ಮಡಿಕೇರಿ, ಡಿ. ೨೮: ಜಿಲ್ಲೆಯ ಪ್ರತಿಷ್ಠಿತ ಚಾರಣ ಪ್ರದೇಶಗಳಲ್ಲಿ ಒಂದಾದ ಮಡಿಕೇರಿಯ ನಿಶಾನಿ ಮೊಟ್ಟೆಯನ್ನೇರಲು ಸ್ಥಳೀಯರಿಗೆ ಪಂಚಾಯಿತಿಯ ಲಿಖಿತ ಅನುಮತಿ ಬೇಕಂತೆ!! ಇಲ್ಲವಾದರೆ, ಈ ಬೆಟ್ಟ ಪ್ರದೇಶದ ಒಂದಿAಚೂ ಜಾಗಕ್ಕೂ ಹಕ್ಕಿಲ್ಲದ ಹಾಗೂ ಯಾವುದೇ ರೀತಿಯ ಸಂಬAಧವಿಲ್ಲದ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ‘ತಾಜ್’ ರೆಸಾರ್ಟ್ ಅವರು ಸ್ಥಳೀಯರಿಗೂ ರೆಸಾರ್ಟ್ ದಾಟಿ ಬೆಟ್ಟ ಏರಲು ಬಿಡುವುದಿಲ್ಲ. ಈ ಸಂಬAಧ ‘ಕೊಡಗು ಜಿಲ್ಲಾ ಪೊಲೀಸ್’ ಬ್ಯಾರಿಕೇಡನ್ನು ರೆಸಾರ್ಟ್ ಪ್ರವೇಶದಲ್ಲಿ ಇರಿಸಿದ್ದು ಅನುಮತಿ ಪತ್ರ ಇದ್ದರೆ ಮಾತ್ರ ಒಳ ಪ್ರವೇಶಿಸಲು ಸಾಧ್ಯ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ. ಇತ್ತೀಚೆಗಷ್ಟೆ ಯಾರೊ ಕಿಡಿಗೇಡಿಗಳು ಚಾರಣಿಸಲೆಂದು ಇಲ್ಲಿಗೆ ಆಗಮಿಸಿ ‘ಸಿಗರೇಟ್’ ಒಂದನ್ನು ಬಿಸಾಡಿ ಕಾಡ್ಗಿಚ್ಚು ಪ್ರಾರಂಭಿಸಿದ್ದಾರAತೆ. ಆದ್ದರಿಂದ ಸ್ಥಳೀಯರಿಗೆ ಪ್ರವೇಶಿಸಲು ಬಿಡದೆ ಇರುವುದಾಗಿ ರೆಸಾರ್ಟ್ ಸಿಬ್ಬಂದಿಯ ಸಮರ್ಥನೆ. ಯಾರೋ ಮಾಡಿದ ತಪ್ಪಿಗೆ ಚಾರಣಾಸಕ್ತರಿಗೆ ಪ್ರವೇಶ ನಿರ್ಬಂಧಿಸುವುದು ಎಷ್ಟು ಸರಿ ಎಂಬುದು ಚಾರಣಿಗರ ಪ್ರಶ್ನೆ. ನೈಜ ಚಾರಣಿಗರು ಆಸಕ್ತಿಯಿಂದ ಇಷ್ಟು ದೂರ ಆಗಮಿಸಿ ಹಿಂತೆರಳಬೇಕೆAದರೆ ಹೇಗಾಗಬಾರದು?
‘ತಾಜ್’ ಗ್ರಾಹಕರಿಗೆ ಯಾವುದೇ ನಿರ್ಬಂಧವಿಲ್ಲ
ಸ್ಥಳೀಯರಿAದ ಮಾತ್ರ ಬೆಟ್ಟದಲ್ಲಿ ಧೂಮಪಾನವಾಗುತ್ತದೆ, ಕಾಡ್ಗಿಚ್ಚು ಪ್ರಾರಂಭವಾಗುತ್ತದೆ ಎಂಬುದು ರೆಸಾರ್ಟ್ ಸಿಬ್ಬಂದಿಯ ಮನೋಭಾವ. ಹೌದು, ಇದು ಪ್ರತ್ಯಕ್ಷದರ್ಶಿಗಳ ನೈಜ ಅನುಭವ. ಚಾರಣಿಸಲು ಸ್ಥಳೀಯರು ಅವಕಾಶ ವಂಚಿತರಾದರೆ ರೆಸಾರ್ಟ್ ಗ್ರಾಹಕರು ಮಾತ್ರ ರಾಜಾರೋಷವಾಗಿ ಬೆಟ್ಟ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ. ಇವರಿಗೆ ಯಾವುದೇ ನಿರ್ಬಂಧವಿಲ್ಲ. ಇವರುಗಳಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲವೆಂಬAತೆ ರೆಸಾರ್ಟ್ ಗ್ರಾಹಕರ ಗುಂಪು ಮಾತ್ರ ಬೆಟ್ಟ ಪ್ರದೇಶದಲ್ಲಿ ಚಾರಣಿಸುತ್ತಿದ್ದಾರೆ.ಪೊಲೀಸ್ ಬ್ಯಾರಿಕೇಡ್ ಯಾರಪ್ಪ ಕೊಡ್ತಾರೆೆ?
ರೆಸಾರ್ಟ್ ಪ್ರವೇಶದಲ್ಲಿ ‘ಕೊಡಗು ಜಿಲ್ಲಾ ಪೊಲೀಸ್’ ಬ್ಯಾರಿಕೇಡ್ ಇದ್ದು, ಇದರ ಆಧಾರದ ಮೇಲೆ ಸ್ಥಳೀಯರಿಗೆÉ ರೆಸಾರ್ಟ್ನವರು ಮಂಗ ಮಾಡುತ್ತಿದ್ದಾರೊ ಎಂಬುದು ತಿಳಿದಿಲ್ಲ. ಬ್ಯಾರಿಕೇಡ್ ನೋಡಿದಾಕ್ಷಣ ನಿರ್ಬಂಧ ಹೇರಿರುವುದು ಅಧಿಕೃತವೆಂಬAತೆ ಸ್ಥಳೀಯ ಚಾರಣಿಗರು ಹಿಂತೆರಳುವ ಯೋಚನೆ ಮಾಡುತ್ತಾರೆ. ಆದರೆ ಪೊಲೀಸ್ ಇಲಾಖೆಗೆ ಬೆಟ್ಟ ಪ್ರದೇಶದ ಯಾವುದೇ ಸಂಬAಧವಿಲ್ಲ. ಲಾಕ್ಡೌನ್ ಅವಧಿಯಲ್ಲಿ ಮಾತ್ರ ಪ್ರವಾಸಿಗರ ನಿಷೇಧಕ್ಕಾಗಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ
(ಮೊದಲ ಪುಟದಿಂದ) ಬ್ಯಾರಿಕೇಡ್ ಅಳವಡಿಸಿದ್ದು ಇದೀಗ ಯಾವುದೇ ಬ್ಯಾರಿಕೇಡ್ ಹಾಕಲು, ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಲು ಪೊಲೀಸ್ ಇಲಾಖೆಗೆ ಯಾವುದೇ ಅಧಿಕಾರವಿಲ್ಲವೆಂಬುದು ಪೊಲೀಸ್ ಇಲಾಖಾ ಮೂಲಗಳಿಂದ ತಿಳಿದುಬಂದಿದೆ. ಲಾಕ್ಡೌನ್ ಅವಧಿಯಲ್ಲಿ ನೀಡಲಾದ ಬ್ಯಾರಿಕೇಡ್ ಅನ್ನೆ ರೆಸಾರ್ಟ್ನವರು ಉಪಯೋಗಿಸುತ್ತಿದ್ದಾರೆಯೋ ಎಂಬುದು ಸ್ಥಳೀಯರ ಸಂಶಯವಾಗಿದೆ.
ಗೊಂದಲದ ಹೇಳಿಕೆಗಳು
ರೆಸಾರ್ಟ್ ದ್ವಾರದಲ್ಲಿನ ಸಿಬ್ಬಂದಿಯAತು ಸ್ಥಳೀಯರಿಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೊದಲಿಗೆ ಪಂಚಾಯಿತಿ ಅನುಮತಿ ಬೇಕು, ಮತ್ತೊಮ್ಮೆ ಅರಣ್ಯ ಇಲಾಖೆಯ ಅನುಮತಿ ಇದ್ದರೆ ಮಾತ್ರ ಪ್ರವೇಶ. ಅವರೇ ಬ್ಯಾರಿಕೇಡ್ ಹಾಕಿದ್ದಾರೆ ಎಂಬುದು ಇಲ್ಲಿನ ಸಿಬ್ಬಂದಿಗಳು ಹೇಳುತ್ತಾರೆ. ಪೊಲೀಸ್ ಬ್ಯಾರಿಕೇಡನ್ನು ಅರಣ್ಯ ಇಲಾಖೆಯವರಾದರು ಯಾಕೆ ಹಾಕುತ್ತಾರೆ?! ಅವರಿಗೆ ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಯಾರು ಕೊಡ್ತಾರೆ?
ಮಾಹಿತಿಯೇ ಇಲ್ಲ
ಅತ್ಯಂತ ಸುಂದರವಾದ ಪ್ರದೇಶವಾದ ನಿಶಾನಿ ಮೊಟ್ಟೆಯ ‘೩೬೦ ಡಿಗ್ರಿ’ ಬೆಟ್ಟ ಗುಡ್ಡಗಳ ನೋಟ ನೋಡಲು ಪ್ರವಾಸಿಗರು ಸೇರಿದಂತೆ ಸ್ಥಳೀಯರು ವರ್ಷಪೂರ್ತಿ ಆಗಮಿಸುತ್ತಾರೆ. ಒಂದು ಬಾರಿ ನೋಡಿ ತೃಪ್ತರಾಗದೆ ಹಲವಷ್ಟು ಬಾರಿ ಚಾರಣಿಸಲೆಂದು ಮತ್ತೆ ಮತ್ತೆ ಆಗಮಿಸುವವರೂ ಇದ್ದಾರೆ. ಆದರೆ ಪ್ರವೇಶ ನಿರ್ಬಂಧದ ಯಾವುದೇ ಮಾಹಿತಿ ಇಲ್ಲದ ಕಾರಣ ಇಲ್ಲಿಗೆ ಆಗಮಿಸಿದ ಬಳಿಕ ಬ್ಯಾರಿಕೇಡ್ ನೋಡಿ ವಾಪಸ್ಸು ಹೋದವರ ಸಂಖ್ಯೆ ಹೆಚ್ಚಿದೆ.
ಇರ್ಪು ಫಾಲ್ಸ್ ಮಾದರಿ
ಕೆಲ ಕಿಡಿಗೇಡಿಗಳು ಪರಿಸರದ ಒಡಲಿನಲ್ಲಿ ಮೋಜು ಮಸ್ತಿಗೆ ಬಂದು ಪ್ಲಾಸ್ಟಿಕ್ ಎಸೆಯುವುದು, ಧೂಮಪಾನ ಮಾಡುವುದನ್ನೇ ಕಾರಣ ನೀಡಿ ಪ್ರವಾಸಿ ಸ್ಥಳಗಳಿಗೆ ಪ್ರವೇಶವನ್ನೇ ನಿರ್ಬಂಧಿಸುವುದು ಎಷ್ಟು ಸರಿ? ನಿರ್ಬಂಧ ವಿಧಿಸುವವರಾದರು ಸ್ವಲ್ಪ ಗಮನಿಸಬೇಕಲ್ಲ. ದಕ್ಷಿಣ ಕೊಡಗಿನ ಇರ್ಪು ಜಲಪಾತ ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮ ಮೆಚ್ಚಬೇಕು. ಇಲ್ಲಿನ ಪ್ರವೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪ್ರವಾಸಿಗರಾಗಲಿ, ಸ್ಥಳೀಯರಾಗಲಿ ಪ್ಲಾಸ್ಟಿಕ್ ಸೇರಿದಂತೆ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಪದಾರ್ಥಗಳನ್ನು ಜಲಪಾತ ವೀಕ್ಷಣೆಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಇದರಿಂದ ನೈಜ ಪರಿಸರ ಪ್ರೇಮಿಗಳ ಪರಿಸರ ವೀಕ್ಷಣೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ. ಇದರೊಂದಿಗೆ ಅರಣ್ಯ ಇಲಾಖೆಗೂ ಇಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಮೂಲಕ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವುದನ್ನು ತಪ್ಪಿಸಬಹುದಾಗಿದೆ.
ಪೊಲೀಸ್ ಅಧಿಕಾರಿ ಸ್ಪಷ್ಟನೆ
ಈ ವಿದ್ಯಮಾನದ ಕುರಿತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೇಕಲ್ ನವೀನ್ ಕುಶಾಲಪ್ಪ ಅವರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ದಿವಾಕರ್ ಅವರನ್ನು ಸಂಪರ್ಕಿಸಿದಾಗ ಪೊಲೀಸ್ ಇಲಾಖೆಯಿಂದ ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಚೇಂಬರ್ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಅವರು ಸ್ಥಳಕ್ಕೆ ತೆರಳಿ ಪ್ರಶ್ನಿಸಿದಾಗ ಹೊಟೇಲ್ ಸಿಬ್ಬಂದಿ ಚಾರಣಕ್ಕೆ ಯಾರಿಗೂ ಅನುಮತಿ ಇಲ್ಲದೆ ಪ್ರವೇಶವಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ.