ಗುಡ್ಡೆಹೊಸೂರು, ಜ. ೧೩: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ತಾ. ೧೪ರಂದು (ಇಂದು) ಮಕರ ಜ್ಯೋತಿ ದರ್ಶನವಾಗಲಿದೆ. ಸಂಜೆ ೬.೪೫ಕ್ಕೆ ಕೇರಳ ರಾಜ್ಯದ ಶಭರಿಮಲೆ ಕ್ಷೇತ್ರದ ಗರ್ಭಗುಡಿಯ ನೇರ ಎದುರು ಭಾಗದಲ್ಲಿರುವ ಪೊನ್ನಂಬಲ ಮೇಡ್‌ನಲ್ಲಿ ಜ್ಯೋತಿ ದರ್ಶನವಾಗಲಿದೆ. ಜ್ಯೋತಿ ದರ್ಶನಕ್ಕಾಗಿ ಅಯ್ಯಪ್ಪ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಶಬರಿಮಲೆ ಅಯ್ಯಪ್ಪನ ದರ್ಶನÀ ಪಡೆಯಲು ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಶಬರಿಮಲೆ ವ್ಯಾಪ್ತಿಯಲ್ಲಿ ಕೊರೊನಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕ್ಷೇತ್ರಕ್ಕೆ ಆಗಮಿಸಲು ಆನ್ ಲ್ಯೆನ್ ಬುಕ್ಕಿಂಗ್ ಮಾಡಿ ಟಿಕೆಟ್ ಪಡೆಯಬೇಕಾಗಿದೆ. ಅಲ್ಲದೆ ೪೮ ಗಂಟೆಯೊಳಗೆ ಕೋವಿಡ್ ಪರೀಕ್ಷೆ ಮಾಡಿಸಿದ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬಂದವರಿಗೆ ಈ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಚೆನ್ನಾಗಿ ಆಗುತ್ತಿದೆ. ೧೮ ಮೆಟ್ಟಿಲುಗಳನ್ನು ಭಕ್ತರು ಸುಗಮವಾಗಿ ಆನಂದದಿAದ ಹತ್ತಲು ಸಾಧ್ಯವಾಗಿದೆ. ಎಲ್ಲಿಯೂ ಜನಜಂಗುಳಿಗೆ ಅವಕಾಶವಿಲ್ಲ. ಎಷ್ಟೋ ವರ್ಷಗಳಿಂದ ಸ್ವಾಮಿ ದರ್ಶನಕ್ಕೆ ಬರುತ್ತಿದ್ದೆವು. ಆದರೆ ಈ ಬಾರಿಯ ಅಯ್ಯಪ್ಪ ದರ್ಶನದಿಂದ ಜೀವನ ಪಾವನವಾಯಿತು ಎಂಬ ಅಭಿಪ್ರಾಯ ಸನ್ನಿಧಾನ ವ್ಯಾಪ್ತಿಯಲ್ಲಿ ಭಕ್ತರಿಂದ ಕೇಳಿಬಂತು. ದೇವಸ್ಥಾನ ಆವರಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅನ್ನದಾನ ವ್ಯವಸ್ಥೆ ದೇವಸ್ಥಾನ ಸಮಿತಿ ವತಿಯಿಂದ ನಡೆಯುತ್ತಿದೆ. ಪ್ರತಿದಿನ ರಾತ್ರಿ ೯ ಗಂಟೆಗೆ ಸರಿಯಾಗಿ ಹರಿವರಾಸನಂ ಗೀತೆಯೊಂದಿಗೆ ದೇವಸ್ಥಾನ ಬಾಗಿಲು ಮುಚ್ಚಲಾಗುತ್ತಿದೆ.

ಕೇರಳದ ಎಲ್ಲಾ ಭಾಗಗಳಲ್ಲಿ ತುಂತುರು ಮಳೆ ಬೀಳುತ್ತಿದೆ. ಶಬರಿಮಲೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ನೀಲಕ್ಕಲ್ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡುವುದನ್ನು ನಿಲ್ಲಿಸಲಾಗಿದೆ. ಮಲಪುರಂ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೂ. ೧೫೦೦ ಹಣ ನೀಡಿ ಪ್ರಮಾಣ ಪತ್ರ ಪಡೆದು ಪಾಸ್‌ನೊಂದಿಗೆ ಯಾತ್ರೆ ಮುಂದುವರಿಸಬೇಕಾಗಿದೆ. ಎಲ್ಲಾ ಪ್ರಕ್ರಿಯೆಗಳು ನೀಲಕ್ಕಲ್ ನಲ್ಲಿ ನಡೆಯುತ್ತದೆ. ಆಧಾರ್ ಲಿಂಕ್ ಆಗಿರುವುದರಿಂದ ನಮ್ಮ ದಾಖಲಾತಿಗಳನ್ನು ವಾಹನ ನಿಲುಗಡೆ ಸ್ಥಳ ನೀಲಕ್ಕಲ್‌ನಲ್ಲಿ ಪೋಲಿಸ್ ಇಲಾಖೆ ವತಿಯಿಂದ ಸ್ಕಾö್ಯನ್ ಮಾಡಲಾಗುತ್ತದೆ. ನಂತರ ಪಂಪಾಗೆ ತೆರಳಬೇಕು. ಅಲ್ಲಿಯೂ ಅದೇ ಪ್ರಕ್ರಿಯೆ. ಗುರುವಾಯೂರು ದೇವಸ್ಥಾನದಲ್ಲಿ ದರ್ಶನಕ್ಕೆ ಆನ್‌ಲ್ಯೆನ್ ಬುಕಿಂಗ್ ಕಡ್ಡಾಯ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪಂಪಾನದಿ ವ್ಯಾಪ್ತಿಯಲ್ಲಿ ನದಿ ಪ್ರವಾಹ ಬಂದು ಮೊದಲಿನ ಚಿತ್ರಣವೇ ಬದಲಾಗಿದೆ. ನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶ ನೀಡುತ್ತಿಲ್ಲ; ಅದರ ಬದಲಿಗೆ ಅಲ್ಲಿಯೇ ಪಕ್ಕದಲ್ಲಿ ಸ್ನಾನಕ್ಕೆ ಉತ್ತಮವಾದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ನಮ್ಮ ರಾಜ್ಯದಿಂದ ಭಕ್ತರ ಸಂಖ್ಯೆ ವಿರಳ ವಾಗಿತ್ತು ಆಂಧ್ರ, ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ವರದಿ : ಗಣೇಶ್ ಕುಡೆಕಲ್ (ಶಬರಿಮಲೆಯಿಂದ)