ಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭಕ್ಕೆ ಸಿದ್ಧ
ನವದೆಹಲಿ, ಜ. ೫: ತಾ. ೧೩ ರೊಳಗೆ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಪ್ರಾರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಈ ಮೂಲಕ ದೇಶದಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್‌ಗೆ ಚಾಲನೆ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಎರಡು ಲಸಿಕೆಗಳ ಬಳಕೆಗೆ ಜನವರಿ ಮೂರರಂದು ಅನುಮೋದನೆ ನೀಡಲಾಗಿದ್ದು, ತಾಲೀಮು ಹಂತದಲ್ಲಿನ ಪ್ರತಿಕ್ರಿಯೆ ಆಧಾರದ ಮೇಲೆ ೧೦ ದಿನಗಳೊಳಗೆ ಕೋವಿಡ್-೧೯ ಲಸಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 'ಕೋವಾಕ್ಸಿನ್' ಮತ್ತು ಅಕ್ಸ್ಫರ್ಡ್ - ಅಸ್ಟಾçಜಿಂಕಾ ಔಷಧಿ ತಯಾರಿಕಾ ಕಂಪೆನಿ ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್' ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧಿ ಮಹಾನಿಯಂತ್ರಕರು (ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಅನುಮೋದನೆ ನೀಡಿದ್ದಾರೆ. ಇದು ಅಮೇರಿಕಾ ಹೊರತುಪಡಿಸಿದಂತೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಭಾರತಕ್ಕೆ ತುಸು ನೆಮ್ಮದಿಯನ್ನುಂಟು ಮಾಡಿದೆ. ಮೊದಲ ಬಾರಿಗೆ ೧ ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಜೊತೆಗೆ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು, ಅವಶ್ಯಕ ಕಾರ್ಯಕರ್ತರು ಮತ್ತು ೨೭ ಕೋಟಿ ವೃದ್ಧ, ೫೦ ವರ್ಷಕ್ಕೂ ಮೇಲ್ಪಟ್ಟ ಹಿರಿಯ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಒಂದು ಕೋಟಿ ಆರೋಗ್ಯ ಕಾರ್ಯಕರ್ತರ ಜೊತೆಗೆ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು ಉಚಿತವಾಗಿ ಲಸಿಕೆ ಪಡೆಯಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಕಟಿಸಿದ್ದಾರೆ.
ಭಾರತ ಪ್ರವಾಸ ರದ್ದುಗೊಳಿಸಿದ ಬೋರಿಸ್
ಲಂಡನ್, ಜ. ೫: ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೊನಾ ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಭಾರತ ಭೇಟಿಯನ್ನು ಸಹ ರದ್ದುಪಡಿಸಿದ್ದಾರೆ. ೭೨ನೇ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಬೋರಿಸ್ ಜಾನ್ಸನ್ ಅವರು, ಹೊಸ ಪ್ರಭೇದದ ಕೊರೊನಾ ಹಾವಳಿ ಹಿನ್ನೆಲೆ ತಮ್ಮ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾಗಿ ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ. ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೊನಾ ಹಾವಳಿ ಹೆಚ್ಚಾಗಿರುವುದರಿಂದ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಅಲ್ಲದೇ ಬ್ರಿಟನ್‌ನಲ್ಲಿ ಕೊರೊನಾ ಲಸಿಕೆಯ ಸಾರ್ವತ್ರಿಕ ಬಳಕೆಯೂ ವೇಗ ಪಡೆದು ಕೊಂಡಿದೆ. ಈ ಹಿನ್ನೆಲೆ ತಮ್ಮ ರಾಷ್ಟಿçÃಯ ಜವಾಬ್ದಾರಿಗಳನ್ನು ನಿಭಾಯಿಸ ಲೇಬೇಕಿರುವ ಬೋರಿಸ್ ಜಾನ್ಸನ್ ಅವರು ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಬೋರಿಸ್ ಜಾನ್ಸನ್ ಅವರು ದೇಶಾದ್ಯಂತ ಮುಂದಿನ ಆರು ವಾರಗಳವರೆಗೆ ಕಠಿಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಬುಧವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬಂದ್ ಆಗಲಿವೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲುಭಾಗ ಜನರು ಕಠಿಣ ನಿರ್ಬಂಧಗಳ ಅಡಿಯಲ್ಲಿ ಬದುಕುತ್ತಿದ್ದರೂ ಸೋಂಕು ತಡೆಯಲು ಸಾಧ್ಯವಾಗುತ್ತಿಲ್ಲ, ಸೋಮವಾರ ಒಂದೇ ದಿನ ೨೭ ಸಾವಿರ ಜನರಿಗೆ ಸೋಂಕು ತಗಲಿದೆ. ಕಳೆದ ಮಂಗಳವಾರದಿAದ ೮೦ ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.
ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಜ. ೫: ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬAಧಿಸಿದAತೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜಯಕುಮಾರ್ ಹಿರೇಮಠ್ ಎಂಬವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಅವರಿದ್ದ ನ್ಯಾಯಪೀಠ ಇಂದು ಪ್ರಕಟಿಸಿದೆ. ಜೊತೆಗೆ, ದೂರಿನ ಸಂಬAಧ ತನಿಖೆ ಮುಂದುವರಿಸುವAತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಇದು ಯಡಿಯೂರಪ್ಪ ಅವರಿಗೆ ಭಾರೀ ಹಿನ್ನೆಡೆಯಾಗಿದೆ. ಯಡಿಯೂರಪ್ಪ ಅವರು ೨೦೧೫ ರಲ್ಲಿ ಆರ್.ಟಿ. ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆಯಲ್ಲಿ ೧.೧ ಎಕರೆ ಭೂಮಿಯನ್ನು ತಮ್ಮ ಅಧಿಕಾರ ಬಳಸಿ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಜಯಕುಮಾರ್ ಹಿರೇಮಠ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬAದ ಹಿನ್ನೆಲೆ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಬಜೆಟ್ ಅಧಿವೇಶನ ಪ್ರಾರಂಭಕ್ಕೆ ಕ್ಯಾಬಿನೆಟ್ ಸಮಿತಿ ಶಿಫಾರಸು
ನವದೆಹಲಿ, ಜ. ೫: ತಾ. ೨೯ ರಿಂದ ಸಂಸತ್ತಿನ ಬಜೆಟ್ ಅಧಿವೇಶನ ನಡೆಸಬೇಕೆಂದು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಶಿಫಾರಸು ಮಾಡಿದೆ. ಈ ವೇಳೆ ಕೇಂದ್ರ ಬಜೆಟ್ ೨೦೨೧-೨೨ ಅನ್ನು ಫೆಬ್ರವರಿ ೧ ರಂದು ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ. ಕೋವಿಡ್ -೧೯ ಸಾಂಕ್ರಾಮಿಕ ರೋಗದ ಕಾರಣ ಆರ್ಥಿಕತೆ ದೊಡ್ಡ ಸಂಕಷ್ಟಕ್ಕೆ ಸಿಕ್ಕಿ ವರ್ಷದ ನಂತರ ಇದು ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಆಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಉದ್ಯಮ ವಲಯದ ಮುಖ್ಯಸ್ಥರೊಡನೆ ಬಜೆಟ್ ಪೂರ್ವ ಸಮಾಲೋಚನೆಗಳನ್ನು ಮುಕ್ತಾಯಗೊಳಿಸಿದ್ದಾರೆ ಮತ್ತು ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಜೆಟ್ ಮೊದಲು, ಹಣಕಾಸು ಸಚಿವಾಲಯವು ಹಲ್ವಾ ಸಮಾರಂಭವನ್ನು ಸಹ ಆಯೋಜಿಸುತ್ತದೆ, ಇದು ಬಜೆಟ್ ಕಾಗದದ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ವಾರ್ಷಿಕ ಪ್ರಮುಖ ದಾಖಲೆಯಾದ ಬಜೆಟ್ ಮೊದಲು ಆರ್ಥಿಕ ಸಮೀಕ್ಷೆಯನ್ನು ಸಚಿವಾಲಯ ಬಿಡುಗಡೆ ಮಾಡುತ್ತದೆ. ಬಜೆಟ್ ಅಧಿವೇಶನದ ಮೊದಲ ಭಾಗವನ್ನು ಜನವರಿ ೨೯ ರಿಂದ ಫೆಬ್ರವರಿ ೧೫ ರವರೆಗೆ ನಡೆಸಬೇಕೆಂದು ಸಿಸಿಪಿಎ ಶಿಫಾರಸು ಮಾಡಿದ್ದು ಎರಡನೇ ಭಾಗವನ್ನು ಮಾರ್ಚ್ ೮ ರಿಂದ ಏಪ್ರಿಲ್ ೮ ರವರೆಗೆ ನಡೆಸಬಹುದೆಂದು ಹೇಳಿದೆ.
ರಾಬರ್ಟ್ ವಾದ್ರಾ ಹೇಳಿಕೆ ಪಡೆದ ಐಟಿ ಅಧಿಕಾರಿಗಳು
ನವದೆಹಲಿ, ಜ. ೫: ಬೇನಾಮಿ ಆಸ್ತಿ ಪ್ರಕರಣದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಹೇಳಿಕೆ ಪಡೆದುಕೊಂಡಿದ್ದಾರೆ. ಶಸ್ತಾçಸ್ತçಗಳ ಡೀಲರ್ ಸಂಜಯ್ ಬಂಡಾರಿ ಮೂಲಕ ಇಂಗ್ಲೆAಡ್‌ನಲ್ಲಿ ಅಕ್ರಮವಾಗಿ ಖರೀದಿಸಿರುವ ಆಸ್ತಿಗೆ ಸಂಬAಧಿಸಿದ ಪ್ರಕರಣ ಇದಾಗಿದೆ. ವಾದ್ರಾ ೨೦೦೯ರಲ್ಲಿ ನಡೆದ ಪೆಟ್ರೋಲಿಯಂ ಒಪ್ಪಂದದಿAದ ಪಡೆದ ಕಿಕ್ ಬ್ಯಾಕ್‌ಗಳಿಂದ ಇಂಗ್ಲೆAಡ್‌ನಲ್ಲಿ ಆಸ್ತಿ ಖರೀದಿಸಿದ್ದಾರೆ ಎಂಬAತಹ ಆರೋಪವಿದೆ. ೨೦೧೮ರಲ್ಲಿ ದಾಖಲಾಗಿದ್ದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಇಡಿಯಿಂದ ಈಗಾಗಲೇ ವಿಚಾರಣೆಗೊಳಪಟ್ಟಿದ್ದಾರೆ. ಇಂದು ಮಧ್ಯಾಹ್ನ ಪೂರ್ವ ದೆಹಲಿಯ ಸುಖದೇವ್ ವಿಹಾರದಲ್ಲಿರುವ ವಾದ್ರಾ ಕಚೇರಿಗೆ ಐಟಿ ಅಧಿಕಾರಿಗಳು ತೆರಳಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಇಲಾಖೆಯಿಂದ ಸಮನ್ಸ್ ನೀಡಲಾಗಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದ ವಾದ್ರಾ ಕಾಲಾವಕಾಶ ಪಡೆದುಕೊಂಡಿದ್ದರು. ರಾಜಸ್ಥಾನದ ಬೀಕನೇರ್‌ನಲ್ಲಿ ಬಡ ಜನರ ಪುನರ್ವಸತಿಗಾಗಿ ನೀಡಲಾದ ಭೂಮಿಯನ್ನು ವಾದ್ರಾ ಕಂಪೆನಿ ಸ್ಕೆöÊಲೈಟ್ ಹಾಸ್ಟಿಟಲಿಟಿ ವಶಪಡಿಸಿಕೊಂಡ ಆರೋಪದ ಮೇರೆಗೆ ೨೦೧೫ ಸೆಪ್ಟೆಂಬರ್‌ನಲ್ಲಿ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ತನಿಖಾ ಸಂಸ್ಥೆ ದಾಖಲಿಸಿತ್ತು.