ವೀರಾಜಪೇಟೆ, ಡಿ. ೩೧: ತಾಲೂಕಿನ ಗೋಣಿಕೊಪ್ಪ ಮುಖ್ಯರಸ್ತೆಯಲ್ಲಿರುವ ಎಸ್. ಕುಮಾರ್ ಬಟ್ಟೆ ಅಂಗಡಿಯ ಮಾಲೀಕ ಕುಮಾರ್ ಅವರ ಮಾತೃಶ್ರೀ ರಾಜಮ್ಮ ಸರಕಾರಿ ಮಾದರಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಶಾಲೆಯ ಮೇಲಿನ ಅಭಿಮಾನದಿಂದ ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನುಕೂಲಕ್ಕಾಗಿ ಹೆಚ್.ಪಿ. ಸಂಸ್ಥೆಯ ರೂ. ೪೦ ಸಾವಿರ ಮೌಲ್ಯದ ಲ್ಯಾಪ್‌ಟಾಪನ್ನು ಶಾಲೆಗೆ ಉದಾರವಾಗಿ ನೀಡಿದ್ದಾರೆ.

ರಾಜಮ್ಮ ಅವರಿಗೆ ಶಾಲೆಯಿಂದ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಶಾಲಾ ಶಿಕ್ಷಕರ ಈ ಕಾರ್ಯವನ್ನು ಅಭಿನಂದಿಸಿ, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕ ವೃಂದದವರು ಮತ್ತು ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ದಾನಿಗಳ ಕುಟುಂಬಸ್ಥರು ಹಾಜರಿದ್ದರು.