ಕುಶಾಲನಗರ, ಡಿ ೩೦: ಮತ ಎಣಿಕೆ ಕೇಂದ್ರದಲ್ಲಿ ಸಮಸ್ಯೆಗಳೊಂದಿಗೆ ಕೆಲವು ಸ್ವಾರಸ್ಯಕರ ಘಟನೆಗಳು ಕೂಡ ನಡೆದವು. ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆAದು ಮೀಸಲಿಟ್ಟ ಉಪಹಾರವನ್ನು ಅಭ್ಯರ್ಥಿಗಳ ಬೆಂಬಲಿಗರು ಖಾಲಿ ಮಾಡಿದ ಪ್ರಸಂಗ ನಡೆಯಿತು. ಈ ಸಂದರ್ಭ ಕಕ್ಕಾಬಿಕ್ಕಿಯಾದ ಆಹಾರ ಸರಬರಾಜುದಾರ ತಕ್ಷಣ ಅನ್ನಸಾಂಬಾರು ಮಾಡಿ ಬಡಿಸಿದ ದೃಶ್ಯ ಕಂಡುಬAತು.
ಇವೆಲ್ಲದರ ನಡುವೆ ಸೋಮವಾರಪೇಟೆ ತಾಲೂಕಿನ ಎಲ್ಲೆಡೆಗಳಿಂದ ಆಗಮಿಸಿದ ಅಭ್ಯರ್ಥಿಗಳ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ನೆರೆದ ಹಿನ್ನಲೆಯಲ್ಲಿ ಮುಳ್ಳುಸೋಗೆಯಿಂದ ಹಾರಂಗಿಗೆ ತೆರಳುವ ರಸ್ತೆ ಕಿಮೀ ಗಟ್ಟಲೆ ದೂರದ ತನಕ ವಾಹನಗಳು ಮತ್ತು ಜನರಿಂದ ‘ಜಾಂ’ ಆಗಿತ್ತು. ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ತುರ್ತು ವಾಹನಗಳು ತೆರಳಲು ಕಷ್ಟಸಾಧ್ಯವಾಗಿತ್ತು. ಈ ನಡುವೆ ಪೊಲೀಸ್ ಅಧಿಕಾರಿಯೊಬ್ಬರು ಸಿದ್ದಾಪುರದ ಪತ್ರಕರ್ತ ಅಜೀಜ್ ಎಂಬವರನ್ನು ತಳ್ಳಾಡಿದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಕೂಡ ತರಲಾಯಿತು. ಮಾಧ್ಯಮ ಪಾಸ್ ತೋರಿಸಿದರೂ ಉದ್ದಟತನ ತೋರಿದ್ದಾರೆ ಎಂದು ಅಜೀಜ್ ಆರೋಪಿಸಿದರು.