ಕೂಡಿಗೆ, ಜ. ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆ ಗಳಿಂದ ಭಾರೀ ನಷ್ಟ ಅನುಭವಿಸಿ ರುವ ಹುದುಗೂರು ಗ್ರಾಮಸ್ಥರಿಗೆ ಸಹಕಾರವಾಗುವಂತೆ ಹಾರಂಗಿ ನದಿ ದಾಟಿ ಬರುವ ವ್ಯಾಪ್ತಿಯಲ್ಲಿ ಟೆಂಟಕಲ್ ಸೋಲಾರ್ ತಂತಿಯನ್ನು ಅಳವಡಿಸುವ ಕಾರ್ಯ ಅರಣ್ಯ ಇಲಾಖೆಯ ವತಿಯಿಂದ ನಡೆಯುತ್ತಿದೆ.
ಆನೆಕಾಡಿನ ಅಂಚಿನಿAದ ಬರುವ ಕಾಡಾನೆಗಳು ಬೆಂಡೆಬೆಟ್ಟದ ಮಾರ್ಗವಾಗಿ ಬಂದು ಹಾರಂಗಿ ನದಿ ದಾಟಿಕೊಂಡು ಹುದುಗೂರು ಮಾವಿನಹಳ್ಳ ಮದಲಾಪುರ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ಸೇರಿದಂತೆ ಅನೇಕ ಬೆಳೆಯನ್ನು ಹಾಳು ಮಾಡಿದ್ದವು. ಇದರಿಂದಾಗಿ ನೊಂದ ವ್ಯಾಪ್ತಿಯ ನೂರಾರು ರೈತರು ಅರಣ್ಯ ಇಲಾಖೆಯ ರಾಜ್ಯಮಟ್ಟದ ಅಧಿಕಾರಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು ಸ್ಥಳ ಪರಿಶೀಲನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸರಕಾರ ನೂತನ ಕಾಡಾನೆಗಳ ತಡೆಯ ಯೋಜನೆಯಾಗಿ ಟೆಂಟಕಲ್ ಸೋಲಾರ್ ಅಳವಡಿಸಲು ಕ್ರಮವನ್ನು ಕೈಗೊಂಡು ಟೆಂಡರ್ ಪ್ರಕ್ರಿಯೆಯ ಮೂಲಕ ಇದೀಗ ಹುದುಗೂರು ವ್ಯಾಪ್ತಿಯಲ್ಲಿ ಹಾರಂಗಿ ನದಿ ತಟದಲ್ಲಿ ಸೋಲಾರ್ ಅಳವಡಿಕೆ ಯ ಕಾರ್ಯ ಆರಂಭವಾಗಿದೆ.