ಮಡಿಕೇರಿ, ಜ. ೧: ದುಬೈಯಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೋರ್ವ ಅನಧಿಕೃತವಾಗಿ ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ ರೂ. ೫೨.೮೯ ಲಕ್ಷ ಮೌಲ್ಯದ ಚಿನ್ನವನ್ನು ವಾಯು ಗುಪ್ತಚರ ಘಟಕ (ಎ.ಐ.ಯು)ದ ಸಿಬ್ಬಂದಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ವ್ಯಕ್ತಿ ಕೊಡಗಿನ ವೀರಾಜಪೇಟೆ ತಾಲೂಕಿನ ಹಾಲುಗುಂದದ ಮಹಮದ್ (೩೮) ಎಂದು ತಿಳಿದುಬಂದಿದೆ. ತಾ.೨೯ರಂದು ಈತ ದುಬೈಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭ ಗುಪ್ತಚರ ಇಲಾಖಾ ಅಧಿಕಾರಿಗಳು ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. ಈತನ ಒಳಉಡುಪಿನಲ್ಲಿ ೨೦೪೭ ಗ್ರಾಂನಷ್ಟು ಚಿನ್ನ ಪತ್ತೆಯಾಗಿದ್ದು, ಈತನನ್ನು ಮಾಲು ಸಹಿತ ವಶಕ್ಕೆ ಪಡೆದಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.