ಸೋಮವಾರಪೇಟೆ, ಜ. ೬: ಜಿಲ್ಲೆಯಲ್ಲಿಯೇ ಬೃಹತ್ ವಸತಿ ಶಾಲೆ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಜ್ಜು ಗೊಂಡಿದ್ದು, ತಾಲೂಕಿನ ತೋಳೂರು ಶೆಟ್ಟಳ್ಳಿಯಲ್ಲಿ ನಿರ್ಮಾಣವಾಗುವ ಈ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿಯೇ ದೊಡ್ಡದಾದ ವಸತಿ ಶಾಲೆ ಎಂಬ ಹೆಗ್ಗಳಿಕೆಗೂ ಭಾಜನವಾಗಲಿದೆ.೨೦೧೮ರ ಬಜೆಟ್‌ನಲ್ಲಿ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮೀಸಲಿರಿಸಿದ್ದು, ಇದರಲ್ಲಿ ಕೊಡಗಿಗೆ ೨ ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ನಾಪೋಕ್ಲುವಿನಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಜಾಗದ ಸಮಸ್ಯೆಯಿಂದಾಗಿ ಹಾಗೆಯೇ ಉಳಿದಿದ್ದು, ಸೋಮವಾರಪೇಟೆಗೆ ಮಂಜೂರಾದ ಶಾಲೆಗೆ ಈಗಾಗಲೇ ಭೂಮಿಪೂಜೆ ನೆರವೇರಿಸಲಾಗಿದೆ.ತೋಳೂರುಶೆಟ್ಟಳ್ಳಿಯಲ್ಲಿ ರೂ. ೨೫.೨೧ ಕೋಟಿ ವೆಚ್ಚದಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಎನ್‌ಎಸ್‌ಎಲ್ ಕನ್‌ಸ್ಟçಕ್ಷನ್ ಸಂಸ್ಥೆ ಟೆಂಡರ್ ಪಡೆದುಕೊಂಡಿದ್ದು, ಸುಮಾರು ೮ ಏಕರೆ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ತಲೆ ಎತ್ತಲಿದೆ. ಇದರಲ್ಲಿ ೨೫೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಹುದಾಗಿದೆ.ತೋಳೂರುಶೆಟ್ಟಳ್ಳಿಯಲ್ಲಿ ಸ್ಥಳೀಯ ದಾನಿಗಳು ನೀಡಿದ ಜಾಗದಲ್ಲಿ ಪ್ರಾರಂಭವಾಗಿದ್ದ ಪ್ರಸಾದ ಪ್ರೌಢ ಶಾಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿತ್ತು. ಇದನ್ನು ಆದಿಚುಂಚನಗಿರಿ ಮಠಕ್ಕೆ ನೀಡುವ ಬಗ್ಗೆಯೂ ಒಂದಿಷ್ಟು ಪ್ರಯತ್ನಗಳು ನಡೆದಿದ್ದವು.
ಕೆಲವೊಂದು ಗೊಂದಲಗಳಿAದ ಮಠದ ಬದಲಿಗೆ ಸರ್ಕಾರದ ಸ್ವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗವನ್ನು ನೀಡಿರುವದರಿಂದ ಬೃಹತ್ ವಸತಿ ಶಾಲೆ ನಿರ್ಮಾಣಕ್ಕೆ ದಿನಗಣನೆ ಶುರುವಾಗಿದೆ.
ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರಾಗಿದ್ದು, ೫೯೮೦.೩೩ ಚದರ ಮೀಟರ್‌ನಲ್ಲಿ ಕಟ್ಟಡ ನಿರ್ಮಾಣ ವಾಗಲಿದೆ. ಶಾಲಾ ಕಟ್ಟಡ (ನೆಲ ಮತ್ತು ಒಂದನೇ ಅಂತಸ್ತು) ೧೨೦೮.೬೩ ಚದರ ಮೀಟರ್‌ನಲ್ಲಿ ನಿರ್ಮಾಣವಾಗಲಿದ್ದು, ಇದರಲ್ಲಿ ೫ ಬೋಧನಾ ಕೊಠಡಿ, ೩ ಪ್ರಯೋಗಾಲಯ, ಗಣಕಯಂತ್ರದ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ೧೨ ಶೌಚಾಲ ಯಗಳು, ಕಚೇರಿ, ೨ ಉಗ್ರಾಣ, ಗ್ರಂಥಾಲಯ, ಕ್ರೀಡಾ ಕೊಠಡಿ, ವಿವಿಧೋದ್ದೇಶ ಕೊಠಡಿಗಳು ನಿರ್ಮಾಣವಾಗಲಿವೆ.
೧೨೫ ವಿದ್ಯಾರ್ಥಿಗಳಿಗೆ ಒಂದರAತೆ ೨ ವಿಭಾಗಗಳಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು, ಒಂದೊAದು ವಿಭಾಗದಲ್ಲೂ ೯ ವಸತಿ ಕೊಠಡಿ, ಮೇಲ್ವಿಚಾರಕರು ಹಾಗೂ ಪ್ರಥಮ ಚಿಕಿತ್ಸಾ ಕೊಠಡಿ, ೨೧ ಸ್ನಾನ ಗೃಹಗಳು, ೨೪ ಶೌಚಾಲಯ, ಓದುವ ಕೊಠಡಿ/ಗ್ರಂಥಾಲಯ ೧, ಯೋಗ ಕೊಠಡಿ, ಕೈ ತೊಳೆಯುವ ಸ್ಥಳ, ಅಂಗವಿಕಲರ ಸ್ನಾನ ಗೃಹ/ಶೌಚಾಲಯ, ಸಂದರ್ಶಕರ ಕೊಠಡಿ, ಮನೋರಂಜನಾ ಕೊಠಡಿಗಳ ನಿರ್ಮಾಣವಾಗಲಿದೆ.
ಇನ್ನು ಅಡುಗೆ ಮತ್ತು ಭೋಜನಾಲಯ, ಪ್ರಾಂಶುಪಾಲರ ವಸತಿ ಗೃಹ, ಎರಡು ವಿಭಾಗದಲ್ಲಿ ಬೋಧಕ ಮತ್ತು ಸಿಬ್ಬಂದಿಗಳ ವಸತಿ ಗೃಹ, ಒಂದು ಬೋಧಕೇತರ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ ಸೇರಿದಂತೆ, ಕೊಳವೆ ಬಾವಿ, ಸೆಪ್ಟಿಕ್ ಟ್ಯಾಂಕ್, ನೀರಿನ ತೊಟ್ಟಿ, ಒಳಚರಂಡಿ, ವಿದ್ಯುತ್ ಸಂಪರ್ಕ, ಭದ್ರತಾ ಸಿಬ್ಬಂದಿ ಕೊಠಡಿ, ಸೋಲಾರ್ ವಾಟರ್ ಹೀಟರ್, ಸೋಲಾರ್
(ಮೊದಲ ಪುಟದಿಂದ) ಬೀದಿ ದೀಪ, ಕಟ್ಟಡದ ವಿದ್ಯುದೀಕರಣ ಕಾಮಗಾರಿಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ ೧೮ ತಿಂಗಳುಗಳ ಕಾಲಾವಧಿ ನೀಡಲಾಗಿದೆ. ನಿರೀಕ್ಷೆಯಂತೆ ಕಾಮಗಾರಿ ಪೂರ್ಣಗೊಂಡರೆ ೨೦೨೨ರ ಮುಕ್ತಾಯ ಅಥವಾ ೨೦೨೩ರ ಆರಂಭದಲ್ಲೇ ತೋಳೂರುಶೆಟ್ಟಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಇಲ್ಲಿ ಶಾಲೆ ಪ್ರಾರಂಭವಾದರೆ ವಿವಿಧ ಭಾಗಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳ ಓಡಾಟ ಹೆಚ್ಚಾಗುತ್ತದೆ. ವಾಹನಗಳ ಓಡಾಟವೂ ಹೆಚ್ಚಲಿದ್ದು, ಸ್ಥಳೀಯವಾಗಿ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳಲಿದೆ. ಇದರೊಂದಿಗೆ ಮೂಲಭೂತ ಸೌಲಭ್ಯಗಳೂ ಈ ಭಾಗಕ್ಕೆ ಒದಗಲಿವೆ ಎಂಬ ಆಶಯ ತೋಳೂರುಶೆಟ್ಟಳ್ಳಿ ಗ್ರಾಮಸ್ಥರದ್ದು.