ವೀರಾಜಪೇಟೆ, ಜ. ೧೩: ಪೆರುಂಬಾಡಿಯಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ವೊಂದರ ಬಂಧಿತ ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಆರೋಪಿ ಅಮೃತ್ ಎಂಬಾತನನ್ನು ಇಂದು ವಿಚಾರಣೆ ಗಾಗಿ ಮಡಿಕೇರಿಯ ಜಿಲ್ಲಾ ಕಾರಾ ಗೃಹದಿಂದ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆದೊಯ್ದು ಹಿಂತಿರುಗುವ ವೇಳೆ ಆರೋಪಿ ಅಮೃತ್ ಆಸ್ಪತ್ರೆಯ ಕಾಂಪೌAಡ್ ಹಾರಿ ಪರಾರಿಯಾಗಿ ದ್ದಾನೆ. ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾಧೀನ ಆರೋಪಿಯನ್ನು ಕರೆ ತಂದಿದ್ದ ಪೊಲೀಸರು ಸಾರ್ವಜನಿಕ ಆಸ್ಪತ್ರೆ, ಸುತ್ತಮುತ್ತ, ತಾಲೂಕು ಮೈದಾನ, ಮಠದ ಗದ್ದೆ, ಮಡಿಕೇರಿ ರಸ್ತೆ, ಛತ್ರಕೆರೆ ಸುತ್ತಮುತ್ತ ರಾತ್ರಿವರೆಗೂ ಹುಡುಕಾಡಿದರೂ ಆರೋಪಿಯ ಸುಳಿವು ದೊರೆಯ ಲಿಲ್ಲವೆನ್ನಲಾಗಿದೆ. ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.