ಶನಿವಾರಸಂತೆ, ಜ. ೩: ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಲಯನ್ಸ್ ಕಚೇರಿ ಸಭಾಂಗಣದಲ್ಲಿ ರಾಷ್ಟçಕವಿ ಕುವೆಂಪು ಅವರ ೧೧೬ನೇ ಜನ್ಮದಿನವನ್ನು ಆಚರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಕನ್ನಡ ನಾಡಿಗೆ, ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟ ರಾಷ್ಟçಕವಿ ಕುವೆಂಪು ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಇವರ ರಾಮಾಯಣ ದರ್ಶನಂ ಮಹಾ ಕಾವ್ಯವು ರಾಷ್ಟç ಪ್ರಶಸ್ತಿ ತಂದುಕೊಟ್ಟಿತು ಎಂದರು.

ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ಶಿಕ್ಷಕ ಗೋಪಾಲ, ಭಾರತಿ ವಿದ್ಯಾಸಂಸ್ಥೆಯ ಶಿಕ್ಷಕಿ ಭವಾನಿ, ಲಯನ್ಸ್ ಕ್ಲಬ್ ಉಪಾಧ್ಯಕ್ಷರುಗಳಾದ ನಾರಾಯಣ ಸ್ವಾಮಿ, ಎಸ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಕೆ.ಎನ್. ಕಾರ್ಯಪ್ಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎನ್.ಬಿ. ನಾಗಪ್ಪ, ಜಗನ್‌ಪಾಲ್, ಜಿ. ಪುಟ್ಟಪ್ಪ, ಮಲ್ಲೇಶ್ ಉಪಸ್ಥಿತರಿದ್ದು, ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ನಾರಾಯಣ ಸ್ವಾಮಿ ಧ್ವಜವಂದನೆ ಮಾಡಿ, ವಂದಿಸಿದರು.