ಮಡಿಕೇರಿ, ಜ. ೫: ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ತಾ. ೧೨ ರಿಂದ ೧೮ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನೆರವೇರಲಿದೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ಗೌರವ ಸಲಹೆಗಾರ ಕೆ.ಕೆ. ಮಹೇಶ್, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಹಾಗೂ ಮೆರವಣಿಗೆ ಮಡಿಕೇರಿ, ಜ. ೫: ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ತಾ. ೧೨ ರಿಂದ ೧೮ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ನೆರವೇರಲಿದೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮಂಡಳಿಯ ಗೌರವ ಸಲಹೆಗಾರ ಕೆ.ಕೆ. ಮಹೇಶ್, ಸ್ವಾಗತ ಸಮಿತಿ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಹಾಗೂ ಮೆರವಣಿಗೆ ೧೨ ರಂದು ಸಂಜೆ ೫.೩೦ ಗಂಟೆಯಿAದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ, ಪುಣ್ಯಾಹ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ಅಸ್ತç ಕಲಶ ಪೂಜೆ, ದಿಶಾ ಬಲಿ ಬಳಿಕ ಅನ್ನ ಸಂತರ್ಪಣೆ ನಡೆಯಲಿದ್ದು, ರಾತ್ರಿ ೭ ರಿಂದ ೮ ಗಂಟೆವರೆಗೆ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ ಸೇವೆ ಇರುತ್ತದೆ.
ತಾ. ೧೩ ರಂದು ಬೆಳಿಗ್ಗೆ ೭.೩೦ ಗಂಟೆಯಿAದ ಪುಣ್ಯಾಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಕ್ಷಾಲನಾದಿ ಬಿಂಬ ಶುದ್ಧಿ, ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೫.೩೦ ರಿಂದ ದುರ್ಗಾಪೂಜೆ, ವನದುರ್ಗಾ ಹವನ,
(ಮೊದಲ ಪುಟದಿಂದ) ಮೂಲಾಲಯದಲ್ಲಿ ವಾಸ್ತಾ÷್ವದಿ ಶುದ್ಧಿಗಳು, ಪ್ರಸನ್ನ ಪೂಜೆ, ಅನ್ನದಾನ ನೆರವೇರಲಿದೆ. ರಾತ್ರಿ ೭ ರಿಂದ ೮ ಗಂಟೆಯವರೆಗೆ ಶೃತಿಲಯ ಭಜನಾ ಮಂಡಳಿಯಿAದ ಭಜನೆ ಸೇವೆಯಿದೆ ಎಂದು ತಿಳಿಸಿದರು.
ತಾ. ೧೪ ರಂದು ಬೆಳಿಗ್ಗೆ ೭.೩೦ ರಿಂದ ಪುಣ್ಯಾಹ, ಗಣಪತಿ ಹೋಮ, ತತ್ವಹೋಮ, ನವಗ್ರಹ ಹೋಮ, ತತ್ವಕಲಶಾಭಿಷೇಕ, ಜೀವೋದ್ವಾಸನೆ, ಅನ್ನದಾನ ಸಂಜೆ ೫ ರಿಂದ ದುರ್ಗಾಪೂಜೆ, ಶಯ್ಯಧಿವಾಸ ಧ್ಯಾನಾದಿ ವಾಸಾದಿಗಳು, ಶಿರಸ್ತತ್ವ ಹೋಮ, ಶಕ್ತಿ ದಂಡಕ ಮಂಡಲ ಪೂಜೆ, ಅಧಿವಾಸ ಹೋಮ, ಅನ್ನದಾನ ನಂತರ ರಾತ್ರಿ ೭ ರಿಂದ ೮ರವರೆಗೆ ವಿಜಯ ವಿನಾಯಕ ಭಜನಾ ಮಂಡಳಿಯಿAದ ಭಜನೆ ಸೇವೆ ನಡೆಯಲಿದೆ.
ತಾ. ೧೫ ರಂದು ಬೆಳಿಗ್ಗೆ ೬ ರಿಂದ ಪುಣ್ಯಾಹ, ಗಣಪತಿ ಹವನ ನಂತರ ಬೆಳಿಗ್ಗೆ ೯.೫೦ ರಿಂದ ೧೦.೨೦ರ ಧನಿಷ್ಠ ನಕ್ಷತ್ರ ಮೀನಾ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೇವರುಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ ಗಂಟೆಯಿAದ ದಿಕ್ಪಾಲ ಹೋಮಗಳು, ದಿಕ್ಪಾಲ ಪ್ರತಿಷ್ಠೆ, ದುರ್ಗಾ ಪೂಜೆ, ಮಹಾಬಲಿ ಪೀಠಾಧಿವಾಸ, ಕವಾಟ ಬಂಧನ, ಅನ್ನದಾನ ನಂತರ ರಾತ್ರಿ ೭ ರಿಂದ ೮ ಗಂಟೆವರೆಗೆ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿಯಿAದ ಭಜನೆ ಸೇವೆ ನಡೆಯಲಿದೆ ಎಂದು ಮಾಹಿತಿಯಿತ್ತರು.
