ನಾಪೋಕ್ಲು, ಜ. ೧೧: ಇಲ್ಲಿನ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಿವಾಜಿ ಯುವಕ ಸಂಘದ ವತಿಯಿಂದ ನಡೆಯುತ್ತಿರುವ ನಾಲ್‌ನಾಡ್ ಹಾಕಿ ಪಂದ್ಯಾಟದ ಫೈನಲ್ ಪಂದ್ಯಾಟದಲ್ಲಿ ಯವಕಪಾಡಿ ತಂಡವು ನಾಲಡಿ ತಂಡವನ್ನು ೫-೧ ಗೋಲುಗಳಿಂದ ಮಣಿಸಿ ನಾಲ್‌ನಾಡ್ ಟ್ರೋಫಿ ಮತ್ತು ೨೦ ಸಾವಿರ ನಗದನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದ ನಾಲಡಿ ತಂಡವು ಟ್ರೋಫಿ ಮತ್ತು ೧೦ ಸಾವಿರ ನಗದನ್ನು ಪಡೆದುಕೊಂಡಿತು.

ಫೈನಲ್ ಪಂದ್ಯದಲ್ಲಿ ಯವಕಪಾಡಿ ತಂಡದ ಆಟಗಾರರು ಮಿಂಚಿನ ಆಟವಾಡಿ ಎದುರಾಳಿ ತಂಡವನ್ನು ಸೋಲಿಸಿದರು. ೧೬ ರ ಒಳಗಿನ ವಯೋಮಾನದ ಪಂದ್ಯಾಟದಲ್ಲಿ ಶಿವಾಜಿ ಜೂನಿಯರ್ ತಂಡವು ಕಕ್ಕಬ್ಬೆಯ ಸ್ಟೆಪ್ಸ್ಸ್ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರೋಚಕವಾಗಿ ನಡೆದ ಪಂದ್ಯದಲ್ಲಿ ಯುವ ಆಟಗಾರರು ಮಿಂಚಿದರು. ಪಂದ್ಯಾಟದ ಪ್ರಥಮಾರ್ಧದಲ್ಲಿ ಅಜ್ಜೇಟಿರ ಪೊನ್ನಣ್ಣ ಗೋಲು ಹೊಡೆದು ತಂಡಕ್ಕೆ ಜಯವನ್ನು ತಂದರು. ಶಿವಾಜಿ ಜೂನಿಯರ್ ತಂಡದಲ್ಲಿ ಶಿಚಾಳಿಯಂಡ ದೇಚಕ್ಕ ಮತ್ತು ಶಿಚಾಳಿಯಂಡ ಮಾನ್ಯ ಆಟವಾಡಿದರು.

ಮೈದಾನಕ್ಕೆ ಟರ್ಫ್ ಅಳವಡಿಸಿ : ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ೧೪೦ ವರ್ಷಗಳ ಇತಿಹಾಸವಿದ್ದು, ಮೈದಾನಕ್ಕೆ ಟರ್ಫ್ ಅಳವಡಿಸಲು ಊರಿನ ಜನರು ಸಹಕಾರ ನೀಡಬೇಕೆಂದು ಹೇಳಿದರು. ಮಾಜಿ ಒಲಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಹೇಳಿದರು. ಫೈನಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಕ್ರೀಡೆಯಲ್ಲಿ ಮುಂದೆ ಬರಬೇಕಾದರೆ ಟರ್ಫ್ ಮೈದಾನದಲ್ಲಿ ಆಡಿ ಅನುಭವ ಪಡೆಯಬೇಕು. ಈ ನಿಟ್ಟಿನಲ್ಲಿ ಟರ್ಫ್ ಮೈದಾನ ಅಗತ್ಯ. ನಾನು ಕೂಡ ಟರ್ಫ್ ಮೈದಾನ ನಿರ್ಮಾಣಕ್ಕೆ ನೆರವು ನೀಡುತ್ತೇನೆ. ಇಲ್ಲಿನ ಯುವಕರು ಮುಂದೆ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಆಡುವಂತಾಗಲಿ ಎಂದರು.

ಮುಖ್ಯಮಂತ್ರಿ ಪೊಲೀಸ್ ಪದಕ ವಿಜೇತ ಪೆಮ್ಮಂಡ ಅನೂಪ್ ಮಾದಪ್ಪ, ಅಂತರ ರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಕೆಲೇಟಿರ ಹರ್ಷಿತ ಬೋಪಯ್ಯ, ರಾಜ್ಯ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕಲ್ಲೇಂಗಡ ಬಬಿನ್ ಬೋಪಣ್ಣ, ಮಾಜಿ ಒಲಂಪಿಯನ್ ಬಾಳೆಯಡ ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು.

ಪಂದ್ಯಾಟದ ತಾಂತ್ರಿಕ ವರ್ಗದಲ್ಲಿ ಬುಟ್ಟಿಯಂಡ ಚಂಗಪ್ಪ ಮತ್ತು ನಾಯಕಂಡ ದೀಪು, ತೀರ್ಪುಗಾರರಾಗಿ ಕೋಂಡಿರ ಕೀರ್ತಿ, ಕುಪ್ಪಂಡ ದಿಲನ್, ಚೆಯ್ಯಂಡ ಅಪ್ಪಚ್ಚು, ಕೋಡಿಮಣಿಯಂಡ ಗಣಪತಿ, ಬೊಳ್ಳಚಂಡ ನಾಣಯ್ಯ, ನೆಲ್ಲಮಕ್ಕಡ ಪವನ್, ಕರವಂಡ ಅಪ್ಪಣ್ಣ, ಅಂಜಪರವAಡ ಕುಶಾಲಪ್ಪ, ಅಪ್ಪಚೆಟೋಳಂಡ ಅಯ್ಯಪ್ಪ, ಅರುಣ ಕಾರ್ಯನಿರ್ವಹಿಸಿದರು.

ವೀಕ್ಷಕ ವಿವರಣೆಗಾರರಾಗಿ ಕರವಂಡ ಅಪ್ಪಣ್ಣ, ಕುಲ್ಲೇಟಿರ ಅರುಣ ಬೇಬ, ಬಾಳೆಯಡ ದಿವ್ಯ ಮಂದಪ್ಪ, ಜಾಲಿ ಪೂವಪ್ಪ ಕಾರ್ಯ ನಿರ್ವಹಿಸಿದರು. ಶಿವಾಜಿ ಯುವಕ ಸಂಘದ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ ಮಾತನಾಡಿದರು. ಅಂತರ ರಾಷ್ಟಿçÃಯ ಹಾಕಿ ತೀರ್ಪುಗಾರ್ತಿ ಮುಂಡAಡ ಅನುಪಮ ಮಂದಣ್ಣ, ತಾಮರ ರೆಸಾರ್ಟ್ ವ್ಯವಸ್ಥಾಪಕ ಕಲಿಯಾಟಂಡ ಗಿರೀಶ್, ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಜ್ಜೇಟಿರ ರಾಜ ಮುತ್ತಪ್ಪ, ಮಾಜಿ ಅರ್.ಎಂ.ಸಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪ್ಲಾö್ಯಂರ‍್ಸ್ ಕ್ಲಬ್ ಅಧ್ಯಕ್ಷ ಕಾಂಡAಡ ಜಯ ಕರುಂಬಯ್ಯ, ಕುಲ್ಲೇಟಿರ ಗುರುವಪ್ಪ, ಮತ್ತಿತರರು ಇದ್ದರು.