ಕೊಚ್ಚಿಹೋದ ರಸ್ತೆ

ನಾಪೋಕ್ಲು, ಜ. ೯: ಮಳೆಯಿಂದ ಸಮೀಪದ ಪಾಲೂರು ಗ್ರಾಮದಲ್ಲಿ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಪಾಲೂರು ಗ್ರಾಮದಿಂದ ಬೈತಡ್ಕ ಕುಟುಂಬಸ್ಥರ ಗದ್ದೆಗಳ ಪಕ್ಕದಲ್ಲಿ ಹಾದು ಹೋಗುವ ಕೆಮಾಟ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಅಳವಡಿಸಿರುವ ಮೋರಿಯು ಕುಸಿದುಹೋಗಿದೆ. ಈ ಬಗ್ಗೆ ಪಾಲೂರು ಗ್ರಾಮದ ನಿವಾಸಿ ಬೈತಡ್ಕ ದೇವಯ್ಯ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ರಸ್ತೆ ದುರಸ್ತಿ ಪಡಿಸÀಲು ಮನವಿ ಮಾಡಿದ್ದಾರೆ.

- ದುಗ್ಗಳ.