ಹಳೆಯ ನೆನಪಿನ ಜೋಳಿಗೆಯನ್ನು ಬಗಲಿಗೇರಿಸುತ್ತ ಹೊಸ ವರುಷವು ಮತ್ತೆ ಬಂದಿದೆ. ಪ್ರಕೃತಿಯಲ್ಲಿ ಏನೂ ಬದಲಾವಣೆ ಇಲ್ಲದಿದ್ದರೂ ಪ್ರತಿಯೊಬ್ಬರಿಗೂ ಹೊಸ ವರುಷವೆಂದರೆ ಸಂಭ್ರಮ ಸಡಗರ ಶುಭಕೋರುವ ಪಾರ್ಟಿ ಎಂಬ ಪಾಶ್ಚಾತ್ಯ ಸಂಸ್ಕೃತಿ. ಹೊಸ ವರುಷ ಸಂಭ್ರಮಾಚರಣೆ ಕೆಲವೊಂದು ಪ್ರವಾಸಿ ತಾಣಗಳ ಮುಂಗಡ ಕಾಯ್ದಿರಿಸುವಿಕೆ ಎಲ್ಲವೂ ಶತಮಾನಗಳಿಂದ ನಡೆದುಕೊಂಡು ಬಂದAತಹ ಪದ್ಧತಿ.

ಆದರೆ ೨೦-೨೦ ಎಂಬ ವರುಷ ಮಾನವನ ಬದುಕಿಗೆ ದೊಡ್ಡ ಬಿರುಗಾಳಿಯನ್ನೇ ಬೀಸಿತ್ತು. ಕೇವಲ ಭೂಪಟದಲ್ಲಿ ಚೀನಾದೇಶವನ್ನು ನೋಡಿದ. ಪತ್ರಿಕೆಯಲ್ಲಿ ‘ಕೊರೊನಾ’ ಎಂಬ ಪದವನ್ನು ಓದಿದ ನಾವೇ ಅದನ್ನು ಅನುಭವಿಸುವಂತಾಯಿತು. ‘ಲಾಕ್‌ಡೌನ್’ ಎಂದು ಘೋಷಣೆ ಆದಾಗ ದೇಶದ ಆರ್ಥಿಕತೆಯೇ ಪತ್ತರಿಸುವಂತಾಯಿತು. ದಿನಗೂಲಿ ನೌಕರರಿಗೆ ಕೆಲಸ ಇಲ್ಲವಾಯಿತು. ಖಾಸಾಗಿ ಒಡೆತನದ ಸಂಸ್ಥೆ ದಿವಾಳಿ ಆದವು. ಪ್ರತಿಯೊಬ್ಬರಿಗೂ ದೈನಂದಿನ ಖರ್ಚು-ವೆಚ್ಚಗಳನ್ನು ನಿಭಾಯಿಸಲಾಗದೆ ಒದ್ದಾಡುವಂತಾಯಿತು. ಕೆಲವೊಂದು ಪ್ರದೇಶಗಳಲ್ಲಿ ಸಂಘ-ಸAಘಟನೆಗಳು ಬಡವರಿಗೆ ಉಚಿತ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ತೋರಿದರು. ಗಣ್ಯವ್ಯಕ್ತಿಗಳು, ರಾಜಕಾರಣಿಗಳು, ಸಿನಿಮಾರಂಗದವರು ಈ ಮಹಾನ್ ಕಾರ್ಯಕ್ಕೆ ಕೈಜೋಡಿಸಿದರು. ೨೦೨೦ ಎಂಬದು ಪ್ರತಿಯೊಬ್ಬರ ಪಾಲಿಗೆ ಕರಾಳ ಅಧ್ಯಾಯವಾಗಿತ್ತು. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದಾಗಲೂ ಕೊರೊನಾ ವಾರಿಯರ್ಸ್ ಎಂದು ಕರೆಯಲ್ಪಡುವ ಅಂಚೆ ಪೇದೆಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಆರಕ್ಷಕರು ಇವರುಗಳ ಸೇವೆಯು ಮಹತ್ವವೆನಿಸಿತು. ಜನರ ಮನಸ್ಥಿತಿಯನ್ನು ಮೊದಲಿನಂತೆ ತರಲು ಬಹಳ ತ್ರಾಸವಾಗಿತ್ತು. ಕೊರೊನಾ ಪ್ರತಿಯೊಬ್ಬರ ಜೀವನವನ್ನೇ ಬದಲಾಯಿಸಿತು. ಮನೆಯ ಪರಿಸ್ಥಿತಿ ಬಿಗಡಾಯಿಸುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಪಥವನ್ನೇ ಬದಲಿಸಿತು. ಮೊಬೈಲ್‌ನಿಂದ ದೂರವಿರಿ ಎಂದು ಹೇಳುವ ಶಿಕ್ಷಕರೇ ಮೊಬೈಲ್ ಮೂಲಕ ಪಾಠ ಮಾಡಬೇಕಾದ ಅನಿವಾರ್ಯತೆ ಬಂದಿತು. ಮೊಬೈಲ್ ಕೊಡಿಸಲಾಗದ ಪೋಷಕರು, ನೆಟ್‌ವರ್ಕ್ ಇಲ್ಲದ ಪ್ರದೇಶ, ಖಾಸಗಿ ಶಾಲೆ ನಡೆಸುವ ಮುಖ್ಯಸ್ಥರು ಎಲ್ಲರಿಗೂ ಕೊರೊನಾ ಬಲವಾದ ಹೊಡೆತ ನೀಡಿತ್ತು. ಮನುಷ್ಯನ ಹಣ-ಅಧಿಕಾರದ ದರ್ಪ ಎಲ್ಲವನ್ನೂ ಕೊರೊನಾ ಮೆಟ್ಟಿನಿಂತು ಮಾನವೀಯತೆ ದೊಡ್ಡದು, ಸನಾತನ ಸಂಸ್ಕೃತಿಯನ್ನು ಇನ್ನಾದರೂ ಮುಂದುವರಿಸಿ ಎಂದು ಮೌನ ಸಂದೇಶ ನೀಡಿತು. ೨೦೨೦ ಎಂಬದು ಕೊರೊನಾ ವರ್ಷವೆಂದೇ ಹೇಳುವಷ್ಟು ಬದುಕನ್ನು ಬಿಗಡಾಯಿಸಿತು. ಮಾಸ್ಕ್, ಸ್ಯಾನಿಟೈಸರ್ ಎಂಬುದು ಎಷ್ಟು ಮುಖ್ಯವಾದುದು ಎಂದು ಮನದಟ್ಟಾಯಿತು. ಏನೇ ಇರಲಿ, ೨೦೨೧ ಹಳೆಯ ಕೊಳೆಯನ್ನು ಹೋಗಲಾಡಿಸಿ ಪ್ರತಿಯೊಬ್ಬರ ಬದುಕಿನಲ್ಲೂ ಮಂದಹಾಸ ಮೂಡಿಸಲಿ. ದೇಶವು ಮೊದಲಿನಂತೆ ಸುಭೀಕ್ಷವಾಗಲಿ. ಕೊರೊನಾ ನೀಡಿದ ಸಂದೇಶವು ಪ್ರತಿಯೊಬ್ಬರಿಗೂ ಮನದಟ್ಟಾಗಲಿ ಹಾಗೂ ೨೦೨೧ನ್ನು ಧೈರ್ಯ ಭರವಸೆಯೊಂದಿಗೆ ಸ್ವಾಗತಿಸೋಣ.

- ಮೋಹಿನಿ ದಯಾನಂದ ರೈ, ಶಾಸ್ತಿçಹಳ್ಳಿ, ಪಾಲಿಬೆಟ್ಟ