ಮಡಿಕೇರಿ, ಜ. ೭: ‘ಸ್ಪಾರ್ಟನ್ಸ್ ಬಾಸ್ಕೆಟ್‌ಬಾಲ್ ಕ್ಲಬ್, ಮಡಿಕೇರಿ’ ವತಿಯಿಂದ ಡಿ. ೩೦ ಹಾಗೂ ೩೧ ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಮಟ್ಟದ ‘ಕೂರ್ಗ್ ಓಪನ್ ಬಾಸ್ಕೆಟ್‌ಬಾಲ್’ ಟೂರ್ನಿ ಏರ್ಪಡಿಸಲಾಗಿತ್ತು. ಕ್ಲಬ್ ವತಿಯಿಂದ ೫ನೇ ವರ್ಷದ ಟೂರ್ನಿ ಇದಾಗಿದ್ದು ಜಿಲ್ಲೆಯಾದ್ಯಂತ ಹಲವು ತಂಡಗಳು ಭಾಗವಹಿಸಿದ್ದವು.

೩ ವಿಭಾಗಗಳಲ್ಲಿ ನಡೆದ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಮಡಿಕೇರಿಯ ‘ಸ್ಪಾರ್ಟನ್ಸ್ ಬಾಸ್ಕೆಟ್‌ಬಾಲ್ ಕ್ಲಬ್’ ಫೈನಲ್ ಪಂದ್ಯಾಟದಲ್ಲಿ ಜಯಗಳಿಸಿತು. ರನ್ರ‍್ಸ್ ಪ್ರಶಸ್ತಿಯನ್ನು ‘ಎಲೀಟ್ ಬಾರ‍್ಸ್’ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಗೋಣಿಕೊಪ್ಪದ ‘ಕೊಡಗು ಮ್ಯಾವರಿಕ್ಸ್’ ತಂಡ ಜಯಗಳಿಸಿದರೆ ಸುಂಟಿಕೊಪ್ಪದ ‘ಸೈಂಟ್ ಮೇರೀಸ್’ ತಂಡ ರನ್ರ‍್ಸ್ ಸ್ಥಾನ ಪಡೆದುಕೊಂಡಿತು. ೧೮ ವರ್ಷ ವಯೋಮಿತಿಗಿಂತ ಕೆಳಗಿನ ವಿಭಾಗದಲ್ಲಿ ಮಡಿಕೇರಿ ‘ಸ್ಪಾರ್ಟನ್ಸ್ ಬಾಸ್ಕೆಟ್‌ಬಾಲ್ ಕ್ಲಬ್’, ಮೊದಲನೆ ಸ್ಥಾನ ಪಡೆಯಿತು. ವೀರಾಜಪೇಟೆಯ ‘ಎವೆಂರ‍್ಸ್’ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.