸಿ ಇದ್ದರು ಎಂದು ತಾಲೂಕು ಕಚೇರಿಯ ಕೇಸ್ ವರ್ಕರ್ ನೋಟೀಸ್ ಹೋದ ಜನರಿಗೆ ಫೋನ್ ಮಾಡಿ ಬೇಗ ಬನ್ನಿ ಬಾಂಡ್ ಗೆ ಸಹಿ ಮಾಡಬೇಕು ಎಂದು, ಕಡಲೆಪುರಿ ಹಂಚುವ ಹಾಗೇ ಶ್ಯೂರಿಟಿ ಬಾಂಡ್ ಹಂಚುವುದು, ಪಕ್ಕದ ಅಂಗಡಿಯಿAದ ಬಾಂಡನ್ನು ಜನರ ಬಳಿಯೇ ತರಿಸಿ ಖಾಲಿ ಆರ್ಡರ್ ಶೀಟ್ ಗೆ ಸಹಿ ಮಾಡಿಸಿಕೊಂಡು ಕಳುಹಿಸುವುದು ಎಷ್ಟು ಸರಿ?
ಹೀಗೆ ಕಾಟಾಚಾರದ ಕಾನೂನು ಪಾಲನೆ ಮಾಡಲು ಹೋಗಿ ವೀರಾಜಪೇಟೆ ತಾಲೂಕಿನಲ್ಲಿ ೫೦೦ ಕ್ಕೂ ಅಧಿಕ ಪ್ರಕರಣಗಳೂ ಈ ಕಲಂ ಅಡಿಯಲ್ಲಿ ದಾಖಲಾಗಿವೆ. ಕನಿಷ್ಟ ನೋಟೀಸ್ ಪಡೆದ ಜನತೆಗೆ ತಹಶೀಲ್ದಾರ್ ಮುಂದೆ ವಿಚಾರಣೆಗೆ ಹಾಜರಾಗಲೂ ಅವಕಾಶ ನೀಡದೆ ಕೇಸ್ ವರ್ಕರ್ ತಾಲೂಕು ದಂಡಾಧಿಕಾರಿಯ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಇನ್ನೂ ಹೀಗೆ ಕಾಟಾಚಾರಕ್ಕೆ ಹೀಗೆ ಅರ್ಧ ಹಳ್ಳಿಗೆ ನೋಟಿಸ್ ಕೊಟ್ಟು ಬಾಂಡ್ ಬರೆಸಿಕೊಂಡು ನೈಜ ಗಲಭೆಕೋರರು ಯಾರು, ಗಲಭೆ ಮಾಡದವರು ಯಾರು ತಹಶೀಲ್ದಾರ್ ಗಮನಕ್ಕೆ ಬಾರದೇ ಹೋಯಿತು. ಹೀಗಾದರೆ ಗಲಭೆ ಮಾಡಲೇಬೇಕು ಎಂದು ಸಿದ್ದವಾಗಿರುವವರಿಗೆ ಯಾವ ಎಚ್ಚರಿಕೆ ಕೊಟ್ಟ ಹಾಗಾಯ್ತು? ಅಮಾಯಕರಿಗೆ ತಾವೂ ಅಂಥವರಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಕೊಳ್ಳುವ ಅವಕಾಶವೂ ಸಿಗಲಿಲ್ಲ? ಕನಿಷ್ಟ ನೈಸರ್ಗಿಕ ನ್ಯಾಯದ ನಿಯಮ ಪಾಲನೆಯೂ ಆಗಲಿಲ್ಲ. ಇದು ಇಷ್ಟೇ ಆದರೂ ಪರ್ವಾಗಿಲ್ಲಾ ಕೆಲವೊಂದು ಬಾರಿ ಪರಿಸ್ಥಿತಿ ಕೈಮೀರಿ ಹೋಗಿ ಗಲಭೆ, ದೊಂಬಿ ನಡೆದಾಗ ಈ ಮೊದಲೇ ಅವರು ತಹಶೀಲ್ದಾರ್ ಬಳಿ ಬರೆದುಕೊಟ್ಟಿದ್ದ ಶ್ಯೂರಿಟಿ ಬಾಂಡ್‌ನ ಹಣವನ್ನು ವಸೂಲಿ ಮಾಡಬಹುದು ಅದನ್ನು ಮಾಡುವುದಿಲ್ಲ, ಮಾಡುತ್ತಲೂ ಇಲ್ಲ. ಹೀಗಿದ್ದ ಮೇಲೆ ಈ ಕಾಟಾಚಾರದ ಕಾನೂನು ಪರಿಪಾಲನೆ ಶಾಂತಿ ಸುವ್ಯವಸ್ಥೆಯ ಹೆಸರಿನ್ನಲ್ಲಿ ಬೇಕಾ? ಇದರಿಂದ ಜೀವನದಲ್ಲಿ ಘಟಿಸಿದ ಚಿಕ್ಕ ಪುಟ್ಟ ಪ್ರಕರಣಗಳನ್ನು ಮರೆತು ನೆಮ್ಮದಿಯ ಜೀವನ ನಡೆಸುತ್ತಿರುವ ಸಾರ್ವಜನಿಕರಿಗೆ ತೊಂದರೆ ಕೊಡುವುದು ಯಾವ ನ್ಯಾಯ?
ಒಂದು ಕಡೆ ನೋಟೀಸ್, ಪೇದೆಗಳ ಫೋನ್ ಕಾಲ್, ಕೇಸ್ ವರ್ಕರ್ ಖಾಲಿ ಕಾಗದಕ್ಕೆ ಸಹಿ, ತಹಶೀಲ್ದಾರ್ ಕೊರ್ಟ್ಗೆ ವರ್ಷವಿಡೀ ಅಲೆಯುವ ಶಾಪ ಇವೆಲ್ಲವೂ ಸಾರ್ವಜನಿಕರಿಗೆ ಬೇಕಾ? ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಾ ಸರಿಯಾಗಿದೆ ಎಂದು ತೋರಿಸಲು, ಪ್ರಕರಣಗಳ ಸಂಖ್ಯೆ ನೂರಾರು ಎಂದು ಅಂಕಿಅAಶ ತೋರಿಸುವುದಕ್ಕಿಂಥ ನೈಜ ಗಲಭೆಕೋರರನ್ನು ಕರೆಸಿ ವಿಚಾರಣೆ ಮಾಡಿ ಅವರ ಬಳಿ ಬಾಂಡ್ ಬರೆಸಿಕೊಂಡು ಅವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡುವುದು ಉತ್ತಮವಲ್ಲವಾ ಎನ್ನುವುದು ಈ ಪ್ರಕ್ರಿಯೆಗಳಿಂದ ಬೇಸತ್ತ ಜನರ ಅಳಲು.