ಸುಂಟಿಕೊಪ್ಪ, ಜ. ೩: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗರಿಕ ಹಿತರಕ್ಷಣಾ ಟ್ರಸ್ಟ್ನ ಅಧ್ಯಕ್ಷರಾಗಿ ಕೆರೆಮನೆ ಮಂಜುನಾಥ್ ಹೆಚ್.ವಿ. ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ಅವರನ್ನು ನೇಮಕಗೊಳಿಸಲಾಯಿತು.

೭ನೇ ಹೊಸಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಗರಿಕ ಹಿತರಕ್ಷಣಾ ಟ್ರಸ್ಟ್ (ರಿ) ಅಸ್ತಿತ್ವಕ್ಕೆ ತರಲಾಗಿದ್ದು ಗ್ರಾಮದಲ್ಲಿ ಸೌಹಾರ್ದ ಹಾಗೂ ಸಮಾಜ ಸೇವೆಯ ಮೂಲ ಧ್ಯೇಯವಾಗಿರಿಸಿಕೊಂಡು ಗ್ರಾಮದಲ್ಲಿ ನೆಲೆಸಿರುವ ಸಮಾಜಮುಖಿ ಪದಾಧಿಕಾರಿಗಳ ತಂಡವನ್ನು ರಚಿಸಲಾಗಿದೆ.

ಗ್ರಾಮವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹರಿಸುವ ದಿಸೆಯಲ್ಲಿ ಸಂಬAಧಿಸಿದ ಇಲಾಖೆಗಳ ಗಮನಕ್ಕೆ ತಂದು ಗ್ರಾಮದ ಅಭಿವೃದ್ಧಿ ಹಮ್ಮಿಕೊಳ್ಳುವುದು ಸಂಘಟನೆಯ ಉದ್ದೇಶವಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ಟ್ರಸ್ಟ್ನ ಉಪಾಧ್ಯಕ್ಷರುಗಳಾಗಿ ಉಷಾ, ಮಜಿದ್, ಖಜಾಂಚಿ ಕಿರಣ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರವಿ, ಚಂದ್ರ, ಉಮೇಶ, ನಿರ್ದೇಶಕರುಗಳಾಗಿ ಸುಜಿತ್, ಬಿಜು, ಮಂಜುಳಾ ಪ್ರಕಾಶ್, ಜಬ್ಬಾರ್, ಪುರುಷೋತ್ತಮ್ ಅವರುಗಳನ್ನು ನೇಮಕಗೊಳಿಸಲಾಯಿತು.