ತಾ. ೧೬ ರಂದು ಬೆಳಿಗ್ಗೆ ೭.೩೦ ಗಂಟೆಗೆ ಪುಣ್ಯಾಹ, ಗಣಪತಿ ಹವನ, ಮಹಾಬಲಿ ಪೀಠ ಪ್ರತಿಷ್ಠೆ, ಚಂಡಿಕಾಯಾಗ, ನಾಗದೇವರಿಗೆ ಕಲಶ ಪೂಜೆ, ಆಶ್ಲೇಷ ಬಲಿ, ಪವಮಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನದಾನ, ಸಂಜೆ ೫.೩೦ ಗಂಟೆಗೆ ಮಂಟಪ ಸಂಸ್ಕಾರ, ದುರ್ಗಾಪೂಜೆ, ಲಲಿತಾ ಸಹಸ್ರನಾಮ ಹವನ, ಪ್ರಸನ್ನ ಪೂಜೆ ಅನ್ನದಾನ ಬಳಿಕ ರಾತ್ರಿ ೭ ರಿಂದ ೮ ರವರೆಗೆ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ ಸೇವೆ ನಡೆಯಲಿದೆ.
ತಾ. ೧೭ ರಂದು ಬೆಳಿಗ್ಗೆ ೭.೩೦ ಗಂಟೆಗೆ ಪುಣ್ಯಾಹ, ಗಣಪತಿ ಹವನ, ಶಾಂತಿ ಹೋಮಗಳು, ಪ್ರಾಯಶ್ಚಿತ ಹೋಮಗಳು, ತತ್ತ÷್ವ ಹೋಮ, ಕಲಶಾಭಿಷೇಕಗಳು, ಕಲಶಮಂಡಲ ರಚನೆ, ಕ್ಷೇತ್ರಪಾಲ ಪ್ರತಿಷ್ಠೆ, ಪ್ರಸನ್ನ ಪೂಜೆ, ಅನ್ನದಾನ, ಸಂಜೆ ೫ ಗಂಟೆಯಿAದ ಕುಂಭೇಶ, ಕರ್ಕರಿ ಬ್ರಹ್ಮ ಕಲಶ ಪೂಜೆ, ಪರಿಕಲಶ ಪೂಜೆ, ಗಣಪತಿ ದೇವರ ಕಲಶ ಪೂಜೆಗಳು ಅಧಿವಾಸ ಹೋಮ, ಕಲಶಾಧಿವಾಸ, ಅನ್ನದಾನ ಸಂಜೆ ೬ ರಿಂದ ೮ರವರೆಗೆ ಆದಿಚುಂಚನಗಿರಿಯ ರವಿ ಭೂತನಕಾಡು ತಂಡದಿAದ ಭಜನೆ ಸೇವೆ ನಡೆಯಲಿದೆ.
ತಾ. ೧೮ ರಂದು ಬೆಳಿಗ್ಗೆ ೬ ಗಂಟೆಯಿAದ ಪುಣ್ಯಾಹ, ಗಣಪತಿ ಹವನ ಬಳಿಕ ಬೆಳಿಗ್ಗೆ ೯.೪೭ ಗಂಟೆಗೆ ಸಲ್ಲುವ ಕುಂಭ ಲಗ್ನದ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಸಾಯಂ ಪೂಜೆ, ೭ ಗಂಟೆಗೆ ರಂಗಪೂಜೆ, ೭.೩೦ ಗಂಟೆಗೆ ಉತ್ಸವ ಬಲಿ, ಸಂಪ್ರೋಕ್ಷಣೆ, ಅನ್ನದಾನವಿರುತ್ತದೆ.
ಅಶೋಕಪುರದ ವೆಂಕಟೇಶ್ವರ ಕಲಾ ತಂಡದಿAದ ರಾತ್ರಿ ೭ ರಿಂದ ೮ ರವರೆಗೆ ಭಜನೆ ಸೇವೆ ನಡೆಯಲಿದೆ. ಈ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ ಎಂದು ಅವರುಗಳು ಮಾಹಿತಿಯಿತ್ತರು. ಈ ಧಾರ್ಮಿಕ ಕಾರ್ಯಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು ಎಂದರಲ್ಲದೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ರಾಜರಾಜೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಚೇತನ್, ಕಾರ್ಯದರ್ಶಿ ಸುರೇಶ್, ಖಜಾಂಚಿ ವಸಂತ್ ಕುಮಾರ್ ಉಪಸ್ಥಿತರಿದ್ದರು.