ಮಡಿಕೇರಿ, ಜ. ೫: ಬಲ್ಲಮಾವಟಿ ವ್ಯಾಪ್ತಿಯ ಗ್ರಾಮಗಳಲ್ಲಿ ತಾ.೫ರ ಸಂಜೆ ಭಾರೀ ಮಳೆಯಾಗಿರುವ ಕುರಿತು ವರದಿಯಾಗಿದೆ. ಬಲ್ಲಮಾವಟಿ, ಪುಲಿಕೋಟು, ಪೇರೂರು, ಪಂದೇಟ್ ಮತ್ತಿತರ ಕಡೆ ಸುಮಾರು ಒಂದು ಇಂಚಿನಷ್ಟು ಮಳೆ ಸುರಿದಿದ್ದು, ಕಾಫಿ ಬೆಳೆಗಾರರು ಹಾಗೂ ಭತ್ತ ಕೃಷಿಕರು ಪರದಾಡುವಂತಾಗಿತ್ತು.