ಮಡಿಕೇರಿ, ಡಿ. ೨೯ : ರಾಷ್ಟçಕವಿ, ವಿಶ್ವಮಾನವ ಕುವೆಂಪು ಅವರ ಜನ್ಮದಿನವನ್ನು ಕಸಾಪ ಕಚೇರಿಯಲ್ಲಿ ಆಚರಿಸಲಾಯಿತು. ಮಡಿಕೇರಿ ತಾಲೂಕು ಸಮಿತಿ ವತಿಯಿಂದ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಕುವೆಂಪು ಅವರ ಕುರಿತು ಮಾತನಾಡಿದರು. ಶ್ರೇಷ್ಠ ಕವಿ ಕುವೆಂಪು ತಮ್ಮ ಸಾಹಿತ್ಯ ಹಾಗೂ ಕವನಗಳ ಮೂಲಕ ನಾಡಿನ ಜನರನ್ನು ಬಡಿದೆಬ್ಬಿಸಿದಲ್ಲದೆ, ಜಗದಲ್ಲಿ ಬದಲಾವಣೆಯನ್ನು ತಂದ ಜಗದ ಕವಿ ಎಂದು ಬಣ್ಣಿಸಿದರು. ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ನಿರ್ದೇಶಕರುಗಳಾದ ಕೋಡಿ ಚಂದ್ರಶೇಖರ್, ಧನಂಜಯ, ತಾಲೂಕು ಗೌರವ ಕಾರ್ಯದರ್ಶಿ ಡಾ.ಕೂಡಕಂಡಿ ದಯಾನಂದ, ನಿರ್ದೇಶಕರುಗಳಾದ ಪರ್ಲಕೋಟಿ ಸುನಿತಾ ಪ್ರೀತು, ಭಾರತಿರಮೇಶ್, ಜಯಪ್ಪ, ಕಚೇರಿ ಸಿಬ್ಬಂದಿ ಶ್ವೇತಾ ಇದ್ದರು