ಮಡಿಕೇರಿ, ಜ. ೫: ಸೋಮವಾರಪೇಟೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಸರಕಾರಿ ಇಂಜಿನಿಯರಿAಗ್ ಕಾಲೇಜು ವಿದ್ಯಾರ್ಥಿಗಳಿಗೆ ಇ-ಸಂಜೀವಿನಿ ಒಪಿಡಿ ರಿಜಿಸ್ಟೆçÃಷನ್ ಕನ್ಸಲ್ಟೇಶನ್ ಮತ್ತು ಪ್ರೆಸ್ಕ್ರಿಪ್ಷನ್ ಅನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ಪಡೆದುಕೊಳ್ಳುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ಮನೆಯಿಂದಲೇ ಸ್ಮಾರ್ಟ್ಫೋನ್ ಮೂಲಕ ಸಂಜೀವಿನಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ಮುಖಾಂತರ ವೈದ್ಯರನ್ನು ಸಂಪರ್ಕಿಸಿಬಹುದು (ತುರ್ತು ಸಂದರ್ಭ ಹೊರತುಪಡಿಸಿ) ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾಹಿತಿ ನೀಡಿದರು.
ಕಾಲೇಜಿನ ಉಪನ್ಯಾಸಕ ಶ್ರೀನಾಥ್ ಮಾತನಾಡಿ, ಸಮುದಾಯದಲ್ಲಿ ಎಷ್ಟೋ ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಕಷ್ಟಕರವಾಗಿದೆ. ಈ ಸಂಜೀವಿನಿ ಒಪಿಡಿ ಒಂದು ಅನುಕೂಲಕರವಾದ ಯೋಜನೆ ಆಗಿದೆ. ಮಹಾಮಾರಿ ಕೊರೊನಾ ಕಾರಣ ಜನರು ಬೇಸತ್ತು ಹೋಗಿದ್ದಾರೆ. ತಜ್ಞ ವೈದ್ಯರು ತಮ್ಮ ಅಮೂಲ್ಯವಾದ ಸಮಯವನ್ನು ಆರೋಗ್ಯವಂತ ಸಮುದಾಯದ ಬೆಳವಣಿಗೆಗೆ ಕೈಜೋಡಿಸಿದ್ದಾರೆ. ಸಮುದಾಯದಲ್ಲಿರುವ ನಾವುಗಳು ಕೂಡ ಇಂತಹ ಯೋಜನೆಗಳು ಯಶಸ್ವಿಗೊಳಿಸಲು ಸಹಕರಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಸಿಬ್ಬಂದಿಗಳಾದ ಸುನಿಲ್ ಮತ್ತು ಉಮೇಶ್ ಇದ್ದರು.