ಮಡಿಕೇರಿ, ಜ. ೧೩: ಮಂಗಳಾದೇವಿ ನಗರದ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸಂಜೆ ದುರ್ಗಾಪೂಜೆ, ವನದುರ್ಗಾ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಶೃತಿಲಯ ಭಜನಾ ಮಂಡಳಿಯಿAದ ಭಜನೆ ಸೇವೆ ನಡೆಯಿತು. ತಾ. ೧೪ ರಂದು (ಇಂದು) ಬೆಳಿಗ್ಗೆ ೭.೩೦ ರಿಂದ ಗಣಹೋಮ, ತತ್ವಹೋಮ, ನವಗೃಹ ಹೋಮ, ಸಂಜೆ ೫ ಗಂಟೆಗೆ ದುರ್ಗಾಪೂಜೆ, ಶಕ್ತಿದಂಡಕ ಮಂಡಲ ಪೂಜೆ, ಅನ್ನದಾನ ಹಾಗೂ ಭಜನೆ ನಡೆಯಲಿದೆ.