ಮಡಿಕೇರಿ, ಜ. ೮ : ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ಕಡಗದಾಳು ಗ್ರಾಮದ ಮಾದೇಟಿರ ರಾಜಾ ಅವರ ತಲಾಟ್ ಮೈದಾನದಲ್ಲಿ 'ಕತ್ತಲೆಕಾಡು ಚಾಂಪಿಯನ್ಸ್ ಲೀಗ್‌ಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮ ಆಯೋಜನೆ ಸಂದರ್ಭ ಸಮಯ ಪಾಲನೆ, ಊರಿನವರ ತೊಡಗಿಸಿಕೊಳ್ಳುವಿಕೆ ಯಲ್ಲಿ ಕೊರತೆ ಕಂಡುಬರುತ್ತದೆ. ಆದರೆ ಕತ್ತಲೆಕಾಡು ಭಾಗದ ಯುವಕರು, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿರುವುದು ಕ್ರೀಡಾಕೂಟದ ಮೇಲಿನ ಅಭಿಮಾನಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳೆಗಾರ ಮಾದೇಟಿರ ರಾಜ ಮಾತನಾಡಿ, ಮೂರು ದಿನದ ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲಾ ಕ್ರೀಡಾಪಟುಗಳ ಸಹಕಾರ ಮುಖ್ಯ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ಮಡಿಕೇರಿ, ಜ. ೮ : ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ಕಡಗದಾಳು ಗ್ರಾಮದ ಮಾದೇಟಿರ ರಾಜಾ ಅವರ ತಲಾಟ್ ಮೈದಾನದಲ್ಲಿ 'ಕತ್ತಲೆಕಾಡು ಚಾಂಪಿಯನ್ಸ್ ಲೀಗ್‌ಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮ ಆಯೋಜನೆ ಸಂದರ್ಭ ಸಮಯ ಪಾಲನೆ, ಊರಿನವರ ತೊಡಗಿಸಿಕೊಳ್ಳುವಿಕೆ ಯಲ್ಲಿ ಕೊರತೆ ಕಂಡುಬರುತ್ತದೆ. ಆದರೆ ಕತ್ತಲೆಕಾಡು ಭಾಗದ ಯುವಕರು, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿರುವುದು ಕ್ರೀಡಾಕೂಟದ ಮೇಲಿನ ಅಭಿಮಾನಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳೆಗಾರ ಮಾದೇಟಿರ ರಾಜ ಮಾತನಾಡಿ, ಮೂರು ದಿನದ ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲಾ ಕ್ರೀಡಾಪಟುಗಳ ಸಹಕಾರ ಮುಖ್ಯ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ಸಮಿತಿಯ ವಿವೇಕ್ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಸಿ.ಕೆ. ನಾಸರ್, ಯೂಸುಫ್, ಪರಿಚನ ಶರತ್, ಬಿ.ವಿ. ಯೋಗೇಶ್, ನಂದ ಕುಮಾರ್, ಮುಸ್ತಫಾ, ಗೋಪಿ ಹಾಗೂ ಇತರರಿದ್ದರು. ಅಕ್ಷಯ್ ರೈ ಪ್ರಾರ್ಥಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರ್ವಹಣೆ ಮಾಡಿದರು.

೯ ತಂಡಗಳು : ಕಡಗದಾಳು, ಹುಲಿತಾಳ, ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಯ ಆಟಗಾರರನ್ನೊಳಗೊಂಡ ೯ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.

ಕಡಗದಾಳು ಸೂಪರ್ ಕಿಂಗ್ಸ್, ಟೀಂ ಜಾಗ್ವರ್ಸ್, ಟೀಂ ಲೂಸರ್ಸ್, ನೀರುಕೊಲ್ಲಿ ಅಫಿಷಿಯಲ್ ಕ್ರಿಕೆಟರ್ಸ್, ರೈಸಿಂಗ್ ಸ್ಟಾರ್ಸ್ ಸ್ಯಾಂಡಲ್‌ಕಾಡ್, ಎಸ್‌ಎಂಎಸ್ ಬ್ರದರ್ಸ್, ಟೀಂ ಮ್ಯಾಕ್ಸಿಮಂ, ಸೋಲ್ಜರ್ ಕ್ರಿಕೆಟರ್ಸ್, ಜೆ.ಸಿ. ಸ್ಟೆöÊಕರ್ಸ್, ಡಾರ್ಕ್ ಫಾರೆಸ್ಟ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ವಿಜೇತ ತಂಡಕ್ಕೆ ೪೪,೪೪೪ ರೂ. ನಗದು, ದ್ವಿತೀಯ ೨೨,೨೨೨ ರೂ., ತೃತೀಯ ೧೧,೧೧೧ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದೆಂದು ಸಮಿತಿ ತಿಳಿಸಿದೆ. ಜನವರಿ ೧೦ರಂದು ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.