ಮಡಿಕೇರಿ, ಡಿ. ೩೦: ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜನವರಿ ೧ ರಿಂದ (ನಾಳೆಯಿಂದ) ಪುನರಾರಂಭಿಸುವ ಕುರಿತು ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಶಾಲೆಗಳಲ್ಲಿ ೬ ರಿಂದ ೯ನೇ ತರಗತಿಯವರೆಗೆ ವಿದ್ಯಾಗಮ ಕಾರ್ಯಕ್ರಮದ ಪುನರಾರಂಭ ಹಾಗೂ ೧೦ನೇ ತರಗತಿಯನ್ನು ಪ್ರಾರಂಭಿಸಲು ಪರಿಷ್ಕರಿಸಿದ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಮಧ್ಯಂತರ ರಜೆಯ ನಂತರ ಜ. ೧ ರಿಂದ ಇಲಾಖಾ ಆದೇಶದಂತೆ ೧೦ನೇ ತರಗತಿ ಮತ್ತು ೧೨ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು. ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ಈಗಾಗಲೇ ಶಾಲಾ ಪ್ರಾರಂಭೋತ್ಸವಕ್ಕೆ ಅಗತ್ಯ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ವಿದ್ಯಾಗಮ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಲಾ ಮಟ್ಟದಲ್ಲಿ ಈ ಕೆಳಗಿನಂತೆ ಕ್ರಮವಹಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ.
ಶಿಕ್ಷಕರಿಗೆ ವೈದ್ಯಾಧಿಕಾರಿಗಳಿಂದ ಕೋವಿಡ್ ಪರೀಕ್ಷೆ ಮಾಡಿಸಲು ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ನಗರ ಪ್ರದೇಶಗಳಲ್ಲಿ ನಗರಪಾಲಿಕೆ, ನಗರಸಭೆ, ಪುರಸಭೆ ವತಿಯಿಂದ ಶಾಲೆಗಳಲ್ಲಿ ಸ್ಯಾನಿಟೈಸೇಷನ್ ವ್ಯವಸ್ಥೆ ಮಾಡಿಸಲು ಸಂಬAಧಿಸಿದವರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ವಾರದಲ್ಲಿ ಮೂರು ಬಾರಿ ಅಂದರೆ ದಿನ ಬಿಟ್ಟು ದಿನ ಶಾಲೆಗಳ ಸ್ಯಾನಿಟೈಸೇಷನ್ಗೆ ವ್ಯವಸ್ಥೆ ಮಾಡಿಸಲು ಸೂಚಿಸಿದೆ.
ಲಭ್ಯವಿರುವ ಅನುದಾನವನ್ನು ಬಳಸಿ ಸ್ವಚ್ಛ ಹಾಗೂ ನಿರಂತರ ನೀರಿನ ಸೌಲಭ್ಯವಿರುವಂತೆ ಶೌಚಾಲಯವನ್ನು ಸಿದ್ಧಗೊಳಿಸಲು ಸೂಚಿಸಿದೆ. ಕುದಿಸಿ ಆರಿಸಿದ ನೀರನ್ನು ವಿದ್ಯಾರ್ಥಿಗಳು ಮನೆಯಿಂದ ಕಡ್ಡಾಯವಾಗಿ ತರುವಂತೆ ತಿಳಿಸಲಾಗಿದೆ. ಆದರೂ ಅಗತ್ಯವಿದ್ದರೆ ನೀರು ಕುದಿಸಲು ಅಕ್ಷರ ದಾಸೋಹದ ಸೌಲಭ್ಯಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಪೋಷಕರ ಸಭೆಯನ್ನು ಕರೆದು ಮಕ್ಕಳ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಲಾಗಿದೆ. ಹಾಗೂ ವಿದ್ಯಾಗಮ, ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಲು ತಮ್ಮ ಒಪ್ಪಿಗೆ ಸೂಚಿಸುವ ಪತ್ರವನ್ನು ಪಡೆದುಕೊಳ್ಳಲು ಸೂಚಿಸಿದೆ.
ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶಕ್ಕೆ ಮುನ್ನ ಆರೋಗ್ಯ ತಪಾಸಣೆ ನಡೆಸಲು ಬೇಕಾಗುವ ಥರ್ಮಲ್ ಸ್ಕಾö್ಯನರ್ಗಳನ್ನು ಗ್ರಾಮ ಪಂಚಾಯಿತಿ, ದಾನಿಗಳು, ಸಂಘ-ಸAಸ್ಥೆಗಳಿAದ ಅಥವಾ ಶಾಲೆಯಲ್ಲಿ ಲಭ್ಯವಿರುವ ಅನುದಾನದಿಂದ ಬಳಸಿಕೊಳ್ಳಲು ತಿಳಿಸಲಾಗಿದೆ.
ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಇತರೆ ಪರ್ಯಾಯ ವಿಧಾನದಿಂದ ಕಲಿಕೆಯನ್ನು ಮುಂದುವರಿಸಲು ಸೂಚಿಸಿದೆ. ಪ್ರತಿ ಶಾಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡುವುದು. ಕೋವಿಡ್ ೧೯ ರ ಲಕ್ಷಣಗಳು ಕಂಡುಬAದ ಶಿಕ್ಷಕರು ಅಥವಾ ವಿದ್ಯಾರ್ಥಿಗಳನ್ನು ಈ ಕೊಠಡಿಯಲ್ಲಿ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಲಾಗುವುದು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ವಿದ್ಯಾರ್ಥಿಗಳನ್ನು ಶಾಲೆಯಲ್ಲಿರುವ ಶಿಕ್ಷಕರು ಅಥವಾ ತರಗತಿ ಕೊಠಡಿಗಳಿಗನುಸಾರವಾಗಿ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ಮಾಡಲು ತಿಳಿಸಲಾಗಿದೆ. ಪ್ರತೀ ತಂಡದಲ್ಲಿ ಗರಿಷ್ಠ ೧೫ ರಿಂದ ೨೦ ವಿದ್ಯಾರ್ಥಿಗಳು ಇರಬಹುದು. ೮ ಮತ್ತು ೯ನೇ ತರಗತಿಗೆ ವಿದ್ಯಾಗಮವನ್ನು ದಿನಬಿಟ್ಟು ದಿನ ಅಪರಾಹ್ನ ೨ ರಿಂದ ೪.೩೦ ರವರೆಗೆ ೩ ಅವಧಿಯಲ್ಲಿ ನಡೆಸಲಾಗುವುದು.
೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರ್ವಾಹ್ನ ತರಗತಿಗಳನ್ನು ನಡೆಸುವುದು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಿನಬಿಟ್ಟು ದಿನ ಪೂರ್ವಾಹ್ನ ೧೦ ರಿಂದ ೧೨.೩೦ ವರೆಗೆ ೩ ಅವಧಿಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.