ಕೃಷಿ ಕಾಯ್ದೆ ಹಿಂಪಡೆಯಿರಿ:ಸೋನಿಯಾ ಗಾಂಧಿ
ನವದೆಹಲಿ, ಜ. ೩: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ೩೯ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರ ಅಹಂಕಾರ ಬದಿಗಿಟ್ಟು ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆAದು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಇಂತಹ ಅಹಂಕಾರಿ ಸರ್ಕಾರವನ್ನು ತಾವು ಇದೇ ಮೊದಲು ನೋಡುತ್ತಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಸೋನಿಯಾ ಗಾಂಧಿ ಈ ಅಹಂಕಾರಿ ಸರ್ಕಾರಕ್ಕೆ ಅನ್ನದಾತರ ನೋವು ಕಾಣುತ್ತಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಲೂ ಕಾಲಮಿಂಚಿಲ್ಲ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಹಂಕಾರವನ್ನು ಬದಿಗಿರಿಸಿ ತಕ್ಷಣವೇ ಬೇಷರತ್ತಾಗಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು, ಈ ಮೂಲಕ ಚಳಿ, ಮಳೆಗಳನ್ನೂ ಲೆಕ್ಕಿಸದೇ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸಬೇಕೆAದು ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ. ಈಗಾಗಲೇ ಪ್ರತಿಭಟನೆ ನಡೆಸುತ್ತಾ ಜೀವ ಕಳೆದುಕೊಂಡಿರುವ ರೈತರಿಗೆ ನಿಜವಾಗಿಯೂ ಸಲ್ಲಿಸಬಹುದಾದ ಗೌರವ ಇದಾಗಿದ್ದು, ಇದುವೇ ರಾಜಧರ್ಮ ಎಂದೂ ಬೋಧಿಸಿದ್ದಾರೆ.
ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ
ನವದೆಹಲಿ, ಜ. ೩: ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮತಿ ನೀಡಿದೆ. ಡಿಸಿಜಿಐ ಅಧ್ಯಕ್ಷ ಸೋಮಾನಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ, ಈ ಸಂದರ್ಭದಲ್ಲಿ ಆಕ್ಸ್ಫರ್ಡ್-ಆಸ್ಟಾçಜೆನೆಕಾ ಹಾಗೂ ಭಾರತ್ ಬಯೋಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಬಳಕೆ ಮಾಡಲು ಅಡ್ಡಿಯಿಲ್ಲ ಎಂದು ಎಕ್ಸ್ಪರ್ಟ್ ಕಮಿಟಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸು ಮಾಡಿತ್ತು.
ಜೆಡಿಎಸ್-ಎನ್ಡಿಎ ಜೊತೆ ಸೇರ್ಪಡೆ ಅಪ್ಪಟ ಸುಳ್ಳು
ಬೆಂಗಳೂರು, ಜ. ೩: ಜೆಡಿಎಸ್ ಪಕ್ಷವನ್ನು ಎನ್ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆಗೊಳಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಸಕ್ತಿ ಹೊಂದಿದ್ದಾರೆ ಎಂಬAತಹ ವರದಿಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತಿತ್ತು. ಆದರೆ, ಇವೆಲ್ಲಾ ಸುಳ್ಳು ವರದಿಗಳು ಎಂದು ಕುಮಾರಸ್ವಾಮಿ ಇಂದು ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಇದಕ್ಕಾಗಿಯೇ ಜೆಡಿಎಸ್-ಎನ್ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ವಿಶೇಷ ಪ್ರೋತ್ಸಾಹ
ಬೆಂಗಳೂರು, ಜ. ೩: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವಂತೆ, ರಾಜ್ಯದಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ಎಲ್ಲಾ ಜಿಲ್ಲೆಗಳ ಸ್ಥಳೀಯ, ಸಾಂಪ್ರದಾಯಿಕ ಪ್ರಮುಖ ಉತ್ಪನ್ನಗಳಿಗೆ ವಿಶೇಷ ಪ್ರೋತ್ಸಾಹ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ಕಾರ್ಯಕ್ರಮದಡಿಯಲ್ಲಿ ಹಣಕಾಸು ನೆರವು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆತು ಉದ್ಯೋಗಾವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಟ್ವೀಟರ್ನಲ್ಲಿ ತಿಳಿಸಿದ್ದಾರೆ.
ಭಾರತೀಯ ಸೇನೆಯ ಸಶಸ್ತç ಪಡೆಗಳನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ
ಅರುಣಾಚಲ ಪ್ರದೇಶ, ಜ. ೩: ಭಾರತೀಯ ಸೇನೆಯ ಯೋಧರ ಕರ್ತವ್ಯದಿಂದ ವಿಮುಖವಾಗಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಭಾರತದ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಅವರು ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆ ಬಳಿ ಫಾರ್ವರ್ಡ್ ವಾಯುಪಡೆ ನೆಲೆಗಳಲ್ಲಿ ಭಾರತೀಯ ಮಿಲಿಟರಿಯ ತಯಾರಿಯನ್ನು ಪರಾಮರ್ಶೆ ನಡೆಸಿದರು. ಕಳೆದ ೮ ತಿಂಗಳಿನಿAದ ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಸೇನೆಗಳು ನಿಯೋಜನೆಗೊಂಡಿವೆ. ಜನರಲ್ ರಾವತ್ ಅವರು ಕೆಲವು ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಈ ಸಂದರ್ಭ ಹಿರಿಯ ಮಿಲಿಟರಿ ಕಮಾಂಡರ್ಗಳು ಈ ಪ್ರದೇಶದ ಭದ್ರತಾ ಮ್ಯಾಟ್ರಿಕ್ಸ್ನ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪೂರ್ವ ವಲಯದಲ್ಲಿನ ವಾಯುಪಡೆ ನೆಲೆಗಳ ಫಾರ್ವರ್ಡ್ ಪ್ರದೇಶಗಳಿಗೆ ಜನರಲ್ ರಾವತ್ ಅವರು ಭೇಟಿ ನೀಡಿದರು. ವಿಶೇಷ ಗಡಿನಾಡು ಪಡೆ, ಸೈನ್ಯ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸಿಬ್ಬಂದಿಗಳು ಡಿಬಾಂಗ್ ಕಣಿವೆ ಮತ್ತು ಲೋಹಿತ್ ವಲಯದ "ಫಾರ್ವರ್ಡ್ ಮೋಸ್ಟ್ ಏರ್ ಮ್ಯಾನೇಜ್ಮೆಂಟ್ ಹುದ್ದೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ಗಡಿಗಳನ್ನು ಕಾಪಾಡುವ ಕರ್ತವ್ಯದ ಎಲ್ಲೆಯನ್ನು ಮೀರಿ ಹೋಗಲು ಇಚ್ಛಿಸುವ ಇಂತಹ ಸವಾಲಿನ ಸಂದರ್ಭಗಳಲ್ಲಿ ಭಾರತೀಯ ಸೈನಿಕರು ಮಾತ್ರ ಜಾಗರೂಕರಾಗಿರಬಹುದು. ಕರ್ತವ್ಯಕ್ಕಾಗಿ ತಮ್ಮ ಕರೆಯಲ್ಲಿ ಅಚಲವಾಗಿ ಉಳಿಯಲು ಭಾರತೀಯ ಸಶಸ್ತ್ರ ಪಡೆಗಳನ್ನು ತಡೆಯಲು ಯಾವುದಕ್ಕೂ ಸಾಧ್ಯವಿಲ್ಲ ಎಂದು ಜ. ರಾವತ್ ಅವರು ಹೇಳಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಲಡಾಖ್ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರು ನಿಲುಗಡೆ ಹೊಂದಿರುವ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ಚೀನಾದೊಂದಿಗೆ ಸುಮಾರು ೩,೫೦೦ ಕಿ.ಮೀ.ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚಿನ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಯ್ದುಕೊಂಡಿರುವ ಸಮಯದಲ್ಲಿ ಜ. ಬಿಪಿನ್ ರಾವತ್ ಸ್ಥಳಕ್ಕೆ ಭೇಟಿ ನೀಡಿ ಪರಾಮರ್ಶೆ ನಡೆಸಿದ್ದಾರೆ.
ಸೌರವ್ ಗಂಗೂಲಿಗೆ ಶಸ್ತçಚಿಕಿತ್ಸೆ
ಕೋಲ್ಕತಾ, ಜ. ೩: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಆ್ಯಂಜಿಯೋ ಪ್ಲಾಸ್ಟಿ ಶಸ್ತçಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೌರವ್ ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನು ಕೋಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಅವರಿಗೆ ಪ್ರಸ್ತುತ ಆ್ಯಂಜಿಯೋ ಪ್ಲಾಸ್ಟಿ ಶಸ್ತçಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವುಡ್ಲ್ಯಾಂಡ್ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್ ಖಾನ್ ಅವರು, ಸದ್ಯ ಗಂಗೂಲಿ ಅವರ ಆರೋಗ್ಯದ ಕುರಿತು ೨೪ ಗಂಟೆಗಳ ಕಾಲ ನಿಗಾವಹಿಸುತ್ತಿದ್ದೇವೆ. ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಬಳಿಕ ಗಂಗೂಲಿ ಸಂಪೂರ್ಣ ಪ್ರಜ್ಞಾ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಲ್ತ್ ಬುಲೆಟಿನ್ ಕೂಡ ಬಿಡುಗಡೆ ಮಾಡಿದ್ದು, ಅವರ ಆರೋಗ್ಯಸ್ಥಿತಿ ನೋಡಿಕೊಂಡು ಇನ್ನೊಮ್ಮೆ ಆ್ಯಂಜಿಯೊಪ್ಲಾಸ್ಟಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಪ್ರಮುಖ ರಕ್ತನಾಳಗಳಿಗೆ ಬಾಧೆಯಿರುವ ಕಾರಣ ಅವರಿಗೆ ಮತ್ತೊಂದು ಆ್ಯಂಜಿಯೊಪ್ಲಾಸ್ಟಿ ಬೇಕಾಗಬಹುದು. ಆದರೆ ಇದು ಅವರ ದೇಹಸ್ಥಿತಿಯನ್ನು ಅವಲಂಬಿಸಿದೆ. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಅಲ್ಲದೇ ೪೮ ವರ್ಷದ ಗಂಗೂಲಿ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.
ಮಾಜಿ ಪೊಲೀಸ್ ಆಯುಕ್ತ ಪಿ.ಜಿ. ಹರ್ಲಂಕರ್ ನಿಧನ
ಬೆಂಗಳೂರು, ಜ. ೩: ಆಪರೇಷನ್ ಟೈಗರ್ ಮೂಲಕ ಸರಗಳ್ಳರ ಹುಟ್ಟಡಗಿಸಿದ್ದ ಮಾಜಿ ಪೊಲೀಸ್ ಆಯುಕ್ತ ಪಿ.ಜಿ. ಹರ್ಲಂಕರ್ ನಿಧನರಾಗಿದ್ದಾರೆ. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನೆಲೆ ನಗರದ ವಿಕ್ರಮ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹರ್ಲಂಕರ್ ಅವರು, ಬೆಂಗಳೂರು ನಗರ ಆಯುಕ್ತರಾಗಿ, ಸಿ.ಆರ್.ಪಿ.ಎಫ್.ನ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ತಾವು ಸತ್ತ ಮೇಲೆ ತಮ್ಮ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕೆಂಬ ಇಚ್ಚೆ ಹೊಂದಿದ್ದರು. ಅವರ ದೇಹವನ್ನು ದಾನ ನೀಡುವ ಪ್ರಕ್ರಿಯೆ ಕುಟುಂಬಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ ಸಮ್ಮುಖದಲ್ಲಿ ನಡೆಯಲಿದೆ.