ಸಿದ್ದಾಪುರ, ಜ. ೧೨: ಪ್ರಬಲ ಸಮುದಾಯದಿಂದ ಎಸ್.ಟಿ. ಮೀಸಲಾತಿ ನೀಡಬೇಕೆಂಬ ಒತ್ತಾಯಕ್ಕೆ ಆದಿವಾಸಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ

ಬಲಾಢ್ಯ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಿದರೆ ಬುಡಕಟ್ಟು ಸಮುದಾಯದ ಸ್ಥಾನಮಾನ ಕಸಿದಂತಾಗುತ್ತದೆ. ಈ ಕಾರಣದಿಂದ ಆ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಬಾರದು ಎಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಆದಿವಾಸಿಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರಗಳು ಹಾಗೂ ರಾಜ್ಯಪಾಲರಿಗೆ ಮನವಿ ನೀಡಲಾಗುವುದು ಎಂದು ಆದಿವಾಸಿ ಸಂಘಟನೆಯ ಪ್ರಮುಖ ಹಾಗೂ ತಾಲೂಕು ಪಂಚಾಯ್ತಿ ಸದಸ್ಯ ವೈ. ಎಂ. ಪ್ರಕಾಶ್ ತಿಳಿಸಿದ್ದಾರೆ. ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಹಾಡಿಯಲ್ಲಿ ತಾಲೂಕಿನ ವಿವಿಧ ಭಾಗದ ಆದಿವಾಸಿ ಸಂಘಟನೆಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ತಲ ತಲಾಂತರಗಳಿAದ ಅರಣ್ಯದಂಚಿನಲ್ಲಿ ವಾಸವಾಗಿರುವ ಆದಿವಾಸಿಗಳು ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಜಿಲ್ಲೆಯಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.ಆದಿವಾಸಿಗಳ ಪರವಾಗಿರಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳು ಶ್ರೀಮಂತರ ಪರ ಇದ್ದಾರೆ . ಹಲವೆಡೆ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಎಸಗುವ ಮೂಲಕ ಯಾವುದೇ ಸೌಲಭ್ಯ ಸಿಗದಂತೆ ಮಾಡುತ್ತಿದ್ದಾರೆ.ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಹಾಡಿಯಲ್ಲಿ ತಾಲೂಕಿನ ವಿವಿಧ ಭಾಗದ ಆದಿವಾಸಿ ಸಂಘಟನೆಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ತಲ ತಲಾಂತರಗಳಿAದ ಅರಣ್ಯದಂಚಿನಲ್ಲಿ ವಾಸವಾಗಿರುವ ಆದಿವಾಸಿಗಳು ಇಂದಿಗೂ ಮೂಲ ಸೌಕರ್ಯ ವಂಚಿತರಾಗಿ ಜಿಲ್ಲೆಯಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.ಆದಿವಾಸಿಗಳ ಪರವಾಗಿರಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳು ಶ್ರೀಮಂತರ ಪರ ಇದ್ದಾರೆ . ಹಲವೆಡೆ ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಎಸಗುವ ಮೂಲಕ ಯಾವುದೇ ಸೌಲಭ್ಯ ಸಿಗದಂತೆ ಮಾಡುತ್ತಿದ್ದಾರೆ.

ನೀಡಿದ್ದರೂ ಆರ್‌ಟಿಸಿಯಲ್ಲಿ ಅರಣ್ಯ ಪ್ರದೇಶ ಎಂದಿದೆ. ಇತರ ಸಮುದಾಯದವರಿಗೆ ಕುಟುಂಬದ ಹೆಸರಿನಲ್ಲಿ ಆರ್‌ಟಿಸಿ ಸಿಕ್ಕುತ್ತದೆ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷö್ಯತನದಿಂದ ಆದಿವಾಸಿಗಳಿಗೆ ಸಿಗುವ ಸೌಲಭ್ಯಗಳು ಇಲ್ಲದಂತಾಗಿದೆ.

ಆದಿವಾಸಿಗಳ ಬೇಡಿಕೆ ಈಡೇರ ದಿದ್ದಲ್ಲಿ ಹೋರಾಟ ಮಾಡಬೇಕಾಗು ತ್ತದೆ ಎಂದು ಎಚ್ಚರಿಸಿದರು.

ಚೇನಿಹಡ್ಲು ಗಿರಿಜನ ಮುಖಂಡ ಪಿ.ಸಿ. ರಾಮು ಮಾತನಾಡಿ, ಆದಿವಾಸಿ ಸಂಘಟನೆಗಳು ಒಗ್ಗೂಡಿ ಕಾಲ್ನಡಿಗೆಯಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದರು.

ಅವರೆಗುಂದ ಹಾಡಿಯ ಮುಖಂಡ ಎಂ.ಸಿ. ವಾಸು ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಣ್ಯದಲ್ಲಿ ವಾಸವಾಗಿರುವ ಆದಿವಾಸಿಗಳನ್ನ ಹಲವು ವರ್ಷಗಳಿಂದಲೂ ಕಡೆಗಣಿಸುತ್ತಿರುವ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಕುಡಿಯುವ ನೀರು, ರಸ್ತೆ, ಮನೆ, ವಿದ್ಯುತ್ ಬೆಳಕಿಲ್ಲದೇ ಕತ್ತಲೆ ಜೀವನ ನಡೆಸುತ್ತಿರುವ ಅದೆಷ್ಟೋ ಆದಿವಾಸಿಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದಿವಾಸಿಗ¼ನ್ನು ಕಡೆಗಣಿಸಿ ಶ್ರೀಮಂತರಿಗೆ ಎಲ್ಲ ಸೌಲಭ್ಯಗಳನ್ನು ನೀಡುವ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು.

ಮಾಲ್ದಾರೆ ಹಣ್ಣಿನ ತೋಟ ಹಾಡಿ ಮುಖಂಡ ಎಸ್.ಎಂ. ರಾಜು, ಜಡ್ಡ ರೇಷ್ಮೆ ಹಾಡಿ ಮುಖಂಡ ಪಾಪು, ವಿವಿಧ ಹಾಡಿಗಳ ಪ್ರಮುಖರಾದ

ಉಮೇಶ, ಸಂಜೀವ, ಕಾಳ, ದೀವಾಕರ್, ಚಂದ, ಪಾರ್ವತಿ, ಸರೋಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.