ಕುಶಾಲನಗರ, ಜ. ೫: ಕುಶಾಲನಗರ ಕಾವೇರಿ ಸೇತುವೆ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪುರುಷನೊಬ್ಬನ ಮೃತದೇಹ ಪತ್ತೆಯಾಗಿದೆ. ನದಿ ತಟದ ಸ್ಮಶಾನದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬAದಿದೆ. ಮೃತನ ಜೇಬಿನಲ್ಲಿದ್ದ ಗುರುತಿನ ಚೀಟಿ ಪರಿಶೀಲನೆ ನಡೆಸಿದ ಸಂದರ್ಭ ಹಾಸನ ಜಿಲ್ಲೆಯ ಬೇಲೂರಿನ ಚಿಕ್ಕಬಿಕ್ಕೋಡು ಗ್ರಾಮದ ಭೈರಯ್ಯ ಎಂಬವರ ಪುತ್ರ ಮಹೇಶ್ (೩೩) ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬೈಲುಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.