ಮಡಿಕೇರಿ, ಜ. ೧೩: ದೇಶದ ರಕ್ಷಣಾ ಪಡೆಗಳ ಪಿತಾಮಹ ಎನಿಸಿರುವ ಪ್ರಪ್ರಥಮ ಮಹಾದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯಾದ ಜನವರಿ ೨೮ ಸಮೀಪಿಸುತ್ತಿದೆ. ಈ ಸೇನಾನಿಯ ಜನ್ಮದಿನಾಚರಣೆ ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಸರಕಾರಿ ಕಾರ್ಯಕ್ರಮವಾಗಿಯೂ ರೂಪುಗೊಂಡಿದೆ. ಫೀ.ಮಾ. ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಸಂಘಟನೆ ಮೂಲಕ ಇದನ್ನು ಪ್ರಾರಂಭಿಸಲಾಗಿದ್ದು, ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತದ ಮೂಲಕ ಸರಕಾರಿ ಕಾರ್ಯಕ್ರಮವಾಗಿ ಪರಿವರ್ತನೆಯಾಗಿತ್ತು. ಫೋರಂ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯೂ ಇದಕ್ಕೆ ಕೈಜೋಡಿ ಸುವದರೊಂದಿಗೆ ಜ. ೨೮ ರಂದು ಪ್ರತಿವರ್ಷ ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಕಾರ್ಯಪ್ಪ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ನಡೆಯುತ್ತಿದೆ.ಆದರೆ ಕಳೆದ ಎರಡು ವರ್ಷಗಳಲ್ಲಿ ಸರಕಾರದ ಮೂಲಕ ದೊರೆಯುತ್ತಿದ್ದ ಅನುದಾನ ಬಿಡುಗಡೆ ಯಾಗದೆ, ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿ ಸತತ ಎರಡು ವರ್ಷ ಕೊನೆಯ ಹಂತದವರೆಗೂ ಕಾರ್ಯಕ್ರಮವಾಗಿಯೂ ರೂಪುಗೊಂಡಿದೆ. ಫೀ.ಮಾ. ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಸಂಘಟನೆ ಮೂಲಕ ಇದನ್ನು ಪ್ರಾರಂಭಿಸಲಾಗಿದ್ದು, ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತದ ಮೂಲಕ ಸರಕಾರಿ ಕಾರ್ಯಕ್ರಮವಾಗಿ ಪರಿವರ್ತನೆಯಾಗಿತ್ತು. ಫೋರಂ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯೂ ಇದಕ್ಕೆ ಕೈಜೋಡಿ ಸುವದರೊಂದಿಗೆ ಜ. ೨೮ ರಂದು ಪ್ರತಿವರ್ಷ ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಕಾರ್ಯಪ್ಪ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ನಡೆಯುತ್ತಿದೆ.
ಆದರೆ ಕಳೆದ ಎರಡು ವರ್ಷಗಳಲ್ಲಿ ಸರಕಾರದ ಮೂಲಕ ದೊರೆಯುತ್ತಿದ್ದ ಅನುದಾನ ಬಿಡುಗಡೆ ಯಾಗದೆ, ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿ ಸತತ ಎರಡು ವರ್ಷ ಕೊನೆಯ ಹಂತದವರೆಗೂ ಆದರೆ ಆ ವರ್ಷ ನಡೆದ ಕಾರ್ಯ ಕ್ರಮಕ್ಕೆ ಅನುದಾನ ಅಧಿಕೃತವಾಗಿ ಪ್ರಕಟವಾಗಿದ್ದರೂ ಮಂಜೂ ರಾಗಿರಲಿಲ್ಲ. ಕಳೆದ ಸಾಲಿನಲ್ಲಿಯೂ ಈ ಬಗ್ಗೆ ಯಾವದೇ ಪ್ರಸ್ತಾಪಗಳು ಇಲ್ಲದಂತಾಗಿದ್ದು, ಬಳಿಕ ಕೊಡವ ಅಕಾಡೆಮಿಯ
(ಮೊದಲ ಪುಟದಿಂದ) ಅನುದಾನದ ಮೂಲಕ ಕಾರ್ಯಕ್ರಮ ನಡೆಸಲಾಗಿದ್ದು, ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಫೋರಂನ ಸಹಭಾಗಿತ್ವದಲ್ಲಿ ಸಣ್ಣ ಪ್ರಮಾಣದ ಕಾರ್ಯಕ್ರಮವನ್ನು ಆಚರಿಸಲಾಗಿತ್ತು.
ಇದೀಗ ರೂ. ೨೦ ಲಕ್ಷ ಬಿಡುಗಡೆ
ಇದೀಗ ಈ ವರ್ಷ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜನ್ಮದಿನಾಚರಣೆಗಾಗಿ ಮೊದಲೇ ಜಿಲ್ಲಾಡಳಿತಕ್ಕೆ ರೂ. ೧೦ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಅನುದಾನ ತಲುಪಿದೆ. ಒಂದೆರಡು ದಿನಗಳ ಹಿಂದೆ ಇಲಾಖೆಯಿಂದ ಅನುದಾನ ಮಂಜೂರಾಗಿದೆ. ಈ ಬಾರಿಯ ರೂ. ೧೦ ಲಕ್ಷ ಅನುದಾನದೊಂದಿಗೆ ೨೦೧೮-೧೯ನೇ ಸಾಲಿಗೆ ಸಂಬAಧಿಸಿದ ರೂ. ೧೦ ಲಕ್ಷ ಬಾಕಿ ಹಣವನ್ನು ನೀಡಲಾಗಿದೆ.
ಈ ನಡುವೆ ಈ ತನಕವೂ ಅನುದಾನ ಲಭ್ಯತೆ ಹಾಗೂ ಸರಕಾರದ ಕಾರ್ಯಕ್ರಮದ ಬಗ್ಗೆ ನಿರೀಕ್ಷೆ ಇಲ್ಲದಿದ್ದ ಕಾರಣದಿಂದಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಮೂಲಕ ಹಾಗೂ ಫೋರಂನ ಮೂಲಕ ಬೇರೆ ಬೇರೆ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಚಿಂತನೆ ನಡೆದಿದ್ದು, ಇದರ ಪ್ರಯತ್ನವೂ ಆರಂಭವಾಗಿತ್ತು. ಇದೀಗ ಮೊದಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ತಾ. ೨೮ರ ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರವಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಯಾವ ಕ್ರಮ ಅನುಸರಿಸಲಿದೆ ಎಂದು ಕಾದು ನೋಡಬೇಕಿದೆ.
ಕಾರ್ಯಕ್ರಮಕ್ಕೆ ಸಹಕಾರ ನೀಡುವದಾಗಿ ಕೊಡವ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಹಾಗೂ ಫೋರಂನ ಸಂಚಾಲಕ ಮೇಜರ್ ನಂದಾ ನಂಜಪ್ಪ ತಿಳಿಸಿದ್ದಾರೆ. ಆದರೂ ಕೆಲವು ಸ್ಪರ್ಧೆಗಳನ್ನು ವಿಶೇಷವಾಗಿ ಏರ್ಪಡಿಸುವ ಚಿಂತನೆ ನಡೆಸಲಾಗಿದೆ ಎಂದು ಅವರುಗಳು ತಿಳಿಸಿದ್ದಾರೆ. ಕಾರ್ಯಕ್ರಮದ ರೂಪು-ರೇಷೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ದರ್ಶನ್ ತಿಳಿಸಿದ್ದಾರೆ.