ಗೋಣಿಕೊಪ್ಪ ವರದಿ, ಜ. ೭: ಸೆವೆನ್ ಸ್ಟಾರ್ ಸಂಘಟನೆ ವತಿಯಿಂದ ಐಪಿಎಲ್ ಮಾದರಿಯಲ್ಲಿ, ಐಪಿಎಲ್ ತಂಡಗಳ ಹೆಸರಿನಲ್ಲಿ ಗೋಣಿಕೊಪ್ಪದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಆಯೋಜಿಸಲಾಗಿದ್ದು, ಶುಕ್ರವಾರದಿಂದ ಭಾನುವಾರದವರೆಗೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಐಪಿಎಲ್ ತಂಡಗಳು ಬಳಕೆ ಮಾಡಿರುವ ರಂಗಿನ ಜೆರ್ಸಿ, ಅದೇ ಹೆಸರಿನ ತಂಡಗಳು ಪಾಲ್ಗೊಳ್ಳುತ್ತಿವೆ. ಗೋಣಿಕೊಪ್ಪ ಭಾಗದ ಆಟಗಾರರು ಆಡುತ್ತಾರೆ. ತಂಡದಲ್ಲಿ ೯ ಜನರಿಗೆ ಆಡಲು ಅವಕಾಶವಿದೆ. ಚೆನ್ನೆöÊ ತಂಡದ ಮಾಲೀಕ ವೇಣುಗೋಪಾಲ್, ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ತಂಡವನ್ನು ಅರ್ಪತ್, ಸಾಜಿದ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಶರತ್‌ಕಾಂತ್, ಸನ್ ರೈಸರ್ಸ್ ತಂಡಕ್ಕೆ ಅಫ್ರಿದ್, ಆಶಿಕ್, ರಾಜಸ್ತಾನ ರಾಯಲ್ಸ್ ತಂಡಕ್ಕೆ ರೆನ್ನೀಸ್, ಅನಾಶ್, ಡೆಲ್ಲಿ ಕ್ಯಾಪಿಟಲ್ಸ್ಗೆ ಬಿ.ಇ. ಕಿರಣ್, ಸ್ವಾಮಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಲಾಲು ಸ್ಟಾಲಿನ್, ಸಾಜಿ, ಮುಂಬಯಿ ಇಂಡಿಯನ್ಸ್ಗೆ ಅಪ್ಸಲ್, ಅಪ್ಪಿ, ಸಿರಾಜ್, ತನ್ಸಿಲ್, ಭವಿತ್ ಮಾಲೀಕರಾಗಿದ್ದಾರೆ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಮೂರು ಸ್ಥಾನಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುತ್ತದೆ. ರೋಲಿಂಗ್ ಟ್ರೋಫಿ ಇದೆ. ಭಾನುವಾರ ಫೈನಲ್ ಹಣಾಹಣಿ ನಡೆಯಲಿದೆ ಎಂದರು. ಸೆವೆನ್ ಸ್ಟಾರ್ ಸಂಘಟನೆ ಅಧ್ಯಕ್ಷ ಷಂಶುದ್ದೀನ್, ಪ್ರಧಾನ ಕಾರ್ಯದರ್ಶಿ ಸಿಂಗಿ ಸತೀಶ್ ತಿಳಿಸಿದ್ದಾರೆ.