೧೩ ದೇಶಗಳ ನಾಯಕರ ಪೈಕಿ ಅಗ್ರಸ್ಥಾನ ಪಡೆದ ಮೋದಿ

ನವದೆಹಲಿ, ಜ. ೧: ಮಾರಕ ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ಬಗ್ಗೆ ೧೩ ದೇಶಗಳಲ್ಲಿ ಅಮೇರಿಕಾದ 'ಮಾರ್ನಿಂಗ್ ಕನ್ಸಲ್ಟ್' ಎಂಬ ಸಂಸ್ಥೆ ಸಮೀಕ್ಷೆ ನಡೆಸಲಾಗಿದೆ. ಆ ಸಮೀಕ್ಷೆ ಪ್ರಕಾರ ಪ್ರಧಾನಿ ಮೋದಿ ಅವರು ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇದೇ ಸಂಸ್ಥೆ ಕಳೆದ ಏಪ್ರಿಲ್‌ನಲ್ಲಿ ೧೦ ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ೧೦ ನಾಯಕರ ಪಟ್ಟಿಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಇದೀಗ ಮತ್ತೆ ಡಿಸೆಂಬರ್ ೨೨ ರವರೆಗಿನ ಅಂಕಿಅAಶಗಳನ್ನು ಗಣನೆಗೆ ತೆಗೆದುಕೊಂಡು ಇದೇ ಸಂಸ್ಥೆ ೧೩ ದೇಶಗಳ ಸಮೀಕ್ಷೆ ನಡೆಸಿದೆ. ಇದರಲ್ಲಿಯೂ ಮೋದಿ ಪುನಃ ಪ್ರಥಮ ಸ್ಥಾನ ಪಡೆದು ವಿಶ್ವದ ಅತ್ಯುತ್ತಮ ನಾಯಕ ಎಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ೧೦ ದೇಶಗಳ ಸಮೀಕ್ಷೆ ನಡೆದಾಗ ಮೋದಿ ಅವರಿಗೆ ೬೮ ಅಂಕಗಳು ಲಭಿಸಿತ್ತು. ಇದೀಗ ೧೩ ದೇಶಗಳ ನಡುವೆ ನಡೆದ ಸಮೀಕ್ಷೆಯಲ್ಲಿ ೫೫ ಅಂಕಗಳು ಲಭಿಸಿವೆ.

ಕೋವಿಶೀಲ್ಡ್ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮತಿ

ನವದೆಹಲಿ, ಜ. ೧: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್ಫರ್ಡ್ ಕೋವಿಡ್ -೧೯ ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ರಾಷ್ಟಿçÃಯ ಔಷಧ ನಿಯಂತ್ರಕದ ತಜ್ಞರ ಸಮಿತಿ ಅನುಮತಿ ನೀಡಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್ ತಯಾರಿಸಲು ಆಸ್ಟಾçಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್‌ನ ಔಷಧ ಹಾಗೂ ಆರೋಗ್ಯ ಸೇವೆಗಳ ನಿಯಂತ್ರಣ ಮಂಡಳಿಯು ಬುಧವಾರ ಸೆರಂ ಇನ್ ಸ್ಟಿಟ್ಯೂಟ್‌ನ ಆಕ್ಸ್ ಫರ್ಡ್ ಆಸ್ಟಾçಜೆನೆಕಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ, ಭಾರತದಲ್ಲೂ ತುರ್ತು ಬಳಕೆಗೆ ಅನುಮತಿ ನೀಡಲು ತಜ್ಞರ ಸಮಿತಿ ನಿರ್ಧರಿಸಿದೆ. ಭಾರತದಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಹಾಗೂ ಲಸಿಕೆ ತಯಾರಿಸಲು ಸೆರಮ್ ಇನ್‌ಸ್ಟಿಟ್ಯೂಟ್ ಬ್ರಿಟನ್ ಕಂಪೆನಿಯೊAದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಲಸಿಕೆಯ ತುರ್ತು ಅನುಮೋದನೆಗೆ ಸಂಬAಧಿಸಿದAತೆ ಡಿಸೆಂಬರ್ ೯ ರಂದು ಅರ್ಜಿ ಪರಿಶೀಲಿಸಿದ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿ, ಲಸಿಕೆ ತಯಾರಕ ಕಂಪೆನಿಗಳಿAದ ವೈದ್ಯಕೀಯ ಪ್ರಯೋಗಗಳ ಕುರಿತು ಹೆಚ್ಚುವರಿ ಅಂಕಿ ಅಂಶಗಳನ್ನು ಕೇಳಿತ್ತು. ಡಿಸೆಂಬರ್ ೨೪ ರಂದು ಸೆರಂ ಸಂಸ್ಥೆ ಮಾಹಿತಿಯನ್ನು ಒದಗಿಸಿತ್ತು.

ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿಕೊಂಡ ಬಾಲಕ

ಚೆನ್ನೆöÊ, ಜ. ೧: ಭಾರತದ ೬೭ನೇ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಹೊಸ ದಾಖಲೆ ಬರೆದಿದ್ದ ಗೋವಾದ ೧೪ ವರ್ಷದ ಲಿಯಾನ್ ಮೆಂಡೊAಕಾ ಎನ್ನುವ ಬಾಲಕ. ಆತನ ಸಾಧನೆಗೆ ಟ್ವೀಟ್ ಮೂಲಕ ಅಭಿನಂದಿಸಿದ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್. ಇಟಲಿಯಲ್ಲಿ ನಡೆದ ವೆಗಾನ್ ಕಪ್ನಲ್ಲಿ ಎರಡನೇ ಸ್ಥಾನ ಹೊಂದಿದ ಲಿಯಾನ್ ಮೂರನೇ ಹಾಗೂ ಫೈನಲ್ ನಾರ್ಮ್ ಪಡೆದುಕೊಂಡಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ಬರೆದಿರುವ ಲಿಯಾನ್, ಲಾಕ್‌ಡೌನ್‌ನಲ್ಲಿ ಯುರೋಪ್‌ನಲ್ಲಿ ಇದ್ದ ಲಿಯಾನ್ ಚೆಸ್‌ನಲ್ಲಿ ಪರಿಣಿತಿ ಪಡೆಯುವ ಪ್ರಯತ್ನ ಮಾಡಿದ್ದಾರೆ. ಮಾರ್ಚ್ನಿಂದ ಡಿಸೆಂಬರ್‌ವರೆಗೆ ೧೬ ಟೂರ್ನ್ಮೆಂಟ್‌ಗಳಲ್ಲಿ ಭಾಗವಹಿಸಿ ಇಎಲ್‌ಒ ರೇಟಿಂಗ್ ಪಾಯಿಂಟ್ ಅನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ೨೪೩೨ ನಿಂದ ೨೫೪೪ ಪಾಯಿಂಟ್‌ಗಳಷ್ಟು ರೇಟಿಂಗ್‌ನನ್ನು ಹೆಚ್ಚಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಸಾರ್ವಕಾಲಿಕ ದಾಖಲೆ ಬರೆದ ಜಿಎಸ್‌ಟಿ ಸಂಗ್ರಹ

ನವದೆಹಲಿ, ಜ. ೧: ಜಿಎಸ್‌ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಆಗಿದೆ. ೨೦೨೦ ರ ಡಿಸೆಂಬರ್‌ನಲ್ಲಿ ದಾಖಲೆ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗಿದ್ದು, ಬರೋಬ್ಬರಿ ೧.೧೫ ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ೧,೧೫,೧೭೪ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್ ಜಿಎಸ್‌ಟಿ ಆದಾಯ ಶೇ. ೧೫ ರಷ್ಟು ಜಾಸ್ತಿಯಾಗಿದೆ. ಕಳೆದ ೨೧ ತಿಂಗಳಲ್ಲೇ ಡಿಸೆಂಬರ್ ತಿಂಗಳ ಬೆಳವಣಿಗೆ ಹೆಚ್ಚಿನದ್ದಾಗಿದೆ. ಕೊರೊನಾ ನಂತರ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಇದುವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ಡಿಸೆಂಬರ್‌ನಲ್ಲಿ ಸಂಗ್ರಹವಾದ ಮೊತ್ತ ಗರಿಷ್ಠ ಮೊತ್ತವಾಗಿದೆ. ೨೦೧೯ ರ ಏಪ್ರಿಲ್‌ನಲ್ಲಿ ರೂ. ೧.೧೩ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು.

ದೆಹಲಿಯಲ್ಲಿ ಶೀತಗಾಳಿ: ಮಳೆ ಎಚ್ಚರಿಕೆ

ನವದೆಹಲಿ, ಜ. ೧: ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಮುಂದಿನ ೨೪ ಗಂಟೆಗಳ ಕಾಲ ಅತಿಯಾದ ಶೀತಗಾಳಿ ಆವರಿಸುವುದಾಗಿ ಶುಕ್ರವಾರ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ, ಹರಿಯಾಣ, ಚಂಡೀಗಢದಲ್ಲಿ ಮುಂದಿನ ೪೮ ರಿಂದ ೭೨ ಗಂಟೆಗಳಲ್ಲಿ ಮಳೆಯಾಗುವುದಾಗಿಯೂ ಎಚ್ಚರಿಕೆ ನೀಡಿದೆ. ಉತ್ತರ ಹಿಮಾಲಯ ಪ್ರದೇಶದಲ್ಲಿ ಪಶ್ಚಿಮ ಮಾರುತ ಬೀಸುವ ಸಾಧ್ಯತೆಯಿದ್ದು, ಬಂಗಾಳ ಕೊಲ್ಲಿಯಲ್ಲಿ ತಳಮಟ್ಟದಿಂದ ಗಾಳಿ ಬೀಸುತ್ತಿರುವುದಿಂದ ಮುಂದಿನ ೪೮-೭೨ ಗಂಟೆಗಳ ಅವಧಿಯಲ್ಲಿ ಮಳೆಯಾಗುವ ಸೂಚನೆಯನ್ನು ನೀಡಿದೆ. ತಾ. ೩ ರಿಂದ ೫ ರವರೆಗೂ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಮಧ್ಯ ಹಾಗೂ ಉತ್ತರ ಭಾರತದ ಬಹುಭಾಗದಲ್ಲಿ ಕನಿಷ್ಟ ತಾಪಮಾನವು ೩-೫ ಡಿಗ್ರಿ ಸೆಲ್ಸಿಯಸ್ ಆಗಲಿದೆ ಎಂದು ತಿಳಿಸಿದೆ. ಮುಂದಿನ ೨೪ ಗಂಟೆಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಶೀತ ಗಾಳಿ ಮುಂದುವರೆಯುವುದಾಗಿ ತಿಳಿದುಬಂದಿದೆ. ದೆಹಲಿಯಲ್ಲಿ ಶುಕ್ರವಾರ ತಾಪಮಾನ ೧.೧ ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಹದಿನೈದು ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಇದಾಗಿದೆ.

ಪಾಕ್ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ

ಶ್ರೀನಗರ, ಜ. ೧: ಕುಪ್ವಾರ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಸಮೀಪದಲ್ಲಿ ವಾಸಿಸುವ ನಾಗರಿಕರ ಮನೆಗಳು ಮತ್ತು ಮಸೀದಿಗಳ ಮೇಲೆ ಪಾಕ್ ಪಡೆಗಳು ಶೆಲ್ ಮತ್ತು ಮದ್ದು-ಗುಂಡುಗಳ ದಾಳಿ ನಡೆಸುವ ಮೂಲಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ. ಕುಪ್ವಾರ ಮತ್ತು ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಕದಮ ವಿರಾಮವನ್ನು ಉಲ್ಲಂಘಿಸಿ, ಪಾಕಿಸ್ತಾನಿ ಪಡೆಗಳು ಅಪ್ರಚೋದಿತವಾಗಿ ಶೆಲ್‌ಗಳು ಮತ್ತು ಗುಂಡುಗಳಿAದ ದಾಳಿ ನಡೆಸಿ ನಾಗರಿಕರ ಮನೆಗಳಿಗೆ ಅಪಾರ ಹಾನಿ ಕಲ್ಪಿಸಿದ್ದಾರೆ ಎಂದು ಜಮ್ಮು-ಕಾಶ್ಮೀರದ ಅಧಿಕಾರಿಗಳು ತಿಳಿಸಿದ್ದಾರೆ. ತಂಗ್ಧಾರ್ ಸೆಕ್ಟಾರ್‌ನ ಗ್ರಾಮಗಳ ಮಸೀದಿಗಳು ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಈ ಕೃತ್ಯ ನಡೆಸಿವೆ. ಈ ಅಪ್ರಚೋದಿತ ಕದಮ ವಿರಾಮಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದ್ದಾರೆ.

ಫಾಸ್ಟ್ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ನವದೆಹಲಿ, ಜ. ೧: ರಾಷ್ಟಿçÃಯ ಹೆದ್ದಾರಿಗಳಲ್ಲಿ ಹಾಯ್ದುಹೋಗುವ ಪ್ರತಿಯೊಂದು ವಾಹನವು ಜನವರಿ ೧ ರಿಂದ ಕಡ್ಡಾಯವಾಗಿ ಫಾಸ್ಟ್ಟ್ಯಾಗ್ ಸೌಲಭ್ಯವನ್ನು ಹೊಂದಿರಲೇಬೇಕೆAಬ ನಿಯಮವನ್ನು ಜಾರಿಗೆ ಮುಂದಾಗಿದ್ದ ಕೇಂದ್ರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕಾರಣಾಂತರ ಮತ್ತೊಮ್ಮೆ ಕಡ್ಡಾಯ ನಿಯಮವನ್ನು ಮುಂದೂಡಿಕೆ ಮಾಡಿದೆ. ಫಾಸ್ಟ್ಟ್ಯಾಗ್ ಮೂಲಕ ಶೇ. ೧೦೦ರಷ್ಟು ನಗದುರಹಿತ ಟೋಲ್ ಶುಲ್ಕ ಪಾವತಿ ಸೌಲಭ್ಯವನ್ನು ಜಾರಿಗೊಳಿಸುವ ಸಂಬAಧ ಹಲವಾರು ಬಾರಿ ಕಡ್ಡಾಯ ಫಾಸ್ಟ್ಟ್ಯಾಗ್ ಅಳಡಿಕೆಯ ಗಡುವು ನೀಡಿದ್ದ ಕೇಂದ್ರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಕಳೆದ ವಾರವಷ್ಟೇ ೨೦೨೧ರ ಜನವರಿ ೧ ರಿಂದ ಕಡ್ಡಾಯವಾಗಿ ಜಾರಿಗೆ ತರುವುದಾಗಿ ಹೇಳಿಕೊಂಡಿತ್ತು. ಆದರೆ ಕಡ್ಡಾಯ ನಿಯಮ ಜಾರಿಗೆ ದಿನಗಣನೆಯ ನಡುವೆಯೂ ನಗದು ಮೂಲಕ ಶುಲ್ಕ ಪಾವತಿ ಮಾಡುವ ವಾಹನ ಮಾಲೀಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಒಂದು ವೇಳೆ ಫಾಸ್ಟ್ಟ್ಯಾಗ್ ಖಾತೆಯಲ್ಲಿ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಬ್ಯಾಲೆನ್ಸ್ ಹೊಂದಿದ್ದಲ್ಲಿ ರೆಡ್ ಬಣ್ಣದ ಮೂಲಕ ರೀಚಾರ್ಜ್ಗೆ ಸೂಚಿಸಲಿದ್ದು, ಅತಿ ಸುಲಭವಾಗಿ ಬ್ಯಾನೆಲ್ಸ್ ಚೆಕ್ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾಗಳಲ್ಲಿರುವ ಪಾಯಿಂಟ್ ಆಫ್ ಸೇಲ್‌ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.