ಸೋಮವಾರಪೇಟೆ, ಜ. ೧೧: ಸೋಮವಾರಪೇಟೆ ಮಂಡಲ ಪಂಚಾಯಿತಿ ಸದಸ್ಯರಾಗಿದ್ದ ಮಾರ್ಗರೇಟ್ ಡಿಸೋಜ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಡಿಸೋಜ ಫೌಂಡೇಷನ್ ವತಿಯಿಂದ ಪಟ್ಟಣ ಪಂ.ಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ಡಿಸೋಜ ಫೌಂಡೇಷನ್ನ ಅಧ್ಯಕ್ಷೆ ಡಾ. ಮೆಟಿಲ್ಡ ಡಿಸೋಜ ಅವರು ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿ ಮಾತನಾಡಿ, ತಮ್ಮ ತಾಯಿ ಈ ಹಿಂದಿನಿAದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಂಡಲ ಪಂಚಾಯಿತಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ನಿಧನಾನಂತರ ಅವರ ಸಮಾಜ ಮುಖಿ ಕಾರ್ಯಗಳು ಸ್ಥಗಿತಗೊಳ್ಳ ಬಾರದು ಎಂಬ ಉದ್ದೇಶದಿಂದ ಡಿಸೋಜ ಫೌಂಡೇಷನ್ ಸ್ಥಾಪಿಸಿ, ಸಮಾಜ ಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕೊರೊನಾ ಲಾಕ್ಡೌನ್ ಸಂದರ್ಭ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಪಟ್ಟಣದ ಸ್ವಚ್ಛತೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮೆಟಿಲ್ಡ ಡಿಸೋಜ ಅಭಿಪ್ರಾಯಿಸಿದರು. ಈ ಸಂದರ್ಭ ಪ.ಪಂ. ಅಧ್ಯಕ್ಷೆ ನಳಿನಿ ಗಣೇಶ್, ಸದಸ್ಯೆ ಶೀಲಾ ಡಿಸೋಜ, ಓಎಲ್ವಿ ಧರ್ಮ ಕೇಂದ್ರದ ಗುರುಗಳಾದ ಎಂ. ರಾಯಪ್ಪ, ಫೌಂಡೇಷನ್ನ ಡಯಾನ, ರೋಹಿತ್, ವಿಲಿಯಂ ಫ್ರೀಮನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೌಂಡೇಷನ್ ವತಿಯಿಂದ ಪ.ಪಂ.ನ ೨೫ ಮಂದಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು.