ಸೋಮವಾರಪೇಟೆ, ಜ. ೧೩: ಪೊಲೀಸ್, ಅಗ್ನಿಶಾಮಕ ದಳ, ಅಬಕಾರಿ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಸಹಾಯಕರಾಗಿ ದುಡಿಯುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗಳಿAದ ನಿರಂತರವಾಗಿ ಲಂಚ ಪಡೆಯುತ್ತಿದ್ದ ಹೋಂ ಗಾರ್ಡ್ ಘಟಕಾಧಿಕಾರಿ ರುದ್ರಪ್ಪನನ್ನು ಎಸಿಬಿ ತನ್ನ ಬಲೆಗೆ ಕೆಡವಿದೆ.

ಸೋಮವಾರಪೇಟೆ ಘಟಕದ ಘಟಕಾಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಟ್ಟಣ ಸಮೀಪದ ಮಾಟ್ನಳ್ಳಿ ನಿವಾಸಿ ರುದ್ರಪ್ಪನನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ರಾಘವೇಂದ್ರ ಕ್ಯಾಂಟೀನ್ ಹಾಗೂ ಹೂ ಸ್ವಾಮಿ ಅಂಗಡಿ ಮಧ್ಯದ ಗಲ್ಲಿಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯಿAದ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ‘ರೆಡ್‌ಹ್ಯಾಂಡ್’ಆಗಿ ರುದ್ರಪ್ಪನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈತನ ಅಧೀನದಲ್ಲಿರುವ ಗೃಹರಕ್ಷಕ ದಳದ ಸಿಬ್ಬಂದಿಗಳು ತಮಗೆ ಸಿಗುವ ಸಂಬಳದಿAದ ಪ್ರತಿ ತಿಂಗಳು ತಲಾ ಒಂದು ಸಾವಿರ ರೂಪಾಯಿ ಲಂಚವನ್ನು ರುದ್ರಪ್ಪನಿಗೆ ನೀಡಬೇಕಾಗಿತ್ತು. ಲಂಚ ನೀಡದಿದ್ದರೆ ಬೇರೆಡೆಗೆ ಎತ್ತಂಗಡಿ ಮಾಡುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು, ಇದರಿಂದ

(ಮೊದಲ ಪುಟದಿಂದ) ಬೇಸತ್ತ ಗೃಹರಕ್ಷಕ ಸುನಿಲ್ ಅವರು ಎಸಿಬಿಗೆ ದೂರು ನೀಡಿದ್ದರು. ಇಂದು ಮಧಾಹ್ನದ ಸಮಯದಲ್ಲಿ ಖಾಸಗಿ ಬಸ್ ನಿಲ್ದಾಣದ ರಾಘವೇಂದ್ರ ಕ್ಯಾಂಟಿನ್ ಗಲ್ಲಿಯಲ್ಲಿ ಸಿಬ್ಬಂದಿ ಸುನಿಲ್ ಅವರಿಂದ ರೂ. ಒಂದು ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾರ್ಯಾ ಚರಣೆಯಲ್ಲಿ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಪೊಲೀಸ್ ಇನ್ಸ್ಪೆಕ್ಟರ್ ಶಿಲ್ಪಾ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಗೃಹರಕ್ಷಕ ದಳದ ಘಟಕಾಧಿಕಾರಿ ರುದ್ರಪ್ಪನ ಕೈ ಕೆಳಗೆ ೨೫ ರಿಂದ ೩೦ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಈತನೇ ಸಿಬ್ಬಂದಿಗಳ ಉಸ್ತುವಾರಿ ವಹಿಸಿಕೊಂಡಿದ್ದ. ನಿಮಗೆ ಸಿಗುವ ಸಂಬಳದಲ್ಲಿ ಪ್ರತಿ ತಿಂಗಳು ೧ ಸಾವಿರ ಕೊಡುವಂತೆ ಷರತ್ತು ವಿಧಿಸುತ್ತಿದ್ದ. ಹೊಸದಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಸಂದರ್ಭವೂ ಈತನಿಗೆ ಹಣ ನೀಡಬೇಕಾಗಿತ್ತು.

ನಾವುಗಳು ಕಷ್ಟಪಟ್ಟು ದುಡಿದ ಹಣದಲ್ಲೂ ಲಂಚ ಕೇಳುತ್ತಿದ್ದ ರುದ್ರಪ್ಪನ ವಿರುದ್ಧ ಈ ಹಿಂದೆಯೇ ದೂರು ನೀಡಬೇಕಾಗಿತ್ತು. ಇದೀಗ ಎಸಿಬಿ ಬಲೆಗೆ ಬಿದ್ದಿರುವದು ಸಮಾಧಾನ ತಂದಿದೆ. ಇನ್ನಾದರೂ ಇಂತಹ ಕಿರುಕುಳ ನಿಲ್ಲಲಿ ಎಂದು ಗೃಹರಕ್ಷಕ ದಳದ ಸಿಬ್ಬಂದಿಗಳು ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.