ಮಡಿಕೇರಿ, ಜ. ೨: ಕಾರುಗುಂದ ವಲಯ ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯಲ್ಲಿ ನಡೆಸಲಾಯಿತು. ತಾ. ೨೫ ರಿಂದ ತಾ. ೨೭ ರವರೆಗೆ ಏರ್ಪಡಿಸಲಾಗಿದ್ದ ಟೂರ್ನಿಯಲ್ಲಿ ಮುಖ್ಯ ಅತಿಥಿಗಳಾಗಿ ತಾತಪಂಡ ಜ್ಯೋತಿ ಅವರು ಭಾಗವಹಿಸಿದ್ದರು. ಪಂದ್ಯಾವಳಿ ೩ ದಿನಗಳ ಕಾಲ ನಡೆದಿದ್ದು ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್, ಮಿಕ್ಸ್ ಡಬಲ್ಸ್ ವಿಭಾಗಗಳಾಗಿ ವಿಂಗಡಿಸಲಾಗಿತ್ತು.

ಪುರುಷರ ಸಿಂಗಲ್ಸ್ ವಿಭಾಗದ ವಿಜೇತರು: (ಪ್ರ) ಕೆ.ಯು. ಪ್ರಜ್ವಲ್, (ದ್ವಿ) ಕಿರಣ್ ನಾಟೋಳಂಡ. ಮಹಿಳೆಯರ ಸಿಂಗಲ್ಸ್ ವಿಜೇತರು: (ಪ್ರ)ಸಿಂಚನ ಪಿ.ಸಿ., (ದ್ವಿ) ಸಾನ್ವಿ ಕಬ್ಬಚ್ಚಿರ. ಪುರುಷರ ಡಬಲ್ಸ್ ವಿಜೇತರು: (ಪ್ರ) ಸಮಂತ್ ಮತ್ತು ಸುಬ್ಬಯ್ಯ, (ದ್ವಿ) ಪಿ.ಡಿ. ಪೊನ್ನಪ್ಪ ಮತ್ತು ಕವಿ. ಮಹಿಳೆಯರ ಡಬಲ್ಸ್ ವಿಜೇತರು: (ಪ್ರ) ಸಿಂಚನ ಪಿ.ಎಸ್ ಮತ್ತು ದಿಯ ನಾಳೋಳಂಡ, (ದ್ವಿ) ಲಿಶಾ ಕಾರ್ಯಪ್ಪ ಮತ್ತು ಸಿಯಾನ್ ದೇಚಮ್ಮ. ಮಿಕ್ಸ್ ಡಬಲ್ಸ್ ವಿಜೇತರು: (ಪ್ರ) ಸಿಂಚನ ಪಿ.ಎಸ್. ಮತ್ತು ಪ್ರಜ್ವಲ್ ಕೆ.ಯು., (ದ್ವಿ ) ಸಾನ್ವಿ ಕಬ್ಬಚ್ಚಿರ ಮತ್ತು ಪ್ರಜ್ವಲ್ ಕಬ್ಬಚ್ಚಿರ.

ಪಂದ್ಯಾವಳಿಯ ಆಯೋಜಕರಾಗಿ ಕುಟ್ಟೇಟಿರ ಸೋಮಣ್ಣ, ಕಬ್ಬಚ್ಚಿರ ಪ್ರಶಾಲ್, ಪ್ರಜ್ವಲ್, ಸಾನ್ವಿ, ಕೀತಿಯಂಡ ಲಿಯಾ, ಲಿಶಾ, ತಾನ್ಯ, ಪ್ರತೀಕ್ ಬಿದ್ದಂಡ, ಮೊಟ್ಟೇಯಂಡ ನೀಲ್, ಇಶಿಕ, ಇಶಾನಿ ಕಾರ್ಯನಿರ್ವಹಿಸಿದರು.