ಕುಶಾಲನಗರ, ಜ. ೨: ಹೊಸ ವರ್ಷದ ಆರಂಭದ ದಿನ ಕುಶಾಲನಗರದ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬAತು. ಬೆಳಗಿನಿಂದಲೇ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.

ಶಾಲಾ, ಕಾಲೇಜು ಪ್ರಾರಂಭವಾದ ಹಿನೆÀ್ನಲೆ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಈ ನಡುವೆ ಕುಶಾಲನಗರ ನೂತನ ತಾಲೂಕು ರಚನೆಯ ಅಧಿಕೃತ ಅಧಿಸೂಚನೆ ಹೊರಬಿದ್ದ ನಿಟ್ಟಿನಲ್ಲಿ ಕುಶಾಲನಗರ ವಕೀಲರ ಸಂಘದ ಸದಸ್ಯರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು. ವಕೀಲರ ಸಂಘದ ಅಧ್ಯಕ್ಷರು, ಪ್ರಧಾನ ಅರ್ಚಕರಾಗಿರುವ ಆರ್.ಕೆ. ನಾಗೇಂದ್ರಬಾಬು, ಕೆ.ಬಿ. ಮೋಹನ್ ಮತ್ತಿತರರು ಇದ್ದರು.

ಕಾವೇರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪದಾಧಿಕಾರಿಗಳು ದೇವಾಲಯದಲ್ಲಿ, ಚರ್ಚ್, ಮಸೀದಿಯಲ್ಲಿ ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು.

ಈ ಸಂದರ್ಭ ಸಮಿತಿಯ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಎಂ.ವಿ. ನಾರಾಯಣ, ಟಿ.ಆರ್. ಶರವಣಕುಮಾರ್ ಮತ್ತಿತರರು ಇದ್ದರು.