ನಾಪೋಕ್ಲು, ಜ. ೯: ಇಲ್ಲಿನ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ನಾಲ್‌ನಾಡ್ ಹಾಕಿ ಪಂದ್ಯಾಟದಲ್ಲಿ ನಾಲ್ಕು ತಂಡಗಳು ಮುನ್ನಡೆ ಸಾಧಿಸಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ ಮರಂದೋಡ ಮತ್ತು ನಾಲಡಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನಾಲಡಿ ತಂಡವು ಜಯ ಸಾಧಿಸಿ ಸೆಮಿಪೈನಲ್ ಹಂತ ತಲುಪಿತು.

ಕೊಳಕೇರಿ ಮತ್ತು ನಾಲಡಿ ಬಿ. ತಂಡಗಳ ನಡುವೆ ನಡುವಿನ ಪಂದ್ಯದಲ್ಲಿ ಕೊಳಕೇರಿ ತಂಡವು ಮುಂದಿನ ಹಂತ ತಲುಪಿತು. ಮೂರನೇ ಪಂದ್ಯದಲ್ಲಿ ಯವಕಪಾಡಿ ತಂಡವು ನೆಲಜಿ ತಂಡವನ್ನು ಸೋಲಿಸಿತು. ನಾಲ್ಕನೇ ಪಂದ್ಯದಲ್ಲಿ ನಾಪೋಕ್ಲು ತಂಡವು ಪುಲಿಕೋಟ್ ತಂಡವನ್ನು ಮಣಿಸಿ ಸೆಮಿಪೈನಲ್ ಪ್ರವೇಶಿಸಿತು.