ಮಡಿಕೇರಿ, ಡಿ. ೨೯: ಜಿಲ್ಲೆಯ ಹಲವೆಡೆಗಳಲ್ಲಿ ಅದರಲ್ಲೂ ದಕ್ಷಿಣ ಕೊಡಗಿನ ಅರಣ್ಯದಂಚಿನ ಪ್ರದೇಶಗಳ ಗ್ರಾಮಗಳಲ್ಲಿ ಆಗಿಂದಾಗ್ಗೆ ಹುಲಿರಾಯ ಪ್ರತ್ಯಕ್ಷವಾಗುತ್ತಿದ್ದು, ಜನತೆಯಲ್ಲಿ ಆತಂಕವುAಟಾಗುತ್ತಿದೆ. ನಾಡಿನತ್ತ ಲಗ್ಗೆಯಿಡುತ್ತಿರುವ ವ್ಯಾಘ್ರನ ಹೊಟ್ಟೆಗೆ ರೈತರು ಸಾಕಿ ಬೆಳೆಸುತ್ತಿರುವ ಜಾನುವಾರುಗಳು ಬಲಿಯಾಗುತ್ತಿವೆ. ಇದಕ್ಕೆ ಕಾರಣಗಳನ್ನು ವಿಶ್ಲೇಷಿಸಿದಾಗ ಪರಿಣಿತರ, ಅರಣ್ಯ ಇಲಾಖೆಯವರ ಗಮನಕ್ಕೆ ಬಂದಿರುವAತೆ ವ್ಯಾಘ್ರ ನಾಡಿನತ್ತ ಹೆಜ್ಜೆಯಿಡಲು ವಯಸ್ಸು ಹಾಗೂ ಯಾವುದಾದರೊಂದು ರೀತಿಯಲ್ಲಿ ತನ್ನ ಎಂದಿನ ಬೇಟೆಗೆ ಅಡ್ಡಿಯಾಗುವ ರೀತಿಯ ಅಸಾಮರ್ಥ್ಯ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಸಾಧಾರಣವಾಗಿ ಹುಲಿಯ ಆಯುಷ್ಯ ಅದು ಕಾಡಿನೊಳಗೆ ಇದ್ದರೆ ಗರಿಷ್ಠ ೧೫ ವರ್ಷ ಹಾಗೂ ಮೃಗಾಲಯದಲ್ಲಿ ಆಸರೆ ಪಡೆದಿದ್ದಲ್ಲಿ ಇನ್ನೊಂದು ಮೂರು ವರ್ಷ ಹೆಚ್ಚಾಗಬಹುದೆಂಬದು ಅಂದಾಜು.ಪ್ರಸ್ತುತ ದಕ್ಷಿಣ ಕೊಡಗಿನ ಹಲವು ಗ್ರಾಮಗಳಲ್ಲಿ ಕಳೆದ ಹಲವು ಸಮಯದಿಂದ ಹುಲಿಯ ಹಾವಳಿ ಪದೇ ಪದೇ ಮರುಕಳಿಸುತ್ತಿರುವುದು ಕಂಡುಬರುತ್ತಿದೆ. ಇಲ್ಲಿ ನಾಡಿನೊಳಗೆ ಬರುತ್ತಿರುವ ಹುಲಿಗಳ ಚಲನ-ವಲನಗಳನ್ನು ಅವಲೋಕಿಸಿದಾಗ ಅವುಗಳು

(ಮೊದಲ ಪುಟದಿಂದ) ಒಂದೋ ವಯಸ್ಸಿನ ಪ್ರಭಾವದಿಂದ ಬೇಟೆಯ ಶಕ್ತಿಯನ್ನು ಕಳೆದುಕೊಂಡಿ ರುವುದು ಅಥವಾ ಇನ್ಯಾವುದೇ ರೀತಿಯಲ್ಲಿ ಗಾಯಕ್ಕೆ ತುತ್ತಾಗಿ ಶಕ್ತಿ ಕುಂದಿರುವುದರಿAದ ಆಹಾರ ಅರಸಿ ಬರುತ್ತಿವೆ ಎನ್ನಲಾಗುತ್ತಿದೆ.

ಕಳೆದ ಮೇ ತಿಂಗಳಿನಲ್ಲಿ ಅರಣ್ಯ ಇಲಾಖೆ ಅತೀವ ಸಾಹಸ ತೋರಿ ಬೆಳ್ಳೂರು ಗ್ರಾಮದ ಕಾಫಿ ತೋಟ ವೊಂದರಲ್ಲಿ ಹುಲಿಯೊಂದನ್ನು ಸೆರೆ ಹಿಡಿದಿತ್ತು. ಇದರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅದರ ಹಲ್ಲಿನ ಭಾಗಕ್ಕೆ ಪೆಟ್ಟಾಗಿದ್ದು ಅದು ಅರಣ್ಯದೊಳಗೇ ತನ್ನ ಆಹಾರ ಕಂಡುಕೊಳ್ಳಲು ಕಷ್ಟಪಡುತ್ತಿತ್ತು ಎಂಬುದು ತಿಳಿದು ಬಂದಿತ್ತು. ಇದರ ಚಲನ-ವಲನಗಳು ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾ ದಲ್ಲೂ ಸೆರೆಸಿಕ್ಕಿದ್ದು ಅದನ್ನು ವೀಕ್ಷಿಸಿ ದಾಗ ಈ ಅಂಶ ಖಾತರಿಯಾಗಿತ್ತು.

ಇದೀಗ ಕೆಲದಿನಗಳ ಹಿಂದೆ ಶ್ರೀಮಂಗಲದಲ್ಲಿನ ಪಾಳುಬಾವಿ ಯೊಂದಕ್ಕೆ ಮತ್ತೊಂದು ಹುಲಿ ಬಿದ್ದು ಮೃತಪಟ್ಟಿದ್ದು, ಇದೂ ಕೂಡ ವಯಸ್ಸಾಗಿದ್ದ ಹುಲಿ ಎಂದು ತಿಳಿದು ಬಂದಿತ್ತು. ಎರಡು ವರ್ಷದ ಹಿಂದೆ ಕುರ್ಚಿ ಗ್ರಾಮದಲ್ಲಿ ಬೇರೆ ಪ್ರಾಣಿಗೆಂದು ಯಾರೋ ಹಾಕಿದ್ದ ಉರುಳಿಗೆ ಸಿಕ್ಕಿ ಮತ್ತೊಂದು ಹುಲಿಯೂ ಸಾವಿಗೀಡಾಗಿದ್ದು, ಇದರ ಕಥೆಯೂ ಇದೇ ಆಗಿತ್ತು.

ಇದೀಗ ಮೊನ್ನೆ ಮೊನ್ನೆ ತಾನೆ ಬಾಳಲೆಯಲ್ಲಿ ಮತ್ತೊಂದು ಹುಲಿ ಸೆರೆಯಾಗಿದೆ. ಇದೂ ಕೂಡ ಬೇರೆ ಪ್ರಾಣಿಗೆ ಇಟ್ಟಿದ್ದ ಉರುಳಿಗೆ ಸಿಕ್ಕಿ ಹಾಕಿಕೊಂಡು ಬಂಧಿಯಾಗಿದೆ. ಈ ಹುಲಿಯ ವಯಸ್ಸು ಕೂಡ ೧೧ ರಿಂದ ೧೨ ವರ್ಷವಾಗಿದ್ದು, ಇದಕ್ಕೂ ದೈಹಿಕ ಸಾಮರ್ಥ್ಯಕ್ಕೆ ಪೆಟ್ಟಾಗಿತ್ತು.

ಬಾಳೆಲೆಯಲ್ಲಿ ಸೆರೆಯಾದ ಹುಲಿಯ ಕುರಿತು ಅವಲೋಕನ ನಡೆಸಲಾಗಿದ್ದು, ಇದು ಸಾಧಾರಣವಾಗಿ ನಾಗರಹೊಳೆ, ಕಲ್ಲಳ್ಳ, ಆನೆಚೌಕೂರು, ಹುಣಸೂರು ವ್ಯಾಪ್ತಿಗಳಲ್ಲಿ ತಿರುಗಾಡುತ್ತಿದ್ದುದು ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಗೋಚರಿಸಿತ್ತು. ಮೇ ೨ ರಂದು ರಾಜಪುರದ ತೋಟವೊಂದರಲ್ಲೂ ಇದರ ಚಿತ್ರ ಕ್ಯಾಮರಾಕ್ಕೆ ಸಿಕ್ಕಿತ್ತೆನ್ನ ಲಾಗಿದೆ. ೨೦೧೯ರ ಡಿಸೆಂಬರ್‌ನಲ್ಲಿ ಪೊನ್ನಂಪೇಟೆ ವಿಭಾಗದಲ್ಲಿ ಜಾನುವಾರೊಂದು ಹುಲಿಗೆ ಬಲಿಯಾಗಿದ್ದು ಅದೂ ಕೂಡ ಇದೇ ವ್ಯಾಘ್ರವೆಂಬದು ತಿಳಿದು ಬಂದಿದೆ. ಇದು ಹೆಣ್ಣು ಹುಲಿಯಾಗಿದ್ದು, ಇದರ ಜೊತೆ ಅಂದಾಜು ಎರಡೂವರೆ ವರ್ಷದ ಮರಿಯೊಂದೂ ತಿರುಗಾಡುತ್ತಿತ್ತೆನ್ನಲಾಗಿದೆ. ಇದೀಗ ಈ ಮರಿಯ ಜಾಡು ಲಭ್ಯವಾಗಿಲ್ಲ.

ಅರಣ್ಯದೊಳಗೆ ಹುಲಿಗಳು ಇದ್ದಲ್ಲಿ ಅವುಗಳ ನಡುವೆ ‘ಟೆರಿಟೋರಿ ಯಲ್ ಫೈಟ್’ ಸಹಜವಾಗಿರುತ್ತವೆ. ಶಕ್ತವಾಗಿರುವ ಹುಲಿ ಅಸಾಮರ್ಥ್ಯವಿರುವ ಹುಲಿಗಳನ್ನು ದೂರ ಮಾಡಿಬಿಡುತ್ತವೆ. ಅದರಲ್ಲೂ ಗಂಡು ಹುಲಿ ಈ ಪರಿಸ್ಥಿತಿ ಎದುರಾದಲ್ಲಿ ಮೆಲ್ಲಮೆಲ್ಲಗೆ ಜನವಾಸವಿರುವ ನಾಡಿನತ್ತ ಹೆಜ್ಜೆ ಹಾಕಿ ಸುಲಭವಾಗಿ ಗದ್ದೆ, ತೋಟ, ಕೊಟ್ಟಿಗೆಗಳಲ್ಲಿ, ಪಾಳುಬಿದ್ದ ಜಾಗಗಳಲ್ಲಿ ಸಿಗುವ ಜಾನುವಾರು ಗಳನ್ನು ಕಬಳಿಸಲು ಮುಂದಾಗುತ್ತವೆ ಎಂದು ಹೇಳಲಾಗುತ್ತಿದೆ.

ಶಕ್ತಿ ಸಾಮರ್ಥ್ಯದಿಂದಿರುವ ಹುಲಿಗಳು ಅರಣ್ಯ ಬಿಟ್ಟು ಹೊರಬರು ವುದಿಲ್ಲ. ಒಂದು ವೇಳೆ ಬಂದರೂ ಅರಣ್ಯದ ಗಡಿಯಿಂದ ನಾಲ್ಕೆöÊದು ಕಿ.ಮೀ. ಕ್ರಮಿಸಿದರೂ ಮತ್ತೆ ಅರಣ್ಯ ದೊಳಗೇ ಹಿಂತಿರುಗಿ ಬಿಡುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ಹಿಂದೆ ಬೆಳ್ಳೂರು ಗ್ರಾಮದಲ್ಲಿ ಸೆರೆ ಹಿಡಿಯಲಾದ ಹುಲಿ, ಇತ್ತೀಚೆಗೆ ಬಾಳೆಲೆಯಲ್ಲಿ ಉರುಳಿಗೆ ಬಿದ್ದ ಹುಲಿ ಇದೀಗ ಕೂರ್ಗಳ್ಳಿಯ ಚಾಮುಂಡಿ ಹುಲಿ ಸಂರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಚೇತರಿಸಿಕೊಳ್ಳುತ್ತಿವೆ.

-ಶಶಿ ಸೋಮಯ್ಯ