ಶ್ರೀಮAಗಲ, ಜ. ೧೩: ಯುಕೊ ಸಂಘಟನೆಯ ಆಶ್ರಯದಲ್ಲಿ ಅಮ್ಮತ್ತಿ ಒಂಟಿಯAಗಡಿಯ ಬೈರನಾಡ್ ಮಂದ್‌ನಲ್ಲಿ ನಡೆದ ೭ನೇ ವರ್ಷದ ಕೊಡವ ಮಂದ್ ನಮ್ಮೆಯಲ್ಲಿ ವಿವಿಧ ವೈವಿಧ್ಯಮಯ ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಪ್ರದರ್ಶನ ಕೊಡವ ಸಾಂಸ್ಕೃತಿಕ ಸಿರಿವಂತಿಕೆಯನ್ನು ಅನಾವರಣಗೊಳಿಸುವ ಮೂಲಕ ಜನ ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಕೊಡವ ಮಹಿಳೆಯರಲ್ಲಿ ಸೌಂದರ್ಯಕ್ಕೆ ಮೆರಗು ನೀಡುವ ಜಡೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಬೋಜಿ ಜಡೆರ ಬೋಜಕ್ಕ, ಬೋಜಿ ಜಡೆರ ಬೋಜಿ ಮೋವ ಎಂಬ ಪ್ರದರ್ಶನ ಜನಮನ ಸೆಳೆಯಿತು. ಮಹಿಳೆಯರು ಮತ್ತು ಯುವತಿಯರು ತಮ್ಮ ಸೌಂದರ್ಯಕ್ಕೆ ಮೆರಗು ನೀಡುವ ಮತ್ತು ಜಡೆಗೆ ವಿಶೇಷ ಕಾಳಜಿ ತೋರಿ ತಮ್ಮ ನೀಳವಾದ ಜಡೆಯನ್ನು ಹೆಮ್ಮೆಯಿಂದ ವೇದಿಕೆಯಲ್ಲಿ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದರು.

ಕೊಡವ ಪುರುಷರ ಪೌರುಷದ ಮತ್ತು ಸಂಸ್ಕೃತಿಯ ಪ್ರತೀಕವಾದ ಮೀಸೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಮತ್ತೊಂದು ಸ್ಪರ್ಧೆಯಾದ ಕೊಂಬ ಮೀಸೆರ ಬಂಬೊ ಎಂಬ ಸ್ಪರ್ಧೆಯಲ್ಲಿ ಹಿರಿಯರು ಹಾಗೂ ಯುವಕರು ತಮ್ಮ ಮೀಸೆಯನ್ನು ಕೈಯಿಂದ ಸವರುತ್ತ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿದರು. ಇದರೊಂದಿಗೆ ಕೊಡವರ ಇತಿಹಾಸದ ಮೆಲುಕು ಹಾಕುವ ಹಾಗೂ ಕೊಡವ ಪರಂಪರೆಯನ್ನು ಬಿಂಬಿಸುವ ಸಾಮಾಜಿಕ ಬದುಕು, ಉಡುಗೆ-ತೊಡುಗೆ, ಕೌಟುಂಬಿಕ ವ್ಯವಸ್ಥೆ, ಕೃಷಿ ಕಸುಬು, ಬೇಟೆ, ಯೋಧ ಪರಂಪರೆ, ಕೊಡವ ಸ್ವಾತಂತ್ರö್ಯ ಹೋರಾಟಗಾರರು, ಸಾಹಿತಿಗಳು, ಸಾಧಕರು, ತೆರೆ ಮರೆಗೆ ಸರಿಯುತ್ತಿರುವ ಗ್ರಾಮೀಣ ಕ್ರೀಡೆ ಮರು ಸೃಷ್ಠಿಯ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಇದರಲ್ಲಿ ಖ್ಯಾತ ಕನ್ನಡ ಚಲನ ಚಿತ್ರ ಕಲಾವಿದರು ಭಾಗವಹಿಸಿದ್ದರು. ಕಳ್ಳಿಚಂಡ ದೀನ ಉತ್ತಪ್ಪ ಅವರ ನಿರ್ದೇಶನದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ವಯೋಮಾನದ ಸುಮಾರು ೨೦೦ ಜನ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಹಿಂದಿನ ಕಾಲದಲ್ಲಿ ಹುಲಿಯನ್ನು ಭೇಟೆಯಾಡಿ ಕೊಂದ ಕೊಡವರಿಗೆ ಹುಲಿಯನ್ನು ಪಕ್ಕದಲ್ಲಿ ಇರಿಸಿ ಮಾಡುತ್ತಿದ್ದ ಮದುವೆ (ನರಿಮಂಗಲ) ಪದ್ಧತಿಯ ವೇದಿಕೆಯಲ್ಲಿ ಗಮನ ಸೆಳೆಯಿತು. ಇದರೊಂದಿಗೆ ಉಮ್ಮತ್ತಾಟ್, ಬೊಳಕಾಟ್, ಪರೆಯಕಳಿ, ಬಾಳೊಪಾಟ್, ಕತ್ತಿಯಾಟ್, ಕೋಲಾಟ್, ಕೊಡವ ನೃತ್ಯ ಪ್ರದರ್ಶನ ಮತ್ತು ಸ್ಪರ್ಧೆ ಮಂದ್ ನಮ್ಮೆಗೆ ಕಳೆ ನೀಡಿದವು. ಇದರೊಂದಿಗೆ ಸಾಮೂಹಿಕ ವಾಲಗತ್ತಾಟ್‌ನಲ್ಲಿ ಎಲ್ಲ ವಯೋಮಾನದ ಮಹಿಳೆಯರು ಪುರುಷರು ಮತ್ತು ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಫಲಿತಾAಶ : ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ : ಪುರುಷರ ವಿಭಾಗ ಅಪ್ಪುಮಣಿಯಂಡ ಭಜನ್ (ಪ್ರಥಮ), ಬಡುವಂಡ ಉತ್ತಪ್ಪ (ದ್ವಿತೀಯ), ಅಜ್ಜೇಟಿರ ಗೌತಮ್ (ತೃತೀಯ), ಮಹಿಳೆಯರ ವಿಭಾಗ ಕಳ್ಳಿಚಂಡ ತನ್ವಿ ಉತ್ತಪ್ಪ (ಪ್ರ).

ಪರೆಯಕಳಿ ಪೈಪೋಟಿ : ಪೊನ್ನಂಪೇಟೆ ಕೊಡವ ಸಮಾಜ ಮಂದ್ (ಪ್ರ), ಬೆಕ್ಕೆಸೊಡ್ಲೂರು ಮಂದ್ (ದ್ವಿ), ಹುದಿಕೇರಿಯ ಮಡಕೋಡ್ ಮಂದ್ (ತೃ).

ಬಾಳೋಪಾಟ್ : ನೆಲಜಿ ಟಚ್ಚತ್ತಾಣೆ ಮಂದ್ (ಪ್ರ), ಮಕ್ಕಂದೂರ್ ಉಮ್ಮೇಟಿ ಮಂದ್ (ದ್ವಿ).

ಕೊಂಬ ಮೀಸೆರ ಬಂಬೊ : ಚೆಪ್ಪುಡೀರ ಸುಜುಕರುಂಬಯ್ಯ (ಪ್ರ), ಕಾಳಚಂಡ ಬೆಳ್ಯಪ್ಪ (ದ್ವಿ).

ಬೋಜಿ ಜಡೆರ ಬೋಜಕ್ಕ : ಕೊಳುವಂಡ ತೇಜ್ ತಂಗಪ್ಪ (ಪ್ರ), ನೆಲ್ಲೀರ ಚೋಂದಮ್ಮ (ದ್ವಿ), ನಾಮೇರ ಯಜ್ನ ಜೋಯಪ್ಪ (ತೃ) ಬಹುಮಾನ ಪಡೆದುಕೊಂಡರು.

ಡಾ. ಕಾಳಿಮಾಡ ಶಿವಪ್ಪ ಅವರು ಪುತ್ತರಿ ಹಾಡು ಹಾಡಿದರು. ಪೊರ್ಕೋಂಡ ಸವಿತಾ ಬೋಪಣ್ಣ ಸ್ವಾಗತಿಸಿ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಮತ್ತು ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿದರು.

ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪುರುಷರ ಸ್ಪರ್ಧೆಗೆ ಪೆಮ್ಮಡಿಯಂಡ ದಿ. ಎಂ. ಮಂದಣ್ಣ ಅವರ ಜ್ಞಾಪಕಾರ್ಥವಾಗಿ ಮೂರ್ನಾಡುವಿನ ಪೆಮ್ಮಡಿಯಂಡ ವೇಣು ಅಪ್ಪಣ್ಣ ಟ್ರೋಫಿ ಹಾಗೂ ನಗದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮಹಿಳೆಯರ ಸ್ಪರ್ಧೆಗೆ ಚೆಂಬAಡ ತೇಜದಶ ಅವರ ಜ್ಞಾಪಕಾರ್ಥವಾಗಿ ಪತಿ ಪಚ್ಚಾಟ್ ಗ್ರಾಮದ ಚೆಂಬAಡ ದಶಗಣಪತಿ ಹಾಗೂ ಪುತ್ರ ಶಂಕಸೋಮಯ್ಯ ಟ್ರೋಫಿ ಹಾಗೂ ನಗದು, ಕೊಂಬ ಮೀಸೆರ ಬಂಬೊ, ಬೋಜಿ ಜಡೆರ ಬೋಜಕ್ಕ, ಬೋಜಿ ಜಡೆರ ಬೋಜಿ ಮೋವ ಪೈಪೋಟಿಗೆ ಕುಟ್ಟ ಪಲ್ಲೇರಿ ಗ್ರಾಮದ ಕಳ್ಳಿಚಂಡ ರತ್ನಪೂವಯ್ಯ ಅವರು ನಗದು ಹಾಗೂ ಟ್ರೋಫಿ, ಪರಿಯಕಳಿಗೆ ಪೊನ್ನಂಪೇಟೆಯ ಚೆಪ್ಪುಡೀರ ದಿ. ದೇವಯ್ಯ ಮತ್ತು ದಿ. ಕಮಲ ಅವರ ಜ್ಞಾಪಕಾರ್ಥವಾಗಿ ಪುತ್ರ ಚೆಪ್ಪುಡೀರ ಸುಜು ಕರುಂಬಯ್ಯ ಟ್ರೋಫಿ ಹಾಗೂ ನಗದು ಬಹುಮಾನ, ಮಹಿಳೆಯರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪ್ರಥಮ ಸ್ಥಾನಕ್ಕೆ ವಿಶೇಷವಾಗಿ ಆಪಾಡಂಡ ತನು ಅವರ ಜ್ಞಾಪಕಾರ್ಥವಾಗಿ ಮಂಡೇಡ ಗಿರಿ ಅವರು ಟ್ರೋಫಿ ಪುರುಷರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಪ್ರಥಮ ಸ್ಥಾನಕ್ಕೆ ವಿಶೇಷವಾಗಿ ಪೊರ್ಕೋಂಡ ಮುತ್ತಿ ಮತ್ತು ಶಂಕರಿ ಅವರ ಜ್ಞಾಪಕಾರ್ಥ ಪುತ್ರ ಬೋಪಣ್ಣ ಅವರು ಟ್ರೋಫಿ ಪ್ರಾಯೋಜನೆ ನೀಡಿದರು.