ಸುಂಟಿಕೊಪ್ಪ, ಜ. ೧೧: ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಥರ್ಮಲ್‌ಸ್ಕಿçÃನಿಂಗ್ ಮಾಪಕವನ್ನು ನೀಡಿದರು.

ಕೊವೀಡ್-೧೯ ಕಳೆದ ೯ ತಿಂಗಳಿನಿAದ ಮುಚ್ಚಿದ್ದ ಶಾಲೆಯು ವಿದ್ಯಾಗಮ ಹಿನ್ನೆಲೆ ಶಾಲೆಗಳು ಪುನಾರಂಭಗೊAಡಿದ್ದು ಶಾಲೆಯ ಆರೋಗ್ಯ ತಪಾಸಣಾ ಥರ್ಮಲ್ ಸ್ಕಿçÃನಿಂಗ್ ಮಾಪಕವನ್ನು ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಗ್ಲೇನ್ ಮೆನೆಜೆಸ್ ಅವರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಗೀತಾ ಪಾರ್ಥಅವರಿಗೆ ಥರ್ಮಲ್‌ಸ್ಕಿçÃನಿಂಗ್ ಮಾಪಕವನ್ನು ನೀಡಿದರು.

ಇದೇ ಸಂದರ್ಭ ಮುಖ್ಯ ಶಿಕ್ಷಕಿ ಗೀತಾ ಶಾಲೆಯ ಬಡ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಸ್ಮಾರ್ಟ್ ತರಗತಿ ಆರಂಭಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದ್ದು ಸಂಸ್ಥೆಯ ಅಧ್ಯಕ್ಷ ಗ್ಲೇನ್ ಮೇನೆಜೆಸ್ ಮುಂದಿನ ದಿನಗಳಲ್ಲಿ ಸ್ಮಾರ್ಟ್ಕ್ಲಾಸ್ ತರಗತಿಗೆ ಸಹಾಯಧನ ಒದಗಿಸುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಶಶಾಂಕ್, ಖಜಾಂಜಿ ನಿಕೇಶ್, ಪದಾಧಿಕಾರಿ ಜಯದೇವ್, ಶಾಲೆಯ ಶಿಕ್ಷಕರುಗಳಾದ ಪಿ.ಇ.ನಂದ, ಎಸ್.ಕೆ.ಸೌಭಾಗ್ಯ, ಪ್ರೇಮಕುಮಾರಿ ಹಾಗೂ ಶಾಲಾ ಮಕ್ಕಳು ಮತ್ತಿತರರು ಇದ್ದರು.