ಮಡಿಕೇರಿ, ನ. ೧೧: ವೀರಾಜಪೇಟೆಯ ಕದನೂರಿನ ನಿವಾಸಿ ಗಳಾದ ಮುರುಗೇಶ್ ಹಾಗೂ ತುಳಸಿ ದಂಪತಿಯ ಪುತ್ರಿ ಎಂ. ಶ್ರೀದೇವಿಗೆ ಭರತನಾಟ್ಯ ಕ್ಷೇತ್ರದಲ್ಲಿ ರಾಷ್ಟಿçÃಯ ಕನ್ನಡ ರತ್ನ ಪ್ರಶಸ್ತಿ ದೊರೆತಿದೆ. ತಾ.೧೦ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕರ್ನಾಟಕ ಕನ್ನಡ ಸಂಘದಿAದ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವÀರ ಶಿಷ್ಯೆ.