ಸುಂಟಿಕೊಪ್ಪ, ಜ. ೬: ಸುಂಟಿಕೊಪ್ಪ ಗುಡ್ಡಪ್ಪ ರೈ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಯೋಜನೆಯಡಿಯಲ್ಲಿ ರೂ. ೧೫ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.
ಇದೇ ಸಂದರ್ಭ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಆಭ್ಯರ್ಥಿಗಳಾಗಿ ಜಯಗಳಿಸಿದ ಶಾಂತಿ, ಬಿ.ಎಂ. ಸುರೇಶ್, ಸಿ. ಗೀತಾ, ಪಿ.ಆರ್. ಸುನಿಲ್ ಕುಮಾರ್, ಮಂಜುಳ, ಒಂದನೇ ವಿಭಾಗದಿಂದ ಪಕ್ಷೇತರ ಆಭ್ಯರ್ಥಿ ಸೋಮನಾಥ್, ಕಾಂಗ್ರೆಸ್ ಬೆಂಬಲಿತ ಪಿ.ಎಫ್. ಸಬಾಸ್ಟೀನ್ ಅವರನ್ನು ಹೂವಿನಹಾರ ಹಾಕಿ ಶುಭ ಹಾರೈಸಿ, ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನತೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಶ್ರಮಪಡುವಂತೆ ಶಾಸಕರು ಕಿವಿಮಾತು ಹೇಳಿದರು. ಪಂಚಾಯಿತಿ ಪಿಡಿಓ ವೇಣುಗೋಪಾಲ್, ಸಿಬ್ಬಂದಿಗಳು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಬಿ.ಕೆ. ಪ್ರಶಾಂತ್ ವಾಸುದೇವ್, ಸಹ ಪ್ರಮುಖ್ ರಂಜಿತ್ ಪೂಜಾರಿ ಪಕ್ಷದ ಕಾರ್ಯಕರ್ತರು, ಬಡಾವಣೆಯ ನಿವಾಸಿಗಳು ಇದ್ದರು.