ಮುಳ್ಳೂರು, ಜ. ೬: ಸಮೀಪದ ತಳ್ತರೆ ಗ್ರಾಮದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕಳೆದುಕೊಂಡ ಕುಟುಂಬವೊAದಕ್ಕೆ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಮನೆ ಕಟ್ಟಿಕೊಳ್ಳಲು ಧನಸಹಾಯ ನೀಡಲಾಯಿತು. ತಳ್ತರೆ ಗ್ರಾಮದ ಬೆಳ್ಳಿಯಪ್ಪ-ಚಂದ್ರಾವತಿ ದಂಪತಿ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ವಾಸವಾಗಿದ್ದ ಮನೆಯನ್ನು ಕಳೆದುಕೊಂಡಿದ್ದರು. ಸರಕಾರದಿಂದ ಮನೆ ಕಟ್ಟಿಕೊಳ್ಳಲು ಯಾವುದೆ ನೆರವು ಸಿಗದಿರುವ ಬಗ್ಗೆ ಈ ಬಡ ಕುಟುಂಬ ಶನಿವಾರಸಂತೆ ರೋಟರಿ ಕ್ಲಬ್ ಪದಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರಿಂದ ರೋಟರಿ ಕ್ಲಬ್ ಪದಾಧಿಕಾರಿಗಳು ಮನೆ ಕಳೆದುಕೊಂಡ ಬೆಳ್ಳಿಯಪ್ಪ-ಚಂದ್ರಾವತಿ ದಂಪತಿ ಮನೆಗೆ ತೆರಳಿ ಹೊಸದಾಗಿ ಮನೆ ಕಟ್ಟಿಕೊಳ್ಳಲು ರೋಟರಿ ಕ್ಲಬ್ ವತಿಯಿಂದ ರೂ. ೧.೫೦ ಲಕ್ಷ ಮೊತ್ತದ ಚೆಕ್ ಅನ್ನು ವಿತರಿಸಿದರು.

ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ವಿ. ದಿವಾಕರ್, ಪದಾಧಿಕಾರಿಗಳಾದ ಅರವಿಂದ್ ರವಿ, ಟಿ.ಆರ್. ಪುರುಷೋತ್ತಮ್, ಎಚ್.ಪಿ. ಮೋಹನ್, ಹೆಚ್.ಪಿ. ಯಶ್ವಂತ್ ಹಾಗೂ ಸಂಸ್ಥೆಯ ಸದಸ್ಯರು ಹಾಜರಿದ್ದರು.