ಕುಶಾಲನಗರ, ಜ. ೭: ಸೋಮವಾರಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ತಾಲೂಕು ಘಟಕದ ವಿಪತ್ತು ನಿರ್ವಹಣೆ ಕುರಿತು ಸ್ವಯಂಸೇವಕರಿಗೆ ವಿಶೇಷ ತರಬೇತಿ ಶಿಬಿರ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಕಾಲ ಕೊಡಗಿನ ಜನತೆ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಹೋಗಿದ್ದು ಭೂಕುಸಿತ, ಪ್ರವಾಹ ಸಂದರ್ಭ ಎನ್‌ಡಿಆರ್‌ಎಫ್ ತಂಡದ ಶ್ರಮ ಮತ್ತು ಸೇವೆ ಅವಿಸ್ಮರಣೀಯ. ಕುಶಾಲನಗರ, ಜ. ೭: ಸೋಮವಾರಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ತಾಲೂಕು ಘಟಕದ ವಿಪತ್ತು ನಿರ್ವಹಣೆ ಕುರಿತು ಸ್ವಯಂಸೇವಕರಿಗೆ ವಿಶೇಷ ತರಬೇತಿ ಶಿಬಿರ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಕಾಲ ಕೊಡಗಿನ ಜನತೆ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಹೋಗಿದ್ದು ಭೂಕುಸಿತ, ಪ್ರವಾಹ ಸಂದರ್ಭ ಎನ್‌ಡಿಆರ್‌ಎಫ್ ತಂಡದ ಶ್ರಮ ಮತ್ತು ಸೇವೆ ಅವಿಸ್ಮರಣೀಯ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೂಲಕ ಸಂತ್ರಸ್ತರಿಗೆ ೩ ಸಾವಿರ ಮನೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಟ್ಟಿದ್ದರು. ಇಂತಹ ಪ್ರಕೃತಿ ವಿಕೋಪ ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು, ಜೀವನ ಮರು ರೂಪಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪಡೆ ರಚಿಸಿ ಯೋಜನೆಗೆ ರೂ ೨ ಕೋಟಿ ಮೀಸಲಿರಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈಗಾಗಲೇ ರಾಜ್ಯದ ೫೫ ತಾಲೂಕು ಗಳಲ್ಲಿ ಈ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ ಎಂದು ವಿವೇಕ್ ಪಾಯಸ್ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೂಡ ಸೇವೆಗೆ ಸನ್ನದ್ದ ರಾಗಿಸುವ ಅಗತ್ಯತೆಯಿದೆ ಎಂದರಲ್ಲದೆ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ಶುಭಾಶಯ ಕೋರಿದರು. ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ.ಪಂ. ಸದಸ್ಯ ಅಮೃತ್‌ರಾಜ್ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ಡಾ. ಎ. ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಎನ್‌ಡಿಆರ್‌ಎಫ್ ತಂಡದ ಕಮಾಂಡರ್ ಪ್ರವೀಣ್ ಕುಮಾರ್ ಉಪಾಧ್ಯಾಯ್, ಕುಶಾಲನಗರ ಎಪಿಸಿಎಂಸ್ ಅಧ್ಯಕ್ಷ ಎಂ.ಎನ್. ಕುಮಾರಪ್ಪ ಇದ್ದರು. ಕಾರ್ಯಾಗಾರದಲ್ಲಿ ೧೦೦ ಮಂದಿ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಕಾವೇರಿ ನದಿಯಲ್ಲಿ ಪ್ರವಾಹ ಸಂದರ್ಭ ಕೈಗೊಳ್ಳ ಬಹುದಾದ ರಕ್ಷಣಾ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಆಂಧ್ರದ ಗುಂಟೂರಿನಿAದ ಬಂದ ಎನ್‌ಡಿಆರ್‌ಎಫ್ ತಂಡದ ಸದಸ್ಯರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಯೋಜನೆಯ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿಗಳು, ಎನ್‌ಡಿಆರ್‌ಎಫ್ ತಂಡದ ತರಬೇತುದಾರರು ಪಾಲ್ಗೊಂಡಿದ್ದರು.