ನಾಪೋಕ್ಲು: ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯಗಳಿಸಿದ ಕುಂಡAಡ ರಜಾಕ್, ಕಲಿಯಂಡ ಸಂಪನ್ ಅಯ್ಯಪ್ಪ, ಕಲಿಯಂಡ ಬೀನಾ ಅಯ್ಯಣ್ಣ, ತುಕ್ಕುಡಿ ಸಫಿಯಾ, ಎಂ.ಎ. ರಶೀನಾ, ಚೋಯಮಾಡಂಡ ಹರೀಶ್ ಮೊಣ್ಣಪ್ಪ, ಕುಡಿಯರ ಲೀಲಾವತಿ, ಅಹಮ್ಮದ್ ಬಷೀರ್ ಪೊಯಕ್ಕರೆ ಅವರನ್ನು ಕಕ್ಕಬೆ ಮುತ್ತವ್ವ ಹಾಲ್ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ವಲಯಾಧ್ಯಕ್ಷ ಬಡಕಡ ದೀನಾ ಪೂವಯ್ಯ, ಮುಖಂಡರಾದ ಬಾಚಮಂಡ ರಾಜಾ ಪೂವಣ್ಣ, ಲವ ಚಿಣ್ಣಪ್ಪ, ಎಂ.ಎ. ಸೌಕತ್ ಅಲಿ, ಅದಪೊಳೆ ಮಹಮ್ಮದ್ ಹಾಜಿ, ರಾಶಿದ್, ವಯಕೋಲ್ ಮೂಸ ಹಾಜಿ ಮತ್ತಿತರರು ಇದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ಬಸವತ್ತೂರು ಗ್ರಾಮದ ಫಿಲೋಮಿನಾ ಅವರನ್ನು ಕೂಡಿಗೆಯ ಚರ್ಚ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಫಾದರ್ ಆಲ್ಪೇಡ್ ಜಾನ್ ಮೊಡೋನ್ಸಾ ಫಾದರ್ ಎಂ. ಮಾರ್ಟಿನ್ ಜಾನ್ ಪಿಂಟೊ ಡೊಲ್ಪಿ ಡಿಸೋಜ ಜಾನ್ ಡಿ ಕೂನ್ನಾ ಸೇರಿದಂತೆ ಸಮುದಾಯದ ಬಾಂಧÀವರು ಭಾಗವಹಿಸಿದ್ದರು.
ಮಡಿಕೇರಿ: ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೆ ಚುನಾಯಿತರಾದ ಉದಿಯಂಡ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ, ಕೊಕ್ಕಲೇರ ಅಯ್ಯಪ್ಪ, ಸತೀಶ್ ಹಾಗೂ ಪಿ.ಸಿ. ರಘು ಅವರನ್ನು ನಂದಿಮೊಟ್ಟೆ ಜೀಪ್ ಮಾಲೀಕ ಮತ್ತು ಚಾಲಕ ಸಂಘದಿAದ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ತೆಕ್ಕಡ ಕಾಶಿ ಕಾವೇರಪ್ಪ, ಸದಸ್ಯರಾದ ಶರಣು, ನಿತಿನ್, ಸಂಪತ್, ಉಮೇಶ್ ಇದ್ದರು.