*ಸಿದ್ದಾಪುರ, ಜ.೪ : ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ಗಿಡಗಳನ್ನು ಕಡಿದು ನಾಶ ಮಾಡಿರುವ ಘಟನೆ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ನಂಜರಾಯಪಟ್ಟಣದ ಬೆಳೆಗಾರ ಕರ್ಣಯ್ಯನ ಕಾರ್ಯಪ್ಪ

ಅವರು ವಾಲ್ನೂರಿನಲ್ಲಿ ಕಾಫಿ ತೋಟವನ್ನು ಹೊಂದಿದ್ದು, ರಾತ್ರಿ ವೇಳೆ ದುಷ್ಕರ್ಮಿಗಳು ಒಂದು ವರ್ಷದ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ.

ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫಸಲು ಬಿಡುವ ಸಂದರ್ಭ ಕಾಫಿ ಗಿಡಗಳನ್ನು ನಾಶ ಮಾಡಿದ್ದು, ಸಾಕಷ್ಟು ನಷ್ಟವಾಗಿದೆ ಎಂದು ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ನೂತನ ಗ್ರಾ.ಪಂ ಸದಸ್ಯ ಭುವನೇಂದ್ರ ಪ್ರತಿವರ್ಷ ಈ ಭಾಗದಲ್ಲಿ ಕಾಫಿ ಮತ್ತು ಕಾಳುಮೆಣಸು ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕುತ್ತಿರುವ ಪ್ರಕರಣಗಳು ಮರುಕಳಿಸುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಳೆದ ವರ್ಷ ಬಿ.ಆರ್.ವಿವೇಕ್ ಹಾಗೂ ೨೦೧೮ ರಲ್ಲಿ ಬಿ.ಬಿ.ದೇವಿಲಾಲ್ ಎಂಬವರ ಕಾಫಿ ಗಿಡ ಮತ್ತು ಕಾಳುಮೆಣಸಿನ ಬಳ್ಳಿಗಳನ್ನು ನಾಶ ಮಾಡಲಾಗಿತ್ತು ಎಂದರು.ಪ್ರತಿವರ್ಷ ಈ ಭಾಗದಲ್ಲಿ ಕಾಫಿ ಮತ್ತು ಕಾಳುಮೆಣಸು ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕುತ್ತಿರುವ ಪ್ರಕರಣಗಳು ಮರುಕಳಿಸುತ್ತಿದೆ. ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಳೆದ ವರ್ಷ ಬಿ.ಆರ್.ವಿವೇಕ್ ಹಾಗೂ ೨೦೧೮ ರಲ್ಲಿ ಬಿ.ಬಿ.ದೇವಿಲಾಲ್ ಎಂಬವರ ಕಾಫಿ ಗಿಡ ಮತ್ತು ಕಾಳುಮೆಣಸಿನ ಬಳ್ಳಿಗಳನ್ನು ನಾಶ ಮಾಡಲಾಗಿತ್ತು ಎಂದರು.