ಸೊಮವಾರಪೇಟೆ,ಜ.೧೧: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಪ್ರಯುಕ್ತ, ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ನಡೆದ ೩೪ನೇ ವರ್ಷದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‌ಸಿ ತಂಡ ಪ್ರಥಮ ಸ್ಥಾನ ಪಡೆಯಿತು.

ಇಲ್ಲಿನ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಜೆಬಿಎಸ್‌ಸಿ ತಂಡವು ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೂಪರ್ ಫೈವ್ ರೈಡ್‌ನಲ್ಲಿ ಸೋಲಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಅAತಿಮ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ೧೫ ಅಂಕಗಳನ್ನು ಗಳಿಸಿದ್ದರಿಂದ ಪಂದ್ಯಾಟ ಟೈ ಆಯಿತು. ನಂತರ ಸೂಪರ್ ಫೈ ರೈಡ್‌ನಲ್ಲಿ ಕುಶಾಲನಗರದ ಜೆಬಿಎಸ್‌ಸಿ ತಂಡ ಸಂಘಟಿತ ಧಾಳಿ ನಡೆಸಿ ೧೨-೩ ಅಂಕಗಳ ಮೂಲಕ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಸತ್ಯ ಸ್ಪೋರ್ಟ್ಸ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೆಬಿಎಸ್‌ಸಿ ಎ ತಂಡ ಕಂಬ್ರಳ್ಳಿಯ ಡಿ.ಕೆ. ವಾರಿರ‍್ಸ್ ತಂಡವನ್ನು ಸೋಲಿಸುವ ಮೂಲಕ ಹಾಗೂ ಸತ್ಯ ಸ್ಪೋರ್ಟ್ಸ್ ತಂಡ ಜೆಬಿಎಸ್‌ಸಿ ಬಿ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೇರಿದ್ದವು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕಂಬ್ರಳ್ಳಿಯ ಡಿ.ಕೆ. ವಾರಿರ‍್ಸ್ ತಂಡ ಜೆಬಿಎಸ್‌ಸಿ ಬಿ. ತಂಡವನ್ನು ಸೋಲಿಸಿತು.

ಬಹುಮಾನ ಪ್ರಾಯೋಜಕರಾದ ಹರಪಳ್ಳಿ ರವೀಂದ್ರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿದರು. ನಂತರ ಮಾತನಾಡಿ, ದೇಶ ಕಂಡ ಧೀಮಂತ ಮಹಿಳೆಯರ ಪೈಕಿ ಮಾಜಿ ಪ್ರಧಾನಿ ದಿ. ಇಂದಿರಾಗಾAಧಿ ಅವರು ಅಗ್ರಮಾನ್ಯರಾಗಿದ್ದಾರೆ ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ದೇಶ ಕವಲುದಾರಿಯಲ್ಲಿದ್ದ ಸಂದರ್ಭ ೧೯೬೭ರಲ್ಲಿ ಚುಕ್ಕಾಣಿ ಹಿಡಿದ ದಿ. ಇಂದಿರಾಗಾAಧಿಯವರು ಸುಭದ್ರ ರಾಷ್ಟç ಕಟ್ಟುವಲ್ಲಿ ಯಶಸ್ವಿಯಾದರು. ಕೇವಲ ೧೭ ದಿನಗಳಲ್ಲಿಯೇ ಪಾಕಿಸ್ತಾನ ಮತ್ತು ಬಾಂಗ್ಲದೇಶಗಳ ವಿಮೋಚನೆ ಮಾಡಿದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ. ಬ್ಯಾಂಕ್‌ಗಳ ರಾಷ್ಟಿçÃಕರಣ, ೧೯೭೫ರಲ್ಲಿ ಅಣುಬಾಂಬ್ ಪರೀಕ್ಷೆ ಸೇರಿದಂತೆ ಹಲವು ಗುರುತರ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ವಹಿಸಿದ್ದರು. ವೇದಿಕೆಯಲ್ಲಿ ವಕೀಲರಾದ ಬಿ.ಈ.ಜಯೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಜೆ. ಜವರಪ್ಪ, ಪಿಎಸ್‌ಐ ಶ್ರೀಧರ್, ಮೊಗೇರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ದಾಮೋಧರ್, ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ. ದಿನೇಶ್, ಶ್ರೀ ರಾಮ ಪತ್ತಿನ ಸಂಘದ ವ್ಯವಸ್ಥಾಪಕ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.