ಕೂಡಿಗೆ, ಜ. ೪: ಲೋಕೋಪ ಯೋಗಿ ಇಲಾಖೆಯ ವತಿಯಿಂದ ನಡೆದ ಒಂದು ಕೋಟಿ ವೆಚ್ಚದ ರಸ್ತೆ ಕಾಮಗಾರಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಸ್ತೆಯ ಉದ್ಘಾಟನೆ ಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ನವರು ನೆರವೇರಿಸಿದರು
ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಳ್ಳ ಲಾಗಿದ್ದ ಕಾಮಗಾರಿಯಲ್ಲಿ ಹೆಬ್ಬಾಲೆ ಗ್ರಾಮದ ಅಂಬೇಡ್ಕರ್ ಕಾಲೋನಿಯ ೨೫ ಲಕ್ಷದ ಕಾಂಕ್ರೀಟ್ ರಸ್ತೆ ಮತ್ತು ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ಧಲಿಂಗಪುರ ರಸ್ತೆ ಮತ್ತು ಮರೂರು ರಸ್ತೆ, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬೩ ಲಕ್ಷ ವೆಚ್ಚದ ಚಿಕ್ಕತ್ತೂರು - ಕೂಡುಮಂಗಳೂರು ಗ್ರಾಮದ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸಭಿತ ಚನ್ನಕೇಶವ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರುಗಳಾದ ಕೆ.ಕೆ. ಭೋಗಪ್ಪ ಭಾಸ್ಕರ್ ನಾಯಕ ಕೂಡುಮಂಗಳೂರು ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಮಂಜುನಾಥ ಗುರುಲಿಂಗಪ್ಪ. ಪ್ರವೀಣ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೀಟರ್ ಸೇರಿದಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.