ಮಡಿಕೇರಿ, ಜ. ೪: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರಾದಾಶ್ರಮದಲ್ಲಿ ತಾ.೫ (ಇಂದು) ರಂದು ಶಾರದಾದೇವಿ ಅವರ ೧೬೮ನೇ ಜಯಂತ್ಯೋತ್ಸವ ನಡೆಯಲಿದೆ. ಬೆಳಗ್ಗೆ ಮಂಗಳಾರತಿ, ಉಷಾಕೀರ್ತನೆ, ವಿಶೇಷ ಪೂಜೆ, ವೇದ ಪಠಣ, ಹೋಮ, ಉಪನ್ಯಾಸ, ಮದ್ಯಾಹ್ನ ಭಜನೆ, ಮಹಾಮಂಗಳರಾತಿ ಮತ್ತು ಪುಷ್ಪಾಂಜಲಿ, ಸಂಜೆ ಆರತಿ ಮತ್ತು ವಿಶೇಷ ಭಜನೆ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